ಲೋಕದರ್ಶನ ವರದಿ
ಗದಗ 19: ರಾಜ್ಯದಲ್ಲಿ ಪ್ರಸ್ತುತ ಶಿಕ್ಷಕರ ಸ್ಥಿತಿ ದಯನೀಯವಾಗಿದೆ. ಇದಕ್ಕೆ ನಿದರ್ಶನವೆಂದರೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಬಿಡುಗಡೆಮಾಡದೇ ಶಿಕ್ಷಕರು ಪಾಠದತ್ತ ಲಕ್ಷ ಕೊಡುತ್ತಿಲ್ಲ. ಇದರ ಪರಿಣಾಮದಿಂದ ಗುಣಮಟ್ಟದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ವಿಧಾನಪರಿಷತ್ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಡಾ.ಬಸವರಾಜ ಧಾರವಾಡ ಅವರ ನಿವಾಸದಲ್ಲಿ ಶಿಕ್ಷಕರು ನೀಡಿದ ಮನವಿ ಹಾಗೂ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.
ಕಳೆದ ಒಂದೂವರೆ ವಷರ್ದದಿಂದ ಶಿಕ್ಷಣ ಇಲಾಖೆ ಸಚಿವರಿಲ್ಲದೇ, ಅಧಿಕಾರಿಗಳು ಹೇಳಿದ್ದೇ ಆಟವಾಗಿದೆ. ಹೀಗಾಗಿ ಇಲ್ಲಿಯವರೆಗೆ ಶಿಕ್ಷಕರ ವೇತನವಾಗಲೀ, ಅವರ ಸಮಸ್ಯೆಗಳಿಗೆ ಸ್ಪಂದಿಸುವುದಾಗಲೀ ವಿದ್ಯಾಥರ್ಿಗಳಿಗೆ ಸೈಕಲ್, ಪಠ್ಯಪುಸ್ತಕ, ಶೂ, ಸಾಕ್ಸ್ ಹಗೂ ಪಠ್ಯೇತರ ಸಾಮಗ್ರಿಗಳು ಬರದಿರುವುದು ಶೋಚನೀಯವಾಗಿದೆ ಎಂದು ಅವರು ಹೇಳಿದರು.
ಗುಣಮಟ್ಟದ ಶಿಕ್ಷಣವನ್ನು ಶಿಕ್ಷಣ ಇಲಾಖೆ ಅಪೇಕ್ಷಿಸುತ್ತದೆ. ಆದರೆ, ಶಿಕ್ಷಣ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ನಿಮರ್ಿಸುವಲ್ಲಿ ಸರಕಾರ ಹಾಗೂ ಶಿಕ್ಷಣ ಇಲಾಖೆ ವಿಫಲವಾಗಿದೆ ಎಂದು ಖಂಡಿಸಿದ ವಿಧಾನ ಪರಿಷತ್ ಹಿರಿಯ ಸದಸ್ಯರಾದ ಬಸವರಾಜ ಧಾರವಾಡ ಅವರು, ಇದೇ ರೀತಿ ಮುಂದುವರೆದರೆ ಬರುವ ದಿನಗಳಲ್ಲಿ ಸರಕಾರದ ವಿಳಂಭ ನೀತಿಯನ್ನು ವಿರೋಧಿಸಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕನರ್ಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗದಗ ಜಿಲ್ಲೆಯ ಹಿರಿಯ ಪತ್ರಕರ್ತ ಎಸ್.ವಿ. ಶಿವಪ್ಪಯ್ಯನಮಠ ಹಾಗೂ ಕನರ್ಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಘಟಕದ ಪರಿಷತ್ ಸದಸ್ಯರಾಗಿ ನೇಮಕವಾದ ಉಪತಹಸೀಲ್ದಾರ್ ಕುಮಾರ ಅಣ್ಣಿಗೇರಿ ಅವರನ್ನು ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ ಅವರು ಸನ್ಮಾನಿಸಿದರು.
ಡಾ.ಬಸವರಾಜ ಹೊರಟ್ಟಿ, ಎಸ್.ಎಂ. ಕೊಟಗಿ, ಎಸ್.ಎಂ. ಅಗಡಿ, ವಿ.ವಿ. ಬಳಿಗೇರ, ಜಯಲಕ್ಷ್ಮೀ ಅಣ್ಣಿಗೇರಿ, ಗೀತಾ ಭಿಕ್ಷಾವತಿಮಠ ಮುಂತಾದವರು ಉಪಸ್ಥಿತರಿದ್ದರು.