ದೇವರಗುಡ್ಡ ರಸ್ತೆಯಲ್ಲಿ ಭೀಕರ ಅಪಘಾತ:ಸ್ಥಳದಲ್ಲಿಯೇ ಇಬ್ಬರ ಸಾವು ಓರ್ವ ಆಸ್ಪತ್ರೆಗೆ ದಾಖಲು

Terrible accident on Devaragudda road: Two died on the spot and were admitted to a hospital

ದೇವರಗುಡ್ಡ ರಸ್ತೆಯಲ್ಲಿ ಭೀಕರ ಅಪಘಾತ:ಸ್ಥಳದಲ್ಲಿಯೇ ಇಬ್ಬರ ಸಾವು  ಓರ್ವ ಆಸ್ಪತ್ರೆಗೆ ದಾಖಲು

ರಾಣೇಬೆನ್ನೂರು24 : ಡಿ 24ನಗರ ಹೂರವಲಯದ ದೇವರಗುಡ್ಡ ಗುತ್ತಲ ರಸ್ತೆ, ಮಧ್ಯದ ಗುಡ್ಡದ ಆನ್ವೇರಿ ಬಳಿ,, ಭೀಕರ ಅಪಘಾತ ಸಂಭವಿಸಿ, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ ಓರ್ವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ದುರಂತ ಘಟನೆ ಸೋಮವಾರ ಸಂಜೆ ಸಂಭವಿಸಿದೆ. ಬಾಗಲಕೋಟೆ ಬಿಳಿಗಿರಿರಂಗನ ಬೆಟ್ಟ ರಾಷ್ಟ್ರೀಯ ಹೆದ್ದಾರಿ 57ರಲ್ಲಿ, ಸಂಜೆ  7:30ರ ಸಮಯದಲ್ಲಿ ಈ ದುರಂತ ಘಟನೆ ಸಂಭವಿಸಿದೆ. ಬೈಕ್ ಸವಾರರಿಬ್ಬರೂ ಪರಸ್ಪರ ದಿಕ್ಕಿ ಸಂಭವಿಸಿದ್ದು, ರಭಸಕ್ಕೆ ಗುಡ್ಡದ ಆನ್ವೇರಿಯ ಸೋಮಣ್ಣ ಹನುಮಂತಪ್ಪ ಪಚ್ಚಿ (32) ಮತ್ತು ತೆಲಗಿ ದುಗ್ಗತ್ತಿಯ ಆಂಜನೇಯ (30)ಇಬ್ಬರು ಸಾವು ಕಂಡಿದ್ದಾರೆ. ದೇವರಗುಡ್ಡ ಗ್ರಾಮದ ಕುಮಾರ ಭರಮಪ್ಪ ಚಲವಾದಿ(32) ಅವರು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭೀಕರ ಅಪಘಾತ ಘಟನೆಗೆ ನಿಖರವಾದ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲವಾದರೂ, ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 57ರ (ಬಾಗಲಕೋಟೆ ಬಿಳಿಗಿರಿರಂಗನ ಬೆಟ್ಟ ) ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿ ನಡೆದಿದ್ದು, ಅದು ಇನ್ನುವವರೆಗೂ ಪೂರ್ಣಗೊಳ್ಳದೆ, ಅಪೂರ್ಣವಾಗಿ ಸಾಗಿದೆ. ಸರಿಯಾದ ರೀತಿಯಲ್ಲಿ ಸಂಚಾರಿ ಮಾರ್ಗದರ್ಶನ ಇಲ್ಲದ ಕಾರಣ ಇಲ್ಲಿಅಪಘಾತಗಳು ನಡೆಯುತ್ತಲೇ ಸಾಗಿವೆ. ಪ್ರಾಧಿಕಾರದ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಯಾವುದೇ ಮಾಹಿತಿ ಮಾರ್ಗದರ್ಶನ ಇಲ್ಲಿಲ್ಲ ಇದೇ ಕಾರಣದಿಂದ ಹಲವಾರು ಘಟನೆಗಳು ನಡೆದಿದ್ದರೂ, ನಿನ್ನೆ ದಿವಸ ಬೈಕ್ ಸವಾರರು ಪರಸ್ಪರ ಡಿಕ್ಕಿ ಸಂಭವಿಸಿ, ಇಬ್ಬರ ಪ್ರಾಣ ಹಾನಿಯಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹುಲ್ಲತ್ತಿ, ಆನ್ವೇರಿ, ದೇವರಗುಡ್ಡ, ಯಲ್ಲಾಪುರ, ಹೊನ್ನತ್ತಿ, ಸೇರಿದಂತೆ ಈ ಭಾಗದಲ್ಲಿ ಸಂಚರಿಸುವ ಅನೇಕ ವಾಹನ ಸವಾರರು ಭಯಭೀತರಾಗಿದ್ದಾರೆ. ಘಟನೆಯನ್ನು ಖಂಡಿಸಿ, ಅಧಿಕಾರಿಗಳ ನಿರ್ಲಕ್ಷತನವನ್ನು ಪರಿಗಣಿಸಿ, ಕೂಡಲೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಾವು ಕಂಡ ಕುಟುಂಬದವರಿಗೆ ತಲಾ 25 ಲಕ್ಷ ಪರಿಹಾರ ವಿತರಿಸಬೇಕು ಎಂದು, ವಿವಿಧ ಸಂಘಟನೆಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.