ಬಿಜೆಪಿಯಿಂದ ಮಾತ್ರ ರಾಷ್ಟ್ರೀಯ ಭದ್ರತೆಯ ಭರವಸೆ, ವೇಗದ ಬೆಳವಣಿಗೆ ಸಾಧ್ಯ: ಅಮಿತ್ ಶಾ


ಘಾಜಿಪುರ, ಏ 25 ಭಾರತದ ಭದ್ರತೆ ಮತ್ತು ಕ್ಷಿಪ್ರ ಪ್ರಗತಿ ಬಿಜೆಪಿಯಿಂದ ಮಾತ್ರ ಸಾಧ್ಯ, ವಿವಿಧ ಪಕ್ಷಗಳ ಸಣ್ಣ ಸಣ್ಣ ಗುಂಪುಗಳಿಂದ ದೇಶದ ಸುರಕ್ಷತೆ ಹಾಗೂ ಅಭಿವೃದ್ಧಿ ಅಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.  

 ಉತ್ತರಪ್ರದೇಶದ ಘಾಜಿಪುರ ಚುನಾವಣಾ ಪ್ರಚಾರ ಸಭೆಯಲ್ಲಿ ಪಕ್ಷದಅಭ್ಯರ್ಥಿ  ಹಾಲಿ ಸಂಸದ ಮನೋಜ್ ತಿವಾರಿ ಪರ ಮತ ಯಾಚಿಸಿದ ಅವರು, ಕ್ಷೇತ್ರದ ಸರ್ವಾಗೀಣ   ಅಭಿವೃದ್ಧಿಗೆ ಶ್ರಮಿಸಿರುವ ಸಂಸದರ ಮರು ಆಯ್ಕೆಗೆ ಮನವಿ ಮಾಡಿದರು. 

  ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಉಗ್ರರು ನಮ್ಮ ನೆಲವನ್ನು ಪ್ರವೇಶಿಸಿ ಸೈನಿಕರ ಮೇಲೆ ದಾಳಿ ನಡೆಸಿದ್ದರು.  ಆದರೆ ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ  ಉರಿ ದಾಳಿ ಹಾಗೂ ಪುಲ್ವಾಮಾ ದಾಳಿ ಬಳಿಕ ಸರ್ಜಿಕಲ್  ಸ್ಟ್ರೈಕ್ ಮತ್ತು ಬಾಲಕೋಟ್ ವಾಯುದಾಳಿ ಮೂಲಕ ಉಗ್ರರಿಗೆ ತಕ್ಕ ಉತ್ತರ ನೀಡಲಾಗಿದೆ ಎಂದರು.  ಕಾಂಗ್ರೆಸ್ ಮೈತ್ರಿ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಓಮರ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರಕ್ಕೊಬ್ಬ ಪ್ರಧಾನಿಯನ್ನು ಬಯಸಿದ್ದಾರೆ.  ಆದರೆ ಈ ವಿಷಯದ ಬಗ್ಗೆ ರಾಹುಲ್ ಗಾಂಧಿ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು. 

  ಅಖಿಲೇಶ್, ಮಾಯಾವತಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ನಮ್ಮ ದೇಶದ ಸುರಕ್ಷತೆ ಅಸಾಧ್ಯ. ಏಕೆಂದರೆ ಭಯೋತ್ಪಾದಕರ ಜೊತೆ ಬಿಜೆಪಿಗೆ 'ಲವ್' ಇಲ್ಲ.  ಹೀಗಾಗಿ ದೇಶ ರಕ್ಷಣೆಗೆ ಸಮರ್ಥವಾಗಿರುವ ಬಿಜೆಪಿಯನ್ನು ಗೆಲ್ಲಿಸಿ ಎಂದು ಅಮಿತ್ ಶಾ ಮನವಿ ಮಾಡಿದರು.