ಗದಗ 20: ಜಿಲ್ಲೆಯಲ್ಲಿ ಮಲಪ್ರಭಾ ಹಾಗೂ ಬೆಣ್ಣಿಹಳ್ಳ ಪ್ರವಾಹದಿಂದಾಗಿ ನರಗುಂದ ಹಾಗೂ ರೋಣ ತಾಲೂಕಿನ ಗ್ರಾಮಗಳು ಜಲಾವೃತದಿಂದಾಗಿ ಜನ ಸಂಕಷ್ಟಕ್ಕಿಡಾಗಿದ್ದಾರೆ. ಅವರಿಗೆ ಜಿಲ್ಲಾಡಳಿತ ಪುನರ್ವಸತಿ ಕಾರ್ಯ ಪೂರ್ಣಗೊಳಿಸಿ ತಾತ್ಕಾಲಿಕ ವಸತಿಗಾಗಿ ಶೆಡ್ಗಳನ್ನು ನಿರ್ಮಿಸಿರುತ್ತಾರೆ. ಕೊಣ್ಣೂರಿನ ಸಂತ್ರಸ್ಥ ಅನೇಕ ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯ ಒದಗಿಸಲು ಜಿಲ್ಲಾ ನಿಮರ್ಿತಿ ಕೇಂದ್ರದಿಂದ ಕೊಣ್ಣೂರಿನ ಎಪಿಎಂಸಿ ಯಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿಮರ್ಿಸಲಾಗುತ್ತಿದೆ. ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಂದು ಸ್ಥಳಕ್ಕೆ ಭೇಟಿ ನೀಡಿದ್ದು ಶೆಡ್ ನಿಮರ್ಾಣ ಕಾರ್ಯವನ್ನು ತೀವ್ರಗತಿಯಲ್ಲಿ ಪೂರೈಸಲು ಸಂತ್ರಸ್ಥರಿಗೆ ಅಗತ್ಯದ ತಾತ್ಕಾಲಿಕ ಮೂಲಭೂತ ಸೌಲಭ್ಯ ಕಲ್ಪಿಸಲು ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸದಸ್ಯ ರಾಜುಗೌಡ ಕೆಂಚನಗೌಡ್ರು, ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ನಿಮರ್ಿತಿ ಕೇಂದ್ರದ ವ್ಯವಸ್ಥಾಪಕ ಗಂಗಾಧರ ಶಿರೋಳ, ತಹಶೀಲ್ದಾರ ಕೋರಿಶೆಟ್ಟರ್, ಕೊಣ್ಣುರಿನ ಜನಪ್ರತಿನಿಧಿಗಳು, ಕಂದಾಯ ಹಾಗೂ ಗ್ರಾ.ಪಂ ಅಧಿಕಾರಿ ಸಿಬ್ಬಂದಿಗಳು ಇದ್ದರು.