ಪ್ರವೀಣ್ ಘೋರ್ಪಡೆ
ತಾಳಿಕೋಟೆ 21: ತಾಳಿಕೋಟೆ ಸಮಿಪದ ಗೋಟಖಂಡ್ಕಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಸಲ ಬುಧವಾರರಂದು ಸಾಯಂಕಾಲ ಶ್ರೀ ಮಹಾದೇವಿ ತಾಯಿಯ ರಥೋತ್ಸವವು ಸುಮಂಗಲೆಯರಿಂದ ಎಳೆಯಲ್ಪಡುವದರೊಂದಿಗೆ ಜಾತ್ರಾ ಉತ್ಸವವು ವಿಜೃಂಬಣೆಯಿಂದ ಜರುಗಿತು.
ರಥೋತ್ಸವ ಅಂಗವಾಗಿ ಏರ್ಪಡಿಸಲಾದ 155 ನೇ ಶ್ರೀ ಮಹಾದೇವಿಯ ಮಹಾ ಪುರಾಣವು ಮಂಗಲಗೊಂಡಿತು.
ವಿಶೇಷ ವೆಂದರೆ ತಾಳಿಕೋಟೆ ಸಮಿಪದ ಈ ಗೋಟಖಂಡ್ಕಿ ಗ್ರಾಮದಲ್ಲಿ ನಿಮರ್ಾಣಗೊಂಡಿದ್ದ ಶ್ರೀ ಮಾತೆ ಮಹಾದೇವಿ ತಾಯಿಯ ಮಂದಿರಕ್ಕೆ ಅಲ್ಲಿ ವಿವಾಹವಾಗದ ಹೆಣ್ಣು ಮಕ್ಕಳು ಬೆಟ್ಟಿ ನೀಡಿ ತಮಗೆ ಪತಿಯ ಭಾಗ್ಯವನ್ನು ಅಪೇಕ್ಷೀಸಿದಲ್ಲಿ ಮಧುವೆ ಭಾಗ್ಯ ದೊರತೇ ದೊರೆಯುತ್ತದೆ ಎಂಬುದು ಈ ಭಾಗದಲ್ಲಿರುವ ಹಿರಿಯರ ಮಾತು.
ಸಚ್ಚಿದಾನಂದ ಮಠದಲ್ಲಿ ಚಿದಂಬರರಾವ್ ಕುಲಕಣರ್ಿ ಅವರ ಪರವಾಗಿ ಅವರ ಪುತ್ರ ಸುರೇಶರಾವ್ ಕುಲಕಣರ್ಿ ಅವರು ಈ ಶ್ರೀ ದೇವಿಯ ಮಹಾ ಪುರಾಣವನ್ನು ಮುಂದುವರೆಸಿಕೊಂಡು ಈಗಲೂ ಬಂದಿದ್ದಾರೆ.
ವಿಶೇಷವೆಂದರೆ ಶ್ರೀ ಮಹಾದೇವಿ ತಾಯಿಯ ಪುರಾಣವು ಪ್ರತಿ ವರ್ಷ ಮಹಾನವಮಿಯ ಅಮವಾಸ್ಯೆಯ ಮರುದಿನ ಪ್ರಾರಂಭಗೊಂಡು ದೀಪಾವಳಿ ನಂತರದ ದ್ವಾದಶಿ, ತ್ರಯೋದಶಿಯವರೆಗೆ ಜರುಗುತ್ತಾ ಸಾಗುತ್ತ ಬಂದಿದೆ.
