ಏಸು ಕ್ರಿಸ್ತನ ಜನ್ಮ ದಿನವನ್ನು ಬಹು ವಿಜೃಂಭಣೆ ಆಚರಣೆ
ರಾಣಿಬೆನ್ನೂರ 25: ಇಲ್ಲಿನ ಮಾನವಿ ಕಂಪನಿ ಹತ್ತಿದ ಒಳ್ಳೆ ಕುರುಬನ ದೇವಾಲಯದಲ್ಲಿ ಹಾಗೂ ಇಲ್ಲಿನ ಶಿದ್ದೇಶ್ವರ ನಗರದ ಸೇಂಟ್ ಜಾನ್ ಚರ್ಚನಲ್ಲಿ ಬುಧವಾರ ಕ್ರಿಶ್ಚಿಯನ್ ಸಮಾಜ ಬಾಂಧವರು ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಏಸು ಕ್ರಿಸ್ತನ ಜನ್ಮ ದಿನವನ್ನು ಬಹು ವಿಜೃಂಭಣೆಯಿಂದ ಆಚರಿಸಿದರು.
ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಜಗದೆಲ್ಲೆಡೆ ಶಾಂತಿಯನ್ನು ಬೆಳೆಸಲು, ಪ್ರೀತಿಯನ್ನು ಮೇಳೈಸಲು, ನಗರದ ಒಳ್ಳೆ ಕುರುಬನ ದೇವಾಲಯದಲ್ಲಿ ಫಾದರ್ ವಿವೇಕ ಕೊಳಚಿ ನೇತೃತ್ವದಲ್ಲಿ ಆರಾಧನಾ ಕಾರ‌್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.
ಬೆಳಿಗ್ಗೆ ಆರಾಧನಾ ಕಾರ‌್ಯಕ್ರಮ, ಸಂಗೀತ, ಕೀರ್ತನ ಕಾರ‌್ಯಕ್ರಮ ನಡೆಸಿಕೊಟ್ಟರು. ಮಹಿಳೆಯರು ಮತ್ತು ಮಕ್ಕಳಿಂದ ಮನರಂಜನಾ ಕಾರ‌್ಯಕ್ರಮ ನಡೆದವು. ನಂತರ ಅನಾಥರಿಗೆ ದಾನ ಧರ್ಮ ಕಾರ‌್ಯಕ್ರಮಗಳು ನೆರವೇರಿದವು. ಅನಂತರ ಸಿಹಿ ತಿಂಡಿ ಮತ್ತು ಹಣ್ಣು ಹಂಪಲ ವಿತರಣೆ ಮಾಡಲಾಯಿತು.
ಹೊಸ ಒಡಂಬಡಿಕೆ ಮತ್ತು ಹಳೇ ಒಡಂಬಡಿಕೆ ಬಗ್ಗೆ ಬೈಬಲ್ ಸಭೆಯಲ್ಲಿ ಹಿರಿಯರು ಬೈಬಲ್ ಓದುವ ಮೂಲಕ ಹಿತವಚನ ನುಡಿದರು. ನಂತರ ಒಬ್ಬರಿಗೊಬ್ಬರು ಕ್ರಿಸ್‌ಮಸ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸಭಾಂಗಣದಲ್ಲಿ ಕ್ರಿಸ್‌ಮಸ್ ಟ್ರೀಗೆ ಝಗಮಗಿಸುವ ದೀಪಾಲಂಕಾರ ಮಾಡಲಾಗಿತ್ತು.
ಸೇಂಟ್ ಜಾನ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಆಚರಣೆ: ಇಲ್ಲಿನ ಶಿದ್ದೇಶ್ವರ ನಗರದ ಸೇಂಟ್ ಜಾನ್ ಚರ್ಚನಲ್ಲಿ ಕ್ರಿಶ್ಚಿಯನ್ ಸಮಾಜದವರು ಪ್ರಾರ್ಥನೆ ಸಲ್ಲಿಸಿದರು. ಸೇಂಟ್ ಜಾನ್ ಚರ್ಚ್‌ನ ಆವರಣದಲ್ಲಿ ಗೋದಲಿ ನಿರ್ಮಿಸಲಾಗಿತ್ತು. ಫಾದರ್ ಅವರು ಯೇಸುವಿನ ಬಗ್ಗೆ ಪ್ರವಚನ ಮಾಡಿದರು. ಅಲ್ಲದೇ ಇವರ ನೇತೃತ್ವದಲ್ಲಿ ವಿವಿಧ ಕಾರ‌್ಯಕ್ರಮಗಳು ಅರ್ಥಪೂರ್ಣವಾಗಿ ನಡೆದವು.
ಫೋಟೊ:25ಆರ್‌ಎನ್‌ಆರ್03ರಾಣಿಬೆನ್ನೂರ: ಇಲ್ಲಿನ ಮಾನವಿ ಕಂಪನಿ ಹತ್ತಿದ ಚರ್ಚೆ ರಸ್ತೆಯ ಒಳ್ಳೆ ಕುರುಬನ ದೇವಾಲಯದಲ್ಲಿ ಕ್ರಿಶ್ಚಿಯನ್ ಸಮಾಜ ಬಾಂಧವರು ಏಸು ಕ್ರಿಸ್ತನ ಜನಮ್ಮ ದಿನವನ್ನು ಬಹು ವಿಜೃಂಭಣೆಯಿಂದ ಆಚರಿಸಿದರು.