ರಸ್ತೆ ಕಳಪೆ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿ,ನೊಂದ ರೈತರಿಗೆ ಭರವಸೆ
ರಾಣೇಬೆನ್ನೂರು 24 : ಕಳಪೆ ಕಾಮಗಾರಿ ಮಾಡುತ್ತಾ ಅಧಿಕಾರಿಗಳನ್ನು ಹೆದರಿಸುತ್ತಾ ಬ್ಲಾಕ್‌ಮೇಲ್ ತಂತ್ರ ಮಾಡುತ್ತಿರುವ ಗುತ್ತಿಗೆದಾರ ಚನ್ನಮಲ್ಲಿಕಾರ್ಜುನ ಹಾವೇರಿ ರಸ್ತೆ ಕಾಮಗಾರಿ ಮಾಡುತ್ತಿರುವ ಇಟಗಿ-ಹಲಗೇರಿ ರಸ್ತೆ (ಹರಿಹರ-ಸಮ್ಮಸಗಿ) ಯ ಸಂಬಂಧವಾಗಿ ಆ ಭಾಗದ ರೊಚ್ಚಿಗೆದ್ದ ರೈತರು ನೀರು ಹಾಕದೆ ಕೆಂಪು ಮಣ್ಣು ಹರಡಿ ರಸ್ತೆ ಕಾಮಗಾರಿ ಮಾಡುತ್ತಾ ಕಳಪೆ ಗುಣಮಟ್ಟದಿಂದ ಕಾರ್ಯ ಪ್ರಾರಂಭಿಸಿರುವುದರ ಬಗ್ಗೆ 3-4 ಬಾರಿ ಆ ಭಾಗದ ರೈತರು ಪ್ರತಿಭಟನೆ ಮಾಡಿ ರಸ್ತೆ ಅಡತಡೆ, ರಸ್ತೆ ರಿಪೇರಿ ಮಾಡುವಾಗ ನೀರು ಹಾಕದೆ ಇದುದ್ದರಿಂದ ಅಕ್ಕಪ್ಪಕ್ಕದ ಜಮೀನಿನ ಬೆಳೆಗಳು ದೂಳಿನಿಂದ ನಾಶವಾಗಿವೆ, ಏನು ತಪ್ಪು ಮಾಡದ ನಮಗೇಕೆ ಶಿಕ್ಷೆ ಎಂದು ರೈತರು ರೊಚ್ಚಿಗೆದ್ದು ಸಂಬಂಧಪಟ್ಟ ಗುತ್ತಿಗೆದಾರನಿಂದ ಯೋಗ್ಯ ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3 ಘಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ವಿಜಯಮಹಾಂತೇಶ ದಾನಮ್ಮನವರ ಇಂದು ಇಟಗಿ-ಹಲಗೇರಿ ರಸ್ತೆಗೆ ಭೇಟಿ ನೀಡಿ ರಸ್ತೆ ಮತ್ತು ರೈತರು ಬೆಳೆದು ಹಾಳಾಗಿರುವ ಬೆಳೆಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ರೈತರ ಪರವಾಗಿ ಮಾತನಾಡಿದ ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ, ರೈತ ಬಹಳಷ್ಟು ಸಂಕಷ್ಟದಲ್ಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಗುತ್ತಿಗೆದಾರ ಮಲ್ಲಿಕಾರ್ಜುನ ಡಿ. ಹಾವೇರಿಯ ‘ಮಂಗನಾಟ’ ಇಲ್ಲಿಗೆ ನಿಲ್ಲಬೇಕು, ಕೂಡಲೇ ಆತನನ್ನು ಬ್ಲಾಕ್‌ಲಿಸ್ಟಿನಲ್ಲಿ ಇಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ ಬೆಳೆನಾಶ ಪಡಿಸಿಕೊಂಡು ಹಾನಿಗೊಂಡ ರೈತರಿಗೆ ಗುತ್ತಿಗೆದಾರನಿಂದ ಯೋಗ್ಯ ಪರಿಹಾರ ನೀಡದ ಹೊರತು ನಮ್ಮ ಹೋರಾಟ ನಿಲ್ಲದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ರೈತರಿಗೆ ನ್ಯಾಯ ಕೊಡಿಸಿ ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮದ ಭರವಸೆ ನೀಡಿದರು.
ತಹಶೀಲ್ದಾರ್ ಜೆ.ಎ. ಭಗವಾನ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರೈತ ಮುಖಂಡರಾದ ಮಾರುತಿ ಗುಡಿಯವರ, ಮಂಜಪ್ಪ ಶಿವಲಿಂಗಪ್ಪನವರ, ಹಾಲೇಶ ಕೆಂಚನಾಯ್ಕರ, ಹಾಲೇಶ ಓಲೇಕಾರ, ಸಿ.ಬಿ. ಪಾಟೀಲ, ಬಸವರಾಜ ಯಲ್ಲಕ್ಕನವರ, ಹೆಗ್ಗಪ್ಪ ನಿಂಬಾಳ, ಸುನೀಲ ಎರೇಶಿಮಿ, ಹನುಮರಡ್ಡಿ ಹನುಮರಡ್ಡೇರ, ಹನುಮಂತ ಉಕ್ಕುಂದ ಮುಂತಾದವರು ಹಾಜರಿದ್ದರು.