ಲೋಕದರ್ಶನ ವರದಿ
ತಾಳಿಕೋಟೆ 04: ಲೋಕಸಭೆ ಚುನಾವಣೆಯ ಸೋಲುಗೆಲವು ಲೆಕ್ಕಾಚಾರದ ಮುಂಚೆಯೇ ಬಂದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೈಕಿ ಜುರಗುತ್ತಿರುವ ತಾಳಿಕೋಟೆ ಪುರಸಭೆಯ ಅಧಿಕಾರದ ಗದ್ದುಗೆಗಾಗಿ ಹಣಬಲ ತೋಳಬಲದ ಜೊತೆಗೆ ಜನಬಲ ಹೊಂದಬೇಕಾದರೆ ಪಕ್ಷಪ್ರಾಭಲ್ಯ ಮುಖ್ಯವೆಂಬುದನ್ನು ಅರೀತುಕೊಂಡಿರುವ ಸ್ಪರ್ಧೆ ಆಕಾಂಕ್ಷೀಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಈಗಲೇ ಮುಖಂಡರುಗಳ ಮನೆಭಾಗಿಲಿಗೆ ದುಂಬಾಲು ಬಿದ್ದಿದ್ದಾರೆ.
ತಾಳಿಕೋಟೆ ಪುರಸಭೆಯ ವ್ಯಾಪ್ತಿಯ 23 ವಾರ್ಡಗಳ ಪೈಕಿ ಒಟ್ಟು 24757 ಮತದಾರರು ಹೊಂದಿದ್ದು ಇದರಲ್ಲಿ ಪುರುಷ ಮತದಾರರು 12340 ಮಹಿಳಾ ಮತದಾರರು 12108 ಇತರರು 2 ಪುರಸಭೆಯ ಆಡಳಿತದ ಗದ್ದುಗೆಯ ನಿದರ್ಾರವನ್ನು ಕೈಗೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಸುಮಾರು 500 ಕ್ಕೂ ಅಧಿಕ ಮತಗಳನ್ನು ಗಿಟ್ಟಿಸಿಕೊಳ್ಳಲು ಕಾಂಗ್ರೇಸ್ ಪಕ್ಷವು ಮುಂದಾಗಿ ತನ್ನ ಪ್ರಾಭಲ್ಯವನ್ನು ಮೆರೆದಿದ್ದು ಸ್ಮರಿಸಬಹುದು.
ತಾಳಿಕೋಟೆ ಪುರಸಭೆಯ ಅಧಿಕಾರದ ಚುಕ್ಕಾಣಿಯಲ್ಲಿ 1967 ರಿಂದ ಇಲ್ಲಿಯವರೆಗೆ ಪಕ್ಷಕ್ಕಿಂತ ಪಕ್ಷೇತರರೇ ಅಧಿಕಾರದ ಗದ್ದುಗೆಯನ್ನು ಪಡೆದುಕೊಳ್ಳುತ್ತಾ ಬಂದವರಾಗಿದ್ದಾರೆ ಕಳೆದ ಭಾರಿಯ ಪುರಸಭೆ ಚುನಾವಣೆಯಲ್ಲಿ 3 ಜನ ಅಧಿಕೃತ ಕಾಂಗ್ರೇಸ್ ಪಕ್ಷದಿಂದ ಆಯ್ಕೆಯಾದರೆ ಓರ್ವ ಬಿಜೆಪಿ ಪಕ್ಷದಿಂದ ಅಧಿಕೃತ ಅಬ್ಯಥರ್ಿಯಾಗಿ ಆಯ್ಕೆಗೊಂಡಿದ್ದಾರೆ ಇದರಲ್ಲಿ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ಕರೀಂಬಿ ಮಕಾಂದಾರ ಅವರು ಪಕ್ಷೇತರ ಮನಗೆಲ್ಲುವದರೊಂದಿಗೆ ಎರಡೂವರ್ಷಗಳ ಕಾಲ ಅಧಿಕಾರ ನಡೆಸಿದರೆ ಮುಂದಿನ ಅವಧಿಯಲ್ಲಿ ಪಕ್ಷೇತರ ಅಭ್ಯರ್ಥಿ ಅಕ್ಕಮಹಾದೇವಿ ಕಟ್ಟಿಮನಿ ಅಧಿಕಾರದ ಗದ್ದುಗೆ ಪಡೆದುಕೊಂಡು ಪದ್ದತತ್ತವಾದ ಅಧಿಕಾರವನ್ನು ಚಲಾಯಿಸಿದರು.