ಈ ಗೋಟಖಂಡ್ಕಿ ಗ್ರಾಮದಲ್ಲಿ ಜನ್ಮ ತಾಳಿದ ಮಹಿಳೆಯರು ಪತಿಯ ಭಾಗ್ಯವನ್ನು ಅಪೇಕ್ಷೀಸಿ ಶ್ರೀ ಮಹಾದೇವಿ ತಾಯಿಯ ವರವನ್ನು ಪಡೆದು ತಮ್ಮ ಬೇಡಿಕೆಯನ್ನು ಇಡೇರಿಸಿಕೊಂಡು ತಮ್ಮ ಸುಖಃ ಸಂಸಾರವನ್ನು ಪತಿಯೊಂದಿಗೆ ತಮ್ಮ ತಮ್ಮ ಗ್ರಾಮ ಪಟ್ಟಣದ ಮನೆಗಳಲ್ಲಿ ಜೀವನ ಸಾಗಿಸುತ್ತಾ ಸಾಗಿಬಂದಿದ್ದರೂ ಸಹ ಪ್ರತಿ ವರ್ಷ ಈ ವರ ನೀಡಿದ ಶ್ರೀ ಮಹಾದೇವಿ ತಾಯಿಯನ್ನು ಮರೆಯದೇ ಆಕೆಯ ರಥೋತ್ಸವ ದಿನದಂದು ಆಗಮಿಸಿ ಎಲ್ಲ ಮುತ್ತೈದೆಯರು ಒಗ್ಗೂಡಿ ಪುರುಷರ ಆಸರೆ ಇಲ್ಲದೇ ರಥವನ್ನು ಎಳೆಯುವದರೊಂದಿಗೆ ತಮ್ಮ ಭಕ್ತಿಯನ್ನು ಪ್ರತಿ ವರ್ಷ ಸಮಪರ್ಿಸಿ ಸಾಗುತ್ತಿದ್ದಂತೆ ಈ ವರ್ಷವೂ ಸಹ ತಮ್ಮ ಭಕ್ತಿಯನ್ನು ಸಮಪರ್ಿಸಿರುವದು ಕಂಡುಬಂದಿತು.
ನೂತನ ರಥವನ್ನು ಕಳೆದ 13 ವರ್ಷಗಳ ಹಿಂದೆಯೇ ಈ ಗ್ರಾಮದಿಂದ ಮುತ್ತೈದೆ ತನದ ಭಾಗ್ಯವನ್ನು ಪಡೆದುಕೊಂಡ ಹೋದ ಸುಮಂಗಲೇಯರೆಲ್ಲರೂ ತಮ್ಮ ತಮ್ಮ ಪತಿಯ ಮನೆಯಿಂದಲೇ ದೇಣಿಗೆಯ ಹಣವನ್ನು ಸಂಗ್ರಹಿಸಿ ಎಲ್ಲರೂ ಒಗ್ಗೂಡಿ 2.75 ಲಕ್ಷ ರೂ. ವೆಚ್ಚ ಭರಿಸಿ ಶ್ರೀ ಮಹಾದೇವಿ ತಾಯಿಯ ನೂತನ ರಥವನ್ನು ನಿಮರ್ಿಸಿದ್ದಾರೆ. ಈ ರಥವನ್ನು ಪ್ರತಿ ವರ್ಷ ಈ ಸುಮಂಗಲೇಯರೇ ಎಳೆದು ಭಕ್ತಿ ಸಮಪರ್ಿಸಿ ಸುಖಃ ಶಾಂತಿ ನೆಮ್ಮದಿಯನ್ನು ಅಪೇಕ್ಷಿಸಿ ವರ ಪಡೆದು ಸಾಗುತ್ತಿದಂತೆ ಈ ಸಲವೂ ಸಹ ಭಕ್ತಿ ಭಾವದಿಂದ ರಥವನ್ನು ಎಳೆದು ತಮ್ಮ ಭಕ್ತಿಯನ್ನು ಸಮಪರ್ಿಸಿದರು.
ಈ ರಥವು ಮಹಾದೇವಿ ತಾಯಿಯ ಮಂದಿರದಿಂದ ಸುಮಾರು 1 ಕೀಲೋ ಮೀಟರ್ ಅಂತರದಲ್ಲಿರುವ ಬಸವೇಶ್ವರ ಪಾದಗಟ್ಟೆಯ ವರೆಗೆ ತಲುಪಿ ಮರಳಿ ಶ್ರೀ ಅದೇ ಮಾರ್ಗದಿಂದ ದೇವಿಯ ಮಂದಿರಕ್ಕೆ ತಲುಪಿ ನಂತರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಈ ಜಾತ್ರಾ ಮಹೋತ್ಸವದಲ್ಲಿ ಮುಂಬಯಿ, ಪುಣೆ, ಸೋಲ್ಲಾಪೂರ, ಕೊಲ್ಲಾಪುರ, ಹೈದ್ರಾಬಾದ, ಕಲಬುಗರ್ಿ, ಹುಬ್ಬಳ್ಳಿ, ದಾರವಾಡ, ವಿಜಾಪೂರ ಮೊದಲಾದ ನಗರ ಪಟ್ಟಣಗಳ ಭಕ್ತ ಸಮೂಹದವರು ಪಾಲ್ಗೊಂಡಿದ್ದರು.