ಬೆಳಗಾವಿ ಜಿಲ್ಲೆಯಲ್ಲಿ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆ ಕಠಿಣ ಜಾರಿಗೆ ತೀರ್ಮಾ ನ ಅರಿವು ಮೂಡಿಸಲು ಮಹಿಳಾ ಸಂಘಟನೆಗಳ ಕಾರ್ಯಾಗಾರ ಏರ್ಪಡಿಸಲು ಚಿಂತನೆ

ಬೆಳಗಾವಿ, 03 : ಬೆಳಗಾವಿ ಜಿಲ್ಲಾ ಸಕ್ಷಮ ಪ್ರಾಧಿಕಾರ, ಪಿಸಿಪಿಎನ್ಡಿಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿಯ ಸಭೆ ಇತ್ತೀಚೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಅವರ ಕಚೇರಿಯಲ್ಲಿ ಆಯೋಜಿಸಲಾಗಿತ್ತು. 

ಬೆಳಗಾವಿ ಜಿಲ್ಲೆಯಲ್ಲಿ ಪಿಸಿಪಿಎನ್ಡಿಟಿ ಕಾಯ್ದೆಯ ಕಠಿಣ ಜಾರಿಗೊಳಿಸುವಲ್ಲಿ ಯೋಜನಾ ನಿದರ್ೆಶಕರು (ಆರ್.ಸಿ.ಹೆಚ್) ಹಾಗೂ ರಾಜ್ಯ ಸಕ್ಷಮ ಪ್ರಾಧಿಕಾರ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ಇವರ ಅಧಿಕೃತ ಜ್ಞಾಪನಾ ಪತ್ರದದಲ್ಲಿರುವ  ಮಾರ್ಗಸೂಚಿ ಪ್ರಕಾರ ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಕ್ಷಮ ಪ್ರಾಧಿಕಾರಿ (ಪಿಸಿ ಪಿಎನ್ಡಿಟಿ) ಬೆಳಗಾವಿ ಇವರೊಂದಿಗೆ ಚರ್ಚಿ ಸಿ , ಗಡಿ ರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರದ ಜಿಲ್ಲಾ ಸಕ್ಷಮ ಪ್ರಾಧಿಕಾರಗಳೊಂದಿಗೆ ಸೇರಿ ಬೆಳಗಾವಿ ನಗರದಲ್ಲಿ ಪಿಸಿ ಪಿಎನಡಿಟಿ ಕಾಯ್ದೆಯ ಅರಿವು ಮೂಡಿಸುವಲ್ಲಿ ಮತ್ತು ಕಠಿಣವಾಗಿ ಜಾರಿಗೊಳಿಸುವಲ್ಲಿ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಕುರಿತು ಕಾಯರ್ಾಗಾರವನ್ನು ಸ್ತ್ರೀಶಕ್ತಿ ಸಂಘ, ಅಂಗನವಾಡಿ ಕಾರ್ಯಕರ್ತರು, ಆಶಾಕಾರ್ಯಕರ್ತ ರ  ಇನ್ನುಳಿದ ಮಹಿಳಾ ಸ್ವಯಂ ಸೇವಾ ಸಂಘಗಳ ಸಹಯೋಗದೊಂದಿಗೆ ಮುಂಬರುವ ದಿನಗಳಲ್ಲಿ ಕಾರ್ಯಗಾರ ಏರ್ಪಡಿಸಲು ಸಭೆಯಲ್ಲಿ ತೀಮರ್ಾನಿಸಲಾಯಿತು.

ಜಿಲ್ಲೆಯಲ್ಲಿ ಹೊಸದಾಗಿ ಪ್ರಾರಂಭಿಸಲು ಇಚ್ಚಿಸಿರುವ ಸ್ಕ್ಯಾನಿಂಗ್ ಸೆಂಟರಗಳ ನೊಂದಣಿಗಾಗಿ ಪರವಾಣಿಗೆ ಬಯಸಿ ಬಂದಿರುವ ಅಜರ್ಿಗಳನ್ನು ಮತ್ತು ನವೀಕರಣಕ್ಕಾಗಿ ಸಲ್ಲಿಸಿರುವ ಅಜರ್ಿಗಳ ವಿಲೇವಾರಿಗಾಗಿ ಸಭೆಯಲ್ಲಿ ಚರ್ಚಿಸಲಾಯಿತು. 

ಸಭೆಯ ಅಧ್ಯಕ್ಷತೆಯನ್ನು ಪಿ.ಸಿ.ಪಿ.ಎನ್.ಡಿ.ಟಿ ಸಲಹಾ ಸಮಿತಿ ಅಧ್ಯಕ್ಷರಾದ ಗೋಕಾಕಿನ ಡಾ. ಸಂಜಯ ಪಿ.ಹೊಸಮಠ,  ಇವರು ವಹಿಸಿದ್ದರು.  ಸಭೆಯಲ್ಲಿ  ಸಮಿತಿ ಸದಸ್ಯರುಗಳಾದ  ವಕೀಲರಾದ ಸುಮಿತಾ ಪಾಟೀಲ, ಸಾಮಾಜಿಕ ಕಾರ್ಯಕರ್ತರ   ಡಾ. ರಹೀಲಾ ಎಸ್ ಶೇಖ, ಬೀಮ್ಸ್ ಆಸ್ಪತ್ರೆ ಬೆಳಗಾವಿಯ ರೆಡಿಯಾಲಾಜಿಸ್ಟ ಡಾ. ಈರಣ್ಣಾ ಪಲ್ಲೇದ, ಎನ್.ಜಿ.ಓ ಚೇರಮನ್ನರಾದ ಶ್ರೀಮಂತ ಸದಲಗೆ, ಜಿಲ್ಲಾ ವಾತರ್ಾ & ಪ್ರಚಾರ ಇಲಾಖೆ ಬೆಳಗಾವಿ ಉಪ ನಿದರ್ೆಶಕರನ್ನೊಳೊಗೊಂಡಂತೆ  ವಿಶೇಷ ಅಹ್ವಾನಿತರಾಗಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಪ್ಪಾಸಹೇಬ ನರಟ್ಟಿ, ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ವ್ಹಿ.ಮುನ್ಯಾಳ ಡಿ.ಐ.ಎಂ.ಸಿ.ಸದಸ್ಯರಾದ ಡಾ. ರಾಹುಲ್ ಎಸ್ ಬಾಗಚಂದಾನಿ,  ಡಾ. ನಾಗರಾಜ್.ಪಿ ಹಾಗೂ ಪಿ.ಸಿ.ಪಿ.ಎನ್.ಡಿ.ಟಿ ಜಿಲ್ಲಾ ವಿಷಯ ನಿವರ್ಾಹಕ ಕಿರಣ ಶ್ರೀಮಂತ ಸಾವಂತನವರ ಉಪಸ್ಥಿತರಿದ್ದರು.    

ಮೊದಲಿಗೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಪಿಸಿ&ಪಿಎನಡಿಟಿ, ಡಿ.ಐ.ಎಂ.ಸಿ ಅಧ್ಯಕ್ಷರಾದ ಡಾ. ಎಸ್.ಪಿ.ಬೆಂಡಿಗೇರಿ ಸ್ವಾಗತಿಸಿ ಕೊನೆಗೆ ವಂದಿಸಿದರು.