ಯುಗಾದಿ ಪ್ರಾರಂಭದಿಂದ ಭಾರತೀಯರಿಗೆ ನೂತನ ವರ್ಷಾರಂಭ- ವಿನಾಯಕ ಶಾಸ್ತ್ರೀ
ಕುಕನೂರು 31: ಸನಾತನ ಧರ್ಮದಂತೆ ಯುಗಾದಿ ಪ್ರಾರಂಭದಿಂದ ಭಾರತೀಯರಿಗೆ ನೂತನ ವರ್ಷಾರಂಭವಾಗುತ್ತದೆ.ಇದಕ್ಕೆ ಸಾಕ್ಷಿಕರಿಸುವಂತೆ ಈ ವಸಂತ ಮಾಸ ಪ್ರಾರಂಭವಾಗುತ್ತಿದ್ದಂತೆ ಪರಿಸರದಲ್ಲಿನ ಎಲ್ಲಾ ಬದಲಾವಣೆಗಳನ್ನು ನಾವು ಕಾಣಬಹುದು. ಈ ಮಾಸ ಆರಂಭಕ್ಕೂ ಮುನ್ನ ಸಂಕ್ರಾಂತಿಗೆ ಸೂರ್ಯ ದೇವನು ತನ್ನ ಪಥವನ್ನು ಬದಲಾಯಿಸಿದರೇ, ಗಿಡ, ಮರ, ಬಳ್ಳಿಗಳು ಹೊಸ ಚಿಗುರಿನೊಂದಿಗೆ ನೂತನ ವರ್ಷವನ್ನು ಸ್ವಾಗತಿಸುತ್ತವೆ.
ಹೊಸ ಮಳೆಗಳು ಇಲ್ಲಿಂದಲೇ ಆರಂಭವಾಗವವು, ಇದರ ಜೊತೆಗೆ ಹಬ್ಬ ಹರಿದಿನ, ಜಾತ್ರೆ, ವಿವಾಹಗಳು, ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ. ಈ ನೂತನ ವರ್ಷಾರಂಭವಾಗುತ್ತಿದ್ದಂತೆ ಬಿರು ಬೇಸಿಗೆ ಕಾಲದಲ್ಲಿ ಹಲವಾರು ನವ ವಿವಾಹಿತ ನೂತನ ದಾಂಪತ್ಯಕ್ಕೆ ಕಾಲಿಡುತ್ತಾರೆ.ಈ ವರ್ಷಾರಂಭವು ಯುಗಾದಿ ಪಾಡ್ಯದಿಂದ ಪ್ರಾರಂಭಗೊಂಡು ಮುಂದಿನ ಯುಗಾದಿ ಅಮವಾಸ್ಯೆಯವರೆಗೆ ನಡೆವುದೇ ಸಂವತ್ಸರ, ಈ ಸಂವತ್ಸರದಲ್ಲಿ ನಡೆಯುವ ಆಗು, ಹೋಗು, ಶುಭ, ಅಶುಭ ಫಲಗಳನ್ನು ಹೇಳುವುದೇ ಪಂಚಾಂಗ ಪಠಣ.ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವು ಕೂಡಾ ಕುಕನೂರು ಪಟ್ಟಣದ ಮಹಾಮಾಯ ದೇವಸ್ಥಾನದ ಗುರುದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ವಿನಾಯಕ ಶಾಸ್ತ್ರೀಯವರಿಂದ ರವಿವಾರದಂದು ಸಾಯಂಕಾಲ ಪಂಚಾಂಗ ಪಠಣ ಕಾರ್ಯಕ್ರಮವು ಜರುಗಿತು. ಶ್ರೀಶಾಲಿವಾಹನ ಶಕೆ 1947ನೇ ವಿಶ್ವಾವಸುನಾಮ ಸಂವತ್ಸರವು ದಿ.30ರಿಂದ ಪ್ರಾರಂಭಗೊಳ್ಳುತ್ತದೆ.
ಇಲ್ಲಿಂದ ನೂತನ ವರ್ಷಾರಂಭವಾಗಿ ಮುಂದಿನ ವರ್ಷ 2026ರವರೆಗೆ ನಡೆಯುತ್ತದೆ. ಈ ಮದ್ಯೆ ವಿಶ್ವಾವಸುನಾಮ ಸಂವತ್ಸರ ನಡೆಯುತ್ತದೆ.ಈ ಸಂವಂತ್ಸರದ ಮಾಸ ಫಲಗಳು, ಗ್ರಹಣ ವಿಚಾರ, ಮಳೆ ವಿಚಾರ, ನವ ನಾಯಕರ ಫಲ, ಮಕರ ಸಂಕ್ರಾಂತಿ ಫಲ, ರಾಶಿಗಳ ಗ್ರಹಚಾರ ಫಲ, ಭೂ ಮಂಡಲದಲ್ಲಿ ಆಗುವ ಬದಲಾವಣೆಗಳ ಕುರಿತು ಪಂಚಾಂಗ ಮಾಹಿತಿಯನ್ನು ತಿಳಿಸಲಾಯಿತು.ರವಿವಾರ ಪಾಡ್ಯದಂದು ಮಹಾಮಾಯ ದೇವಿಗೆ ಹಾಗೂ ಗುರು ದತ್ತಾತ್ರೇಯರಿಗೆ ವಿಷೇಶ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ನಾಗರಾಜ ದೇಸಾಯಿ, ಶ್ರೀಪಾದ ದಿಕ್ಷೀತ್, ನರಹರಿ ದಿಕ್ಷೀತ್, ದತ್ತುರಾವ್ ಕುಲಕರ್ಣಿ, ಕೃಷ್ಣ ಪ್ರಸಾದ ಜೋಷಿ, ರಾಮಚಂದ್ರ ಹಳ್ಳಿ, ಅವಧೂತ ಆಶ್ರೀತ್, ಪ್ರಕಾಶ ಪಾಟೀಲ್, ವಿಠ್ಠಲ ದೇಸಾಯಿ, ರಮೇಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಅರ್ಜುನ್ ರಾವ್ ಕುಲಕರ್ಣಿ, ಸುರೇಶಬಾಬು ಪೂಜಾರ, ಗಿರಿಧರ್ ನಿಲೋಗಲ್ ಸೇರಿದಂತೆ ಇನ್ನಿತರರು ಇದ್ದರು.