ಜಗತ್ತಿನಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಸರ್ವಕಾಲಿಕ ಮನ್ನಣೆ: ಪ್ರೊ. ಸಂಗೀತ ಮಹಾವಿದ್ಯಾಲಯದ ಉಪನ್ಯಾಸಕರಾದ ಹಿರೇಮಠ

ಲೋಕದರ್ಶನ ವರದಿ

ಗದಗ 30: ಭಾರತದ ಅಭಿಜಾತ ಕಲೆಗಳಲ್ಲೊಂದಾದ ಶಾಸ್ತ್ರಬದ್ಧವಾದ ಶಾಸ್ತ್ರೀಯ ಸಂಗೀತಕ್ಕೆ ಜಗತ್ತಿನಲ್ಲಿ ಸರ್ವಕಾಲಿಕವಾದ ಮನ್ನಣೆ ಮತ್ತು ಕಲಾಪ್ರೇಮಿಗಳಿಂದ ಗೌರವಾದರಗಳಿವೆ ಎಂದು ಪಿ.ಪಿ.ಜಿ ಸಂಗೀತ ಮಹಾವಿದ್ಯಾಲಯದ ಉಪನ್ಯಾಸಕರಾದ ರಾಜೀವ ಹಿರೇಮಠ ಹೇಳಿದರು.

ಅವರು ಕಬ್ಬಿಗರ ಕೂಟದ ಸಾಹಿತ್ಯಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ನಾರಾಯಣಭಟ್ ಶಿವಪೂರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶಾಸ್ತ್ರೀಯ ಸಂಗೀತದ ಮೂಲವನ್ನು ಸಾಮವೇದಕ್ಕೆ ಕೊಂಡ್ಯೋಯ್ಯಬಹುದಾಗಿದೆ. 17ನೇ ಶತಮಾನದ ನಂತರ ಶಾಸ್ತ್ರೀಯ ಸಂಗೀತವು ಒಂದು ಶಿಸ್ತುಬದ್ಧ ಸ್ವರೂಪವನ್ನು ಪಡೆದು ವಿವಿಧ ಘರಾಣಾಗಳ ರೂಪದಲ್ಲಿ ಭಾರತದಾದ್ಯಂತ ಹರಡಿತು. ಶಾಸ್ತ್ರೀಯ ಸಂಗೀತ ಇಂದಿಗೂ ಪ್ರತಿಯೊಬ್ಬರನ್ನು ತಲೆದೂಗುವಂತೆ ಮಾಡುವ ಒಂದು ವಿಶಿಷ್ಟ ಶಕ್ತಿ ಅದಕ್ಕಿದೆ ಎಂದು ಹೇಳಿದರು.

ಶಾಸ್ತ್ರೀಯ ಸಂಗೀತದಲ್ಲಿ ಖಯಾಲ್ಗೆ ಮಹತ್ವವಿದ್ದು ಇಲ್ಲಿ ಪಠ್ಯವನ್ನು ಗಾಯಕನು ತನ್ನ ಕಲ್ಪನೆಯನ್ನು ಬೆರೆಸಿ ವಿಸ್ತರಿಸಿ ಹಾಡುವುದರಿಂದ ಕಲ್ಪನೆಗೆ ಮಹತ್ವವಿದೆ ಹೀಗಾಗಿ ಪ್ರತಿಯೊಂದು ರಾಗವು ಒಬ್ಬ ಗಾಯಕನ ಧ್ವನಿಯಲ್ಲಿ ಹೊಸ ರೂಪವನ್ನು ಪಡೆದು ಪ್ರೇಕ್ಷಕರಿಗೆ ಆನಂದಾನುಭೂತಿಯನ್ನು ಉಂಟುಮಾಡುತ್ತದೆ ಎಂದು ಹೇಳಿದರಲ್ಲದೇ ಉತ್ತರ ಕನರ್ಾಟಕವು ಹಿಂದುಸ್ಥಾನಿ ಗಾಯನದ ಕೇಂದ್ರ ಸ್ಥಾನವಾಗಿದೆ ಇಲ್ಲಿ ಪೂಜ್ಯ ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು, ಭಾರತ ರತ್ನ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ, ಮಲ್ಲಿಕಾಜರ್ುನ ಮನ್ಸೂರರಂತಹ ಹಲವಾರು ಕಲಾವಿದರಿಗೆ ಜನ್ಮ ನೀಡಿದ ಕಲಾಗಂಗೋತ್ರಿಯಾಗಿದೆ ಎಂದು ಹೇಳಿದರು.

ದತ್ತಿ ದಾನಿಗಳ ಕುರಿತು ಸನ್ಮಾರ್ಗ ಪ.ಪೂ ಕಾಲೇಜಿನ ಉಪನ್ಯಾಸಕ ಮುರಲೀಧರ ಸಂಕನೂರ ಮಾತನಾಡಿ ಹಿರಿಯ ಹೊಟೆಲ್ ಉದ್ಯಮಿಯಾಗಿದ್ದ ನಾರಾಯಣಭಟ್ ಶಿವಪುರ ಅವರು ಶ್ರಮ ಸಂಸ್ಕೃತಿ ಮತ್ತು ಕಾಯಕ ತತ್ವಕ್ಕೆ ಹೆಸರಾದವರು. ಒಬ್ಬ ಸಾಮಾನ್ಯ ಮಾಣಿಯಾಗಿ ಗದುಗಿಗೆ ಆಗಮಿಸಿದ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಸತತ ದುಡಿಮೆಯಿಂದ ಯಶಸ್ವಿ ಉದ್ಯಮಿಯಾಗಿ ಬೆಳೆದರು. ದಾನ ಧರ್ಮ, ಸಾಹಿತ್ಯ ಪ್ರೀತಿ ಮತ್ತು ಸಾಮಾಜಿಕ ಕಾರ್ಯಗಳಿಗೆ ಹೆಸರಾದ ಮಹನೀಯರು ಸದಾ ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ದತ್ತಿ ದಾನಿಗಳಾದ ಡಾ.ಅನಂತ ಶಿವಪುರ, ಹಾಗೂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ಸಾಹಿತಿಗಳಾದ ಆಯ್.ಕೆ.ಕಮ್ಮಾರ, ನಾರಾಯಣ ಭಟ್ ಶಿವಪುರ ಅವರ ಸಾಹಿತ್ಯ ಆಸಕ್ತಿ ಮತ್ತು ಅವರೊಂದಿಗಿನ ಒಡನಾಟದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಶರಣು ಗೋಗೇರಿ, ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸಗಳ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರ ಸ್ಮರಣೆಯನ್ನು ಮಾಡುತ್ತಿದೆ. ಇಂತಹ ಉಪನ್ಯಾಸಗಳ ನಿರಂತರ ಆಯೋಜನೆಗೆ ದಾನಿಗಳು ಮುಂದೆ ಬರಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಲಹಾ ಮಂಡಳಿಯ ಹಿರಿಯರಾದ ಎ ಓ ಪಾಟೀಲ, ಅಂದಾನಪ್ಪ ವಿಭೂತಿ, ಡಿ ವಿ ಬಡಿಗೇರ, ಮನೋಹರ ಮೇರವಾಡೆ, ರತ್ನಕ್ಕ ಪಾಟೀಲ, ಪ್ರೋ ಅನಿಲ ವೈದ್ಯ, ಡಿ ಎಲ್ ಪಾಟೀಲ ಬಿ ಎಫ್ ಪೂಜಾರ, ಕೆ ವಿ ಕುಂದಗೋಳ, ಡಾ. ವಾಣಿ ಅನಂತ ಶಿವಪೂರ, ರಮೇಶ ಶಿವಪೂರ, ಡಾ. ಅದ್ವೈತ ಶಿವಪೂರ, ಕಳಕಪ್ಪ ಬೆನಕನವಾರಿ, ಬಸವರಾಜ ವಾರಿ, ಸಿ ಕೆ ಕೇಸರಿ, ಹೆಚ್ ಚಂದ್ರಪ್ಪ, ಜ್ಯೋತಿ ಹೇರಲಗಿ, ಮಂಗಳಗೌರಿ ಹಿರೇಮಠ, ಬಿ ಎಫ್ ಹಿರೇಮಠ, ಪಿ ಟಿ ನಾರಾಯಣಪೂರ, ಮಲ್ಲಿಕಾಜರ್ುನ ನಿಂಗೋಜಿ, ಈಶ್ವರ ಹಾದಿಮನಿ, ವಿ ಬಿ ಮಲ್ಲಾಪೂರ, ಹೆಚ್ ಎಸ್ ದಳವಾಯಿ, ಶೋಭಾ ಶಿವಪೂರ, ಜಯಶ್ರೀ ಅಂಗಡಿ, ಜೆ ಎ ಪಾಟೀಲ, ರವಿರಾಜ ಪವಾರ, ಆನಂದ ಕಲ್ಮಠ, ಹೆಚ್ ಬಿ ತೋಟದ, ಜಗದೀಶ ದಿನ್ನಿ, ಎ ವಿ ಶಿವನಗೌಡರ ಮೊದಲಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಮಂಗಳಗೌರಿ ಹಿರೇಮಠ ಪ್ರಾಥರ್ಿಸಿದರೆ  ರವಿರಾಜ ಪವಾರ ಸ್ವಾಗತಿಸಿದರು, ಅಶೋಕ ಹಾದಿ ಆಶಯನುಡಿ ಹೇಳಿದರು. ಪ್ರಕಾಶ ಮಂಗಳೂರು ನಿರೂಪಿಸಿದರೆ ಕೊನೆಗೆ ಈರಣ್ಣ ಮಾದರ ವಂದಿಸಿದರು.