ಎಫ್.ಆರ್.ಪಿ ದರ ಘೋಷಣೆ ವ್ಯತ್ಯಾಸದ ಹಣ ನೀಡಲು 3 ದಿನ ಗಡವು


ಲೋಕದರ್ಶನ ವರದಿ

ಕಾಗವಾಡ 17: ಬೆಳಗಾವಿ ಜಿಲ್ಲಾಧಿಕಾರಿಗಳು ಕಾಗವಾಡ ಮತ್ತು ಅಥಣಿ ತಾಲೂಕಿನ ಸಕ್ಕರೆ ಕಾಖರ್ಾನೆಗಳಿಗೆ ಪ್ರಸಕ್ತ ವರ್ಷದ ಎಫ್.ಆರ್.ಪಿ ಪ್ರಕಾರ ದರ ಘೋಷಣೆ ಮತ್ತು ಕಳೆದ ವರ್ಷದ ವ್ಯತ್ಯಾಸದ ಪ್ರತಿಟನ 400 ರುಪಾಯಿ ನೀಡುವಂತೆ ಆದೇಶ ನೀಡಿ, 3 ದಿನದ ಗಡವು ನೀಡಿದರು. ಅದರಂತೆ ಉಗಾರ, ಐನಾಪುರ ರೈತ ಸಂಘಟನೆ ಕಾರ್ಯಕರ್ತರು ಕಾಗವಾಡ, ಉಗಾರ, ಕೋಕಟನೂರ, ಕೆಂಪವಾಡ ಸಕ್ಕರೆ ಕಾಖರ್ಾನೆಗಳಿಗೆ ಆದೇಶ ಪಾಲನೆ ಮಾಡುವಂತೆ ಮನವಿ ಅಪರ್ಿಸಿದರು. 

ಶುಕ್ರವಾರ ದಿ. 16ರಂದು ಐನಾಪುರ ಹಿತರಕ್ಷಣಾ ಸಮೀತಿಯ ಸಂಚಾಲಕ ಶೀತಲ ಪಾಟೀಲ, ರವೀಂದ್ರ ಗಾಣಿಗೇರ ಇವರ ಬೆಂಬಲಿತ ನೂರಾರು ಕಬ್ಬು ಬೆಳೆಗಾರ ರೈತರು ಬೆಳಿಗ್ಗೆ ಉಗಾರ, ಕಾಗವಾಡ, ಶಿವಶಕ್ತಿ, ಕೋಕಟನೂರ ಸಕ್ಕರೆ ಕಾಖರ್ಾನೆ ವ್ಯವಸ್ಥಾಪಕರಿಗೆ ಭೇಟಿನೀಡಿ, ಜಿಲ್ಲಾಧಿಕಾರಿಗಳು ನೀಡಿರುವ ಆದೇಶದ ಪಾಲನೆ ಮಾಡಲು ಒತ್ತಾಯಿಸಿದರು.

ಉಗಾರ ಸಕ್ಕರೆ ಕಾಖರ್ಾನೆ ಮ್ಯಾನೇಜರ್ ಜಿ.ಎನ್.ಬಳ್ಳಾರಿ, ಕೇನಮ್ಯಾನೇಜರ ಆರ್.ಎನ್.ಸಿದ್ಧಾಂತಿ ಇವರಿಗೆ ಮನವಿ ಅಪರ್ಿಸಿದರು. ಕಳೇದ ವರ್ಷದ ವ್ಯತ್ಯಾಸದ 400 ರುಪಾಯಿ ಈ ವರ್ಷದ ಕೇಂದ್ರ ಸರಕಾರ ಘೋಷಣೆದಂತೆ ದರ ನೀಡಿರಿ ಎಂದು ಹೇಳಿದಾಗ ಶೀಘ್ರದಲ್ಲಿ ನಿರ್ಣಯ ಕೈಗೊಳ್ಳುವಲಾಗದೆಂದು ಹೇಳಿದರು.

ಕಾಗವಾಡದ ಶಿರಗುಪ್ಪಿ ಶುಗರ್ ವಕ್ಸರ್್ ಕಾಖರ್ಾನೆಯ ಆಧ್ಯಕ್ಷ ಕೆ.ಪಿ.ಮಗೆಣ್ಣವರ, ಉಪಾಧ್ಯಕ್ಷ ವಿ.ಪಿ.ರಾವ್, ಕೇನಮ್ಯಾನೇಜರ್ ದರಿಗೌಡರ ಇವರಿಗೆ ಭೇಟಿಯಾಗಿ ಮನವಿ ಅಪರ್ಿಸಿದರು. ಕೆ.ಪಿ.ಮಗೆಣ್ಣವರ ಇವರು ಶೀಘ್ರದಲ್ಲಿ ಚಚರ್ಿಸಿ, ನಿರ್ಣಯ ಕೈಗೊಳ್ಳುವದಾಗಿ ಹೇಳಿದರು.

ಯಡ್ರೌದ ಶಿವಶಕ್ತಿ ಸಕ್ಕರೆ ಕಾಖರ್ಾನೆಗೆ ಭೇಟಿನೀಡಿ, ಮ್ಯಾನೇಜರ್ ಎಂ.ಎನ್.ಪತ್ತಾರ ಇವರಿಗೆ ಮನವಿ ಅಪರ್ಿಸಿದರು. ಸಕ್ಕರೆ ಕಾಖರ್ಾನೆಯ ಆಧ್ಯಕ್ಷ ಡಾ. ಪ್ರಭಾಕರ ಕೋರೆ ಇವರೊಂದಿಗೆ ರೈತ ಮುಖಂಡ ಶೀತಲ ಪಾಟೀಲ ಫೋನ್ ಮುಖಾಂತರ ಬೇಡಿಕೆಗಳು ತಿಳಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳುವದಾಗಿ ಹೇಳಿದರು. 

ಗುರುವಾರ ಮತ್ತು ಶುಕ್ರವಾರ ಎರಡು ದಿನ ರೈತ ಮುಖಂಡರು ಎಲ್ಲ ಸಕ್ಕರೆ ಕಾಖರ್ಾನೆಗಳಿಗೆ ಭೇಟಿನೀಡಿ, ಜಿಲ್ಲಾಧಿಕಾರಿಗಳ ಮುಂದೆ ಒಪ್ಪಿದಂತೆ ಹಣನೀಡಿ ಕಾಖರ್ಾನೆಗಳು ಪ್ರಾರಂಭಿಸಿರಿ ಎಂದು ಕೇಳಿಕೊಂಡಿದ್ದಾರೆ. 

ಇವರೊಂದಿಗೆ ರೈತ ಮುಖಂಡರಾದ ರಾವಸಾಹೇಬ ಪಾಟೀಲ, ಉದಯ ಮಾನೆ, ಅಪ್ಪಾಸಾಹೇಬ ಚೌಗುಲೆ, ಆದಿನಾಥ ದಾನೋಳಿ, ಸಂಜಯ ಬಿರಡಿ, ಶಶೀಕಾಂತ ಜೋಶಿ, ಅಭಿಜೀತ ಬಿಂದಗಿ, ಅಣ್ಣಪ್ಪಾ ಡುಗನ್ನವರ, ಪ್ರವೀಣ ಕುಲಕಣರ್ಿ, ಯಶ್ವಂತ ಪಾಟೀಲ, ಕಾಕಾ ಚೌಗುಲೆ, ರಾಜು ಕವಟಗೆ, ಪ್ರಮೋದ ಹೋಸುರೆ, ಸಚೀನ ಕುಸನಾಳೆ, ಅಭಿಷೇಕ ಚೌಗುಲೆ, ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.