ಮಹಿಳೆಗೆ ಸ್ವಾವಲಂಬನೆ ಕಲಿಸುವುದೇ ಸಮಾಜ ಸೇವೆ : ಮಹಾಂತೇಶ
ಮಹಾಲಿಂಗಪುರ,19 : ಮಹಿಳೆಯರಿಗೆ ದುಡಿಯುವ ಕೌಶಲ್ಯ ಕಲಿಸಿ ಸ್ವಾಭಿಮಾನದಿಂದ ಬದುಕುವ ಅವಕಾಶ ಕಲ್ಪಿಸುವುದೇ ನಿಜವಾದ ಸಮಾಜ ಸೇವೆ. ಆ ಕೆಲಸವನ್ನು ನಿಸ್ವಾರ್ಥದಿಂದ ಮಾಡಿದ ಚನ್ನಬಸು ಹುರಕಡ್ಲಿ ಮತ್ತು ಸ್ಫೂರ್ತಿ ಸಂಸ್ಥೆಯ ಕಾರ್ಯ ಮಾದರಿ ಎಂದು ಜಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿದರು.
ಸ್ಥಳೀಯ ಬಸವನಗರ ಸಮುದಾಯ ಭವನದಲ್ಲಿ ಜರುಗಿದ ಉಚಿತ ಸ್ವಯಂ ಉದ್ಯೋಗ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಸ್ವಯಂ ಉದ್ಯೋಗದಿಂದ ಮಹಿಳೆಯರಲ್ಲಿ ಸ್ವಾಭಿಮಾನ, ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ದಾರಿಯಾಗಿದೆ. ಇದು ಯಾರೂ ಕದಿಯಲಾಗದ ಕಾಣಿಕೆ ಎಂದರು.
ಸ್ಥಳೀಯ ಸಿ.ಎಂ.ಹುರಕಡ್ಲಿ ಫೌಂಡೇಶನ್ ಮತ್ತು ಶ್ರೀ ಐರಣಿ ಮಹಾಸಂಸ್ಥಾನ ಹೊಳೆಮಠ, ಸ್ಫೂರ್ತಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ದಾವಣಗೆರೆ ಇವರ ಸಹಯೋಗದಲ್ಲಿ ಮಹಿಳೆಯರಿಗೆ 105 ದಿನಗಳ ಉಚಿತ ಸ್ವಯಂ ಉದ್ಯೋಗ ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಲಾಯಿತು.
ಪುರಸಭೆಯ ನೂತನ ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಕರೆಹೊನ್ನ, ಅನಂತನಾಗ ಬಂಡಿ, ಅಪ್ಪಾಸಾಬ ನಾಲಬಂದ, ಲಕ್ಕಪ್ಪ ಭಜಂತ್ರಿ ಹಾಗೂ ಆರೋಗ್ಯ ಸಮಿತಯ ನೂತನ ನಾಮನಿರ್ದೇಶಿತ ಸದಸ್ಯರಾದ ಮಹಾಲಿಂಗಪ್ಪ ಮಾಳಿ, ಸಂಜು ಅಂಗಡಿ, ಮಾರುತಿ ಚನ್ನದಾಸರ, ಶಿಲ್ಪಾ ಉಪ್ಪಾರ ಹಾಗೂ ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ರೂ.ಗೆದ್ದ ಸ್ಥಳೀಯ ಪ್ರತಿಭೆ ರಂಜಾನ್ ಪೀರಜಾದೆ ಇವರನ್ನು ಸಿ.ಎಂ.ಫೌಂಡೇಶನ್ ವತಿಯಿಂದ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಗುಳ್ಳಪ್ಪ ಗೊಳಸಂಗಿ, ಮುಖಂಡರಾದ ಹನಮಂತ ಶಿರೋಳ, ಮಹಾಲಿಂಗಪ್ಪ ಕಂಠಿ, ವಿಜಯಕುಮಾರ ಸಬಕಾಳೆ, ಪ್ರಕಾಶ ಬಾಡನವರ, ಮಲಕಾಜಪ್ಪ ಹನಗಂಡಿ, ಕೃಷ್ಣಾ, ಬಸವರಾಜ ಗಿರಿಸಾಗರ, ಶಿವಾನಂದ ಕೊಣ್ಣೂರ, ಪುರಸಭಾ ಸದಸ್ಯೆ ಸವಿತಾ ಹುರಕಡ್ಲಿ, ಸುವರ್ಣಾ ಕರೆಹೊನ್ನ, ಸಿಂಧೂರ ಹಲಸಪ್ಪಗೋಳ, ತರಬೇತುದಾರ ಗುಂಡಪ್ಪ ಇತರರಿದ್ದರು.