ಬಾಂಬ್, ಐಇಡಿ ಹಾಗೂ ಪರಮಾಣು ಅಸ್ತ್ರಗಳ ಬಗ್ಗೆ ಬಿಜೆಪಿಗೆ ಅತಿಯಾದ ಗೀಳು; ಮುಫ್ತಿ ಟೀಕೆ


ಶ್ರೀನಗರ, ಏಪ್ರಿಲ್ 24 ಬಿಜೆಪಿ ಬಾಂಬ್, ಸುಧಾರಿತ ಸ್ಪೋಟಕ ಸಾಧನ ಹಾಗೂ ಪರಮಾಣು ಆಸ್ತ್ರಗಳ ಅನಾರೋಗ್ಯಕರ ಗೀಳು ಹೊಂದಿದ್ದು, ಇಂತಹ ಹಿಂಸಾತ್ಮಕ ಹೇಳಿಕೆಗಳು ಅನಗತ್ಯ ಹಾಗೂ ನಾಚಿಕೆಗೇಡಿನದಾಗಿದ್ದರೂ,  ಕುಂಭಕರ್ಣನ ನಿದ್ರೆಯಲ್ಲಿರುವ  ಬಾರತ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆ ತಮಗಿಲ್ಲ ಎಂದು ಜಮ್ಮು- ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ  ಮುಫ್ತಿ ಹೇಳಿದ್ದಾರೆ. ಬಾಂಬ್ಗಳು, ಐಇಡಿಗಳು ಹಾಗೂ ಪರಮಾಣು ಅಸ್ತ್ರಗಳ ಬಗ್ಗೆ ಬಿಜೆಪಿ ಅನಾರೋಗ್ಯಕರ ಗೀಳು ಹೊಂದಿದೆ. ಇಂತಹ  ಹಿಂಸಾತ್ಮಕ ಹೇಳಿಕೆಗಳು ಅನಗತ್ಯ ಹಾಗೂ ನಾಚಿಕೆಗೇಡಿನದು, ಮೊದಲಿನಿಂದಲೂ ಚುನಾವಣಾ ಆಯೋಗ ಕುಂಭಕರ್ಣನ ನಿದ್ರೆಗೆ ಜಾರಿರುವ ಕಾರಣ ಯಾವುದೇ ಕ್ರಮ ಕೈಗೊಳ್ಳು ನಿರೀಕ್ಷಿಸುವುದಿಲ್ಲ  ಎಂದು  ತಮ್ಮ ಟ್ವೀಟರ್ ನಲ್ಲಿ ಅವರು ಬರೆದುಕೊಂಡಿದ್ದಾರೆ.  

ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿ ಅವರಿಗೆ ಬಾಂಬ್ ಕಟ್ಟಿ, ಬೇರೆ ದೇಶಕ್ಕೆ ರವಾನಿಸಬೇಕು ಎಂದು ಮಹಾರಾಷ್ಟ್ರದ  ಬಿಜೆಪಿ ಸಚಿವ ಪಂಕಜ ಮುಂಡೆ ನೀಡಿದ್ದಾರೆನ್ನಲಾದ ಹೇಳಿಕೆ ಕುರಿತು ಮುಫ್ತಿ ಈ ಪ್ರತಿಕ್ರಿಯೆ ನೀಡಿದ್ದಾರೆ. 

ದೀಪಾವಳಿಗಾಗಿ ಭಾರತ ಅಣುಬಾಂಬ್  ಇಟ್ಟುಕೊಂಡಿಲ್ಲ ನರೇಂದ್ರ ಮೋದಿ ಅವರ ಹೇಳಿಕೆಗೂ ಈ ಹಿಂದೆ ಮುಫ್ತಿ ಪ್ರತಿಕ್ರಿಯೆ ನೀಡಿದ್ದರು. 

ಒಂದೊಮ್ಮೆ ಭಾರತ ದೀಪಾವಳಿಗಾಗಿ ಅಣುಬಾಂಬ್ ಇಟ್ಟುಕೊಂಡಿದ್ದರೆ, ಪಾಕಿಸ್ತಾನವೂ ತನ್ನ ಈದ್ ಆಚರಣೆಗಾಗಿ ಅಣುಬಾಂಬ್ ಇಟ್ಟುಕೊಳ್ಳುವುದಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ  ದೇಶದ  ರಾಜಕೀಯ  ಸಂವಾದವನ್ನು  ತೀರ  ಕೆಳಮಟ್ಟಕ್ಕೆ ಕೊಂಡೊಯ್ದಿದ್ದಾರೆ  ಎಂದು  ಮೆಹಬೂಬ ಮುಫ್ತಿ ಟ್ವೀಟ್ ನಲ್ಲಿ ಟೀಕಿಸಿದ್ದರು.