ಮಕ್ಕಳಿಗೆ ದೇಶಪ್ರೇಮ, ಮಾನವೀಯ ಮೌಲ್ಯಗಳನ್ನು ಕಲಿಸಿ: ತೇರದಾಳ

ಅಥಣಿಯ ಸಿ.ಎಸ್.ಕಿತ್ತೂರ ಪ್ರೌಢಶಾಲೆಯ ವಾಷರ್ಿಕೋತ್ಸವ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳ ಬೀಳ್ಕೊಡುವ ಸಮಾರಂಭದ ಮುಖ

ಅಥಣಿ 23: ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಮಕ್ಕಳನ್ನು ಓಟದ ಕುದುರೆಯಂತೆ ಓದಿಸದೇ ಅವರಲ್ಲಿ ಮಾನವೀಯ ಮೌಲ್ಯಗಳನ್ನು, ದೇಶಪ್ರೇಮ, ನಮ್ಮ ಭಾಷೆ, ಸಂಸ್ಕ್ರತಿ, ಕಲೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವ ಗುಣಗಳನ್ನು ಕಲಿಸಬೇಕು ಎಂದು ಡಾ.ಮಹೇಶ ತೇರದಾಳ ಹೇಳಿದರು.

ಅವರು ಸ್ಥಳೀಯ ಕೆ.ಎಲ್.ಇ.ಸಂಸ್ಥೆಯ ಸಿ.ಎಸ್.ಕಿತ್ತೂರ ಪ್ರೌಢಶಾಲೆಯ ವಾಷರ್ಿಕೋತ್ಸವ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಾನು ಕನ್ನಡ ಮಾಧ್ಯಮದಲ್ಲಿ ಓದಿದ ಸಿ.ಎಸ್.ಕಿತ್ತೂರ ಪ್ರೌಢಶಾಲೆಯ ಹಳೆಯ ವಿದ್ಯಾಥರ್ಿ. ಆಂಗ್ಲ ಮಾಧ್ಯಮದಲ್ಲಿ ಕಲಿತವರಿಗೆ ವಿಷಯಗಳು ಹೃದಯದಲ್ಲಿ ಶಾಶ್ವತವಾಗಿ ಪರಿಪೂರ್ಣವಾಗಿ ಉಳಿಯುವದಿಲ್ಲ, ಕನ್ನಡ ಮಾಧ್ಯಮದಲ್ಲಿ ಕಲಿತವರೆ ಧನ್ಯರು. ಕನ್ನಡ ಭಾಷೆಯಲ್ಲಿಯೇ ಶಿಕ್ಷಣ ಪಡೆದಾಗ ಪರಿಪೂರ್ಣ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 

 ಅಧ್ಯಕ್ಷತೆ ವಹಿಸಿದ್ದ  ಸ್ಥಾನಿಕ ಆಡಳಿತ ಮಂಡಳಿಯ  ಕಾಯರ್ಾಧ್ಯಕ್ಷ ಡಾ. ಗೌರೀಶ ಪಾಟೀಲ ಮಾತನಾಡಿ ಮಕ್ಕಳು ತಮ್ಮ ಆರೋಗ್