ಸೋಲ್ಲಿಲ್ಲದ ಸರದಾರ ಎನ್ನಿಸಿಕೊಂಡಿದ್ದ ಕಾಂಗ್ರೇಸ್ ಪಕ್ಷ ಸಿ.ಎಸ್.ನಾಡಗೌಡ ಅವರು ಎ.ಎಸ್.ಪಾಟೀಲ(ನಡಹಳ್ಳಿ) ಅವರಿಂದ ಕಳೆದ ಭಾರಿಯ ವಿದಾನಸಭಾ ಚುನಾವಣೆಯಲ್ಲಿ ಸೋಲಿನ ರುಚಿನ ಅನುಭವಿಸಿದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತಿಷ್ಠಯನ್ನು ತೆಗೆದುಕೊಂಡಿರುವ ಇವರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಆಯ್ಕೆಗೆ ಸಭೆಗಳನ್ನು ಆಯೋಜಿಸುವದರ ಜೊತೆಗೆ ತಮ್ಮ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ತಮ್ಮ ಕ್ಷೇತ್ರವನ್ನು ಬದಲಿಸಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಲಗ್ಗೆ ಇಟ್ಟು ಕಾಂಗ್ರೇಸ್ ಪಕ್ಷದಿಂದ ಪಕ್ಷಾಂತರವಾಗಿ ಬಿಜೆಪಿ ಪಕ್ಷಕ್ಕೆ ಬಂದು ಶಾಸಕರಾಗಿ ಆಯ್ಕೆಗೊಂಡಿದ್ದರೂ ಇಲ್ಲಿಯವರೆಗೂ ಸೋಲಿನ ರುಚಿಕಂಡವರಲ್ಲಾ ಸದಾ ಯುವ ಸಮೂಹದೊಂದಿಗೆ ತೊಡಗಿಕೊಳ್ಳುವದರೊಂದಿಗೆ ಸದಾ ಉತ್ಸಕತೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ತಮ್ಮ ಪ್ರಾಬಲ್ಯ ತೋರಿಸುತ್ತಾ ಸಾಗಿದ್ದರಿಂದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಸಿ.ಎಸ್.ನಾಡಗೌಡ ಅವರ ಜೊತೆ ಪ್ರಬಲ ಪೈಪೋಟಿ ಬಿಜೆಪಿ ಪಕ್ಷವೂ ಕೂಡಾ ನೀಡಬಲ್ಲದು ಎಂಬ ಲೆಕ್ಕಾಚಾರಗಳು ಹುಟ್ಟಿಕೊಂಡಿವೆ.
ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಕೂಡಾ ಪ್ರತಿವಾಡರ್ಿಗೆ 3 ಜನ ಪ್ರಬಲ ಸ್ಪದರ್ಾ ಆಕಾಂಕ್ಷೀಗಳನ್ನು ತಯಾರಿಸುತ್ತಾ ಸಾಗಿದ್ದಾರೆ ಕೊನೆ ಗಳಿಗೆಯಲ್ಲಿ ಇಬ್ಬರನ್ನು ಹಿಂದಕ್ಕೆ ಸರಿಯಿಸಿ ಚುನಾವಣೆಯನ್ನು ಎದುರಿಸುವ ಮತ್ತು ತಮ್ಮ ಶಕ್ತಿ ಪ್ರದರ್ಶನದ ಸಾಮಥ್ರ್ಯವನ್ನು ತೋರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಸ್ಪರ್ಧೆ ಆಕಾಂಕ್ಷೀಗಳು ಸ್ಫರ್ದೆಕ್ಕಿಂತ ಮುಂಚೆಯೇ ಜನತೆಯ ಆಶಿವರ್ಾದವನ್ನು ಬಯಿಸಿ ಸೋಸಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ಪೋಸ್ಟಗಳನ್ನು ಹಾಕುತ್ತಾ ಯುವಸಮೂಹದ ಮನಗೆಲ್ಲಲ್ಲು ಎಲ್ಲರೀತಿಯ ಪ್ರಯತ್ನದಲ್ಲಿ ತೋಡಗಿಕೊಂಡಿದ್ದಾರೆ.
ಇದೇ ದಿ. 9 ರಿಂದ ಚುನಾವಣೆಯ ನಾಮಪತ್ರ ಸಲ್ಲಿಸಿ ದಿ. 16ರಂದು ಹಿಂತೆಗೆದುಕೊಳ್ಳುವ ಹೊತ್ತಿಗೆ ಯಾರ್ಯಾರು ಸ್ಪರ್ಧಾಕಣದಲ್ಲಿ ಉಳಿದುಕೊಳ್ಳುತ್ತಾರೋ ಯಾರೂ ಪಕ್ಷ ಮತ್ತು ಪಕ್ಷೇತರಾಗಿ ಸ್ಪರ್ದಿಸುತ್ತಾರೆಯೋ ಎಂಬುದು ಸಂಪೂರ್ಣ ಚಿತ್ರಣ ಹೊರಬಿಳ್ಳಲಿದೆ. ಪ್ರತಿಭಾರಿಯೇ ಚುನಾವಣೆಗಿಂತಲೂ ವಿಶಿಷ್ಠತೆ ಪಡೆದುಕೊಂಡಿರುವ ಈ ಭಾರಿಯ ಪುರಸಭೆ ಚುನಾವಣೆಯ ಗದ್ದುಗೆ ಯಾವ ಪಕ್ಷದ ಪಾಲಾಗಲಿದೆ ಎಂಬುದು ದಿ. 29 ರಂದು ನಡೆಯಲಿರುವ ಮತದಾನದಲ್ಲಿ ಮತದಾರರೇ ನಿರ್ದರಿಸಲಿದ್ದಾರೆ.
ತಾಳಿಕೋಟೆ ಪುರಸಭೆಯ ವಾರ್ಡವಾರು ಮಿಸಲಾತಿ ವಿವರ
ವಾರ್ಡ ನಂ.1 ಪರಿಶಿಷ್ಠ ಪಂಗಡ, ವಾರ್ಡ ನಂ.2ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ ನಂ.3 ಸಾಮಾನ್ಯ, ವಾರ್ಡ ನಂ.4 ಹಿಂದುಳಿದ ವರ್ಗ(ಬಿ) ಮಹಿಳೆ, ವಾರ್ಡ ನಂ.5 ಸಾಮಾನ್ಯ, ವಾರ್ಡ ನಂ.6 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ ನಂ.7 ಪರಿಶಿಷ್ಠ ಜಾತಿ, ವಾರ್ಡ ನಂ.8 ಸಾಮಾನ್ಯ ಮಹಿಳೆ, ವಾರ್ಡ ನಂ.9 ಹಿಂದುಳಿದ ವರ್ಗ(ಬಿ), ವಾರ್ಡ ನಂ.10 ಸಾಮಾನ್ಯ ಮಹಿಳೆ, ವಾರ್ಡ ನಂ.11 ಸಾಮಾನ್ಯ, ವಾರ್ಡ ನಂ.12 ಸಾಮಾನ್ಯ ಮಹಿಳೆ, ವಾರ್ಡ ನಂ.13 ಸಾಮಾನ್ಯ ಮಹಿಳೆ, ವಾರ್ಡ ನಂ.14 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ ನಂ.15 ಸಾಮಾನ್ಯ, ವಾರ್ಡ ನಂ.16 ಹಿಂದುಳಿದ ವರ್ಗ(ಎ), ವಾರ್ಡ ನಂ.17 ಸಾಮಾನ್ಯ, ವಾರ್ಡ ನಂ.18 ಹಿಂದುಳಿದ ವರ್ಗ(ಎ), ವಾರ್ಡ ನಂ.19 ಪರಿಶಿಷ್ಠ ಜಾತಿ ಮಹಿಳೆ, ವಾರ್ಡ ನಂ.20 ಸಾಮಾನ್ಯ ಮಹಿಳೆ, ವಾರ್ಡ ನಂ.21 ಸಾಮಾನ್ಯ, ವಾರ್ಡ ನಂ.22 ಹಿಂದುಳಿದ ವರ್ಗ(ಎ), ವಾರ್ಡ ನಂ.23 ಸಾಮಾನ್ಯ ಮಹಿಳೆ ಈರೀತಿಯಾಗಿ ಚುನಾವಣಾ ಆಯೋಗವೋ ಮಿಸಲಾತಿಯನ್ನು ಪ್ರಕಟಗೊಳಿಸಿದೆ.