ಜಗಜಿತ್ ಸಿಂಗ್ ದಲ್ಲೇವಾಲ ಅಮರಣಾಂತ ಉಪವಾಸ ಅಂತ್ಯಗೊಳಿಸಲು ಕೇಂದ್ರ ಮುಂದಾಗಬೇಕು
ಧಾರವಾಡ 13: ಐತಿಹಾಸಿಕ ದೆಹಲಿ ರೈತ ಹೋರಾಟದ ವಾಪಸ್ಸಾತಿ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನುಈಡೇರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಕುಳಿತಿರುವ ಹಿರಿಯರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲರವರ ಪ್ರಾಣ ಉಳಿಸಲು ತಕ್ಷಣಪ್ರಧಾನಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಮಧ್ಯಪ್ರವೇಶಕ್ಕೆ ಒತ್ತಾಯಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನಾಧರಣಿ ಅಂಗವಾಗಿ ಧಾರವಾಡದ ಜಿಲ್ಲಾಧಿಕಾರಿಗಳ ಕಛೇರಿಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳು ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲ್ಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಜನಸಂಗ್ರಾಮ ಪರಿಷತನಎಸ್‌ಆರ್ ಹಿರೇಮಠ, ಕರ್ನಾಟಕರೈತ ಸೇನಾ ರಾಜ್ಯಅಧ್ಯಕ್ಷರಾದ ಶಂಕರ ಅಂಬಲಿ, ಕರ್ನಾಟಕರಾಜ್ಯರೈತ ಸಂಘದ ರವಿರಾಜ ಕಂಬಳಿ, ನಾಗಪ್ಪ ಉಂಡಿ,ಈರಣ್ಣ ಬಳಗೇರ್, ದಲಿತ ಸಂಘಟನೆ ಮುಂಖಡರಾದ ಲಕ್ಷ್ಮಣದೊಡ್ಡಮನೆ, ಎಐಯುಟಿಯುಸಿಯ ಜಿಲ್ಲಾ ಅಧ್ಯಕ್ಷರಾದಗಂಗಾಧರ್ ಬಡೆಗೇರ,ಭುವನಾ, ಸಿಐಟಿಯುನ ಬಿ ಐ ಈಳಗೇರ, ಎಐಕೆಕೆಎಂಎಸ್ ನ ಲಕ್ಷ್ಮಣಜಡಗನ್ನವರ, ಹನುಮೇಶ ಹುಡೇದ , ಶರಣುಗೋನವಾರ, ನಾರಯಣ ಮಾದರ, ಹನುಮಂತು ಮೂರಬ,ರವಿ ಸಿ ವಡ್ಡರ, ಮುಂತಾದವರುಇದ್ದರು.ಪ್ರತಿಭಟನಾ ಸಭೆಯಅಧ್ಯಕ್ಷತೆಯನ್ನುಎಐಕೆಕೆಎಂಎಸ್‌ನ ಜಿಲ್ಲಾಅಧ್ಯಕ್ಷರಾದ ದೀಪಾ ಧಾರವಾಡ ವಹಿಸಿದ್ದರು.
ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ ಸಾಲ ಮನ್ನಾ ಮುಂತಾದ ಆಗ್ರಹಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವೆಂಬರ್ 26 ರಿಂದ ಪಂಜಾಬ್-ಹರ್ಯಾಣಗಡಿಯಲ್ಲಿ ಹಿರಿಯರೈತ ನಾಯಕ 70 ವರ್ಷ ವಯಸ್ಸಿನ ಜಗಜಿತ್ ಸಿಂಗ್ ದಲ್ಲೇವಾಲ ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ.
ಈ ಉಪವಾಸ ಸತ್ಯಾಗ್ರಹ 48 ನೇ ದಿನಕ್ಕೆ ಕಾಲಿಟ್ಟಿದ್ದು .ದೇಹ ನಿತ್ರಾಣಗೊಂಡು ಮಾಂಸಖಂಡಗಳು ತಮ್ಮತೂಕವನ್ನು ಕಳೆದುಕೊಂಡಿದ್ದು ರಕ್ತದೊತ್ತಡಕೂಡಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದು ಯಾವಾಗ ಬೇಕಾದರೂ ಪ್ರಾಣ ಹೋಗುವಂತಹ ಸನ್ನಿವೇಶಉಂಟಾಗಿದೆ.ಇಂತಹ ಸ್ಥಿತಿಗೆ ರೈತ ನಾಯಕರ ಪರಿಸ್ಥಿತಿ ತಲುಪಲುಕೇಂದ್ರ ಸರ್ಕಾರವೇ ನೇರಕಾರಣವಾಗಿದೆ.
ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿರೈತರಜೀವನ ಹಾಗೂ ಕೃಷಿ ರಕ್ಷಣೆಗೆ ಬಹಳ ಆಗತ್ಯವಿದ್ದ ಕರಾಳ ಕೃಷಿ ಕಾಯ್ದೆಗಳ ರದ್ದತಿಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಮುಂದಿಟ್ಟಿತ್ತು. 385 ದಿನಗಳ ಅನಿರ್ದಿಷ್ಟ ಹೋರಾಟದ ನಂತರರೈತ ಹೋರಾಟಕ್ಕೆ ಮಣಿದಕೇಂದ್ರ ಸರ್ಕಾರ, ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ಉಳಿದ ಹಕ್ಕೋತ್ತಾಯಗಳನ್ನು ಈಡೇರಿಸಲು ಲಿಖಿತ ಭರವಸೆಯನ್ನು ನೀಡಿತ್ತು. ಆದರೆ ಈ ಭರವಸೆಗೆ ವಿರುದ್ಧವಾಗಿ ನಡೆದುಕೊಂಡಕಾರಣಕ್ಕಾಗಿಎರಡನೇಎನ್ ಡಿ ಎ ಸರ್ಕಾರ ಬಹುಮತ ಕಳೆದುಕೊಂಡಿದ್ದರೂ ಮತ್ತೇಅದೇರೈತ ವಿರೋಧಿ ನೀತಿಅನುಸರಿಸಲಾಗುತ್ತಿದೆ.ಮೂರನೇಎನ್ ಡಿ ಎ ಸರ್ಕಾರಅಧಿಕಾರಕ್ಕೆ ಮರಳಿದ ನಂತರದೇಶದಎಲ್ಲಾ ಸಂಸದರಿಗೆಐತಿಹಾಸಿಕ ದೆಹಲಿ ರೈತ ಹೋರಾಟದ ಲಿಖಿತ ಭರವಸೆಗಳನ್ನು ಈ ಸರ್ಕಾರಕ್ಕೆ ನೆನಪಿಸುವಂತೆಒತ್ತಾಯಿಸಲಾಗಿತ್ತು. ಅದಲ್ಲದೇರಾಷ್ಟ್ರ ಪತಿಗಳಿಗೂ ಜಿಲ್ಲಾಧಿಕಾರಿ ಗಳ ಮೂಲಕ ಐನೂರಕ್ಕೂ ಹೆಚ್ಚು ಜಿಲ್ಲೆಗಳಿಂದ ಈ ಲಿಖಿತ ಭರವಸೆಗಳನ್ನು ಸರ್ಕಾರಕ್ಕೆ ನೆನಪಿಸಿ ಈಡೇರಿಸಲುಆಗ್ರಹಿಸಲಾಗಿತ್ತು.ಮೂರು ವರ್ಷಗಳ ನಂತರವೂರೈತರ ಹಕ್ಕೋತ್ತಾಯಗಳನ್ನು ನಿರ್ಲಕ್ಷ್ಯ ಮಾಡಿದೆ ಮಾತ್ರವಲ್ಲಇಡೀ ವರ್ಷಕ್ಕಿಂತ ಹೆಚ್ಚು ಕಾಲ ಲಕ್ಷಾಂತರರೈತರು ಹೋರಾಟ ನಡೆಸಿ ರದ್ದುಪಡಿಸಿಕೊಂಡ ಕರಾಳ ಕೃಷಿ ಕಾಯ್ದೆಗಳನ್ನು ಹಿಂಬಾಗಿಲ ಮೂಲಕ ಜಾರಿ ಮಾಡಲಾಗುತ್ತಿದೆ.ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣವನ್ನುರದ್ದುಪಡಿಸುವ ಕರಾಳ ಕೃಷಿ ಮಾರುಕಟ್ಟೆರಾಷ್ಟ್ರೀಯಚೌಕಟ್ಟುಧೋರಣೆಯನ್ನುಜಾರಿ ಮಾಡುವ ಪ್ರಯತ್ನ ನಡೆಸುತ್ತದೆ.ದೇಶಾದ್ಯಂತ
ಎಲ್ಲಾರೈತರ ಪಂಪಸೆಟ್ ಗಳಿಗೆ ಮೀಟರ್ ಅಳವಡಿಸಿ ವಿದ್ಯುತ್ ಪಾವತಿ ಮಾಡುವಂತೆರೈತರನ್ನು ಬಲವಂತಕ್ಕೆ ಒಳಪಡಿಸಲು ಆಧಾರ್‌ಕಾರ್ಡ್‌ಜೋಡಣೆಕಾರ್ಯ ಪೂರ್ಣಗೊಳಿಸಿದೆ.ಯಾವುದೇ ರೈತರ ಬೆಳೆಗಳನ್ನು ಸಕಾಲದಲ್ಲಿ ಬೆಂಬಲ ಬೆಲೆಯಲ್ಲಿಖರೀದಿಸುತ್ತಿಲ್ಲ. ಇಂತಹ ಹಲವು ರೈತ ವಿರೋಧಿ ಧೋರಣೆಗಳು ಹಾಗೂ ರೈತರ ಆಗ್ರಹಗಳನ್ನು ನಿರ್ಲಕ್ಷ್ಯ ಮಾಡಿದ್ದರ ಫಲವಾಗಿ ರೈತ ನಾಯಕರ ಪ್ರಾಣ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಈ ತಕ್ಷಣವೇ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಸರ್ಕಾರತಕ್ಷಣವೇ ಮಧ್ಯಪ್ರವೇಶ ಮಾಡಬೇಕು.ರಾಜ್ಯ ಸರ್ಕಾರವುಕೂಡರೈತ ನಾಯಕರ ಪ್ರಾಣ ಉಳಿಸಲು ತಕ್ಷಣಕ್ರಮ ಕೈಗೊಳ್ಳಲು ಆಗ್ರಹಿಸಿ ತಕ್ಷಣ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಬೇಕು ಎಂದು ಈ ಪ್ರತಿಭಟನೆ, ಧರಣಿ ಸತ್ಯಾಗ್ರಹ ನಡೆಸಿ ಆಗ್ರಹಿಸುತ್ತೀವೆ.