ಡಿ.7 ರಂದು 100 ದಿನಗಳ ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ
ಗದಗ 07: ಎಚ್.ಕೆ.ಪಾಟೀಲ, ಮಾನ್ಯ ಕಾನೂನು, ನ್ಯಾಯ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋಧ್ಯಮ ಇಲಾಖೆ ಸಚಿವರು ಕರ್ನಾಟಕ ಸರಕಾರ ಬೆಂಗಳೂರು ಇವರು ಡಿಜಿಎಂ ಆಯುರ್ವೇದಿಕ್ ಕಾಲೇಜ್ ಗದಗದಲ್ಲಿ 100 ದಿನಗಳ ಕ್ಷಯ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ದಿನೇ ದಿನೇ ಟಿಬಿ ರೋಗವು ಉಲ್ಭಣಗೊಳ್ಳುತ್ತಿದ್ದು ಅದಕ್ಕೆ ತಕ್ಕಂತೆ ಸರ್ಕಾರವು ಅನೇಕ ಯೋಜನೆಗಳನ್ನು ಕೈಗೊಂಡು ಟಿಬಿ ಮುಕ್ತ ಭಾರತವನ್ನಾಗಿ ಮಾಡಲು ಸಂಬಂಧಪಟ್ಟ ಸಿಬ್ಬಂದಿಯವರ ಶ್ತಮ ಶ್ಲಾಘನೀಯವಾದದ್ದು. ಮುಂದಿನ ದಿನಮಾನಗಳಲ್ಲಿ ಇದೇ ರೀತಿ ನಿರಂತರವಾಗಿ ಶ್ರಮವಹಿಸಿದಲ್ಲಿ ಟಿಬಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕರೆ ನೀಡಿದರು.
ಡಾ.ಎಸ್.ಎಸ್. ನೀಲಗುಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮಾತನಾಡಿ ಎಲ್ಲ ಸಿಬ್ಭಂದಿಯವರು ಅಭಿಯಾನವನ್ನು ಯಶಸ್ವಿಗೊಳಿಸಿ ಜನರಿಗೆ ಅರಿವು ಮೂಡಿಸಲು ಮುಂದಾಗಬೇಕೆಂದು ತಿಳಿಸಿದರು.
ಡಾ.ಅರುಂಧತಿ ಕುಲಕರ್ಣಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳು ತಮ್ಮ ಪ್ರಾಸ್ಥಾವಿಕ ನುಡಿಯಲ್ಲಿ ಕ್ಷಯರೋಗದ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು. ಮತ್ತು ಕಾರ್ಯಕ್ರಮದಲ್ಲಿ ಎಲ್ಲರೂ ಟಿಬಿ ಮುಕ್ತ ಭಾರತ ಪ್ರಮಾಣವನ್ನು ವಚನವನ್ನು ಸ್ವೀಕರಿಸಿದರು.
ಜೈ ಭೀಮ ಕಲಾ ತಂಡದಿಂದ ಕ್ಷಯರೋಗ ಕುರಿತು ಅರಿವು ಮೂಡಿಸುವ ಜಾನಪದ ಹಾಡುಗಳನ್ನು ಹಾಡಿದರು. ಮುಂಜಾನೆ 9:00 ಗಂಟೆಗೆ ವಿದ್ಯಾರ್ಥಿಗಳಿಂದ ಜಾಥಾ ನೇರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಬಿ.ಸಿ. ಕರಿಗೌಡರ, ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ. ಅರುಂಧತಿ ಕೆ., ತಾಲೂಕಾ ಆರೋಗ್ಯಾಧಿಕಾರಿಗಳಾದ, ಡಾ.ಸಂತೋಷ್ ಬೆಳವಡಿ, ಪ್ರಾಚಾರ್ಯರು, ಡಿಜಿಎಂ ಆಯುರ್ವೇ ಮಹಾವಿದ್ಯಾಲಯ, ಗದಗ, ಡಾ. ಪ್ರೀತ ಖೋನಾ, ಡಾ.ಸಾಮುದ್ರಿ, ಕಾರ್ಯದರ್ಶಿಗಳು, ಇಂಡಿಯನ್ ರೆಡ್ ಕ್ರಾಸ್ ಗದಗ, ಡಾ. ಮಹ್ಮದ್‌ಅಶ್ರಫ್‌ಉಲ್, ರೂಪಸೇನ್‌ಚವ್ಹಾಣ, ಡಾ.ಬಿಎಸ್.ಪಾಟೀಲ, ಡಿ.ಜಿ.ಎಂ. ಕಾಲೇಜಿನ ಕಾರ್ಯದರ್ಶಿಗಳು, ಡಾ.ಸತೀಶ್ ಘಾಟಗೆ, ವಿಶ್ವ ಆರೋಗ್ಯ ಸಲಹೆಗಾರರು, ಅಶೋಕ ಮಂದಾಲಿ, ಅಧ್ಯಕ್ಷರು ಗದಗ ತಾಲೂಕ ಗ್ಯಾರಂಟಿ ಯೋಜನಾ ಪ್ರಾಧಿಕಾರ, ಡಾ.ಮಹ್ಮದಅಶ್ರಫ್‌ಉಲ್, ಶ್ರೀನಿವಾಸ ಮೂರ್ತಿ, ತಹಶಿಲ್ದಾರ ಗದಗ ಹಾಗೂ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಹಾಗು ಎನ್.ಟಿ.ಇ.ಪಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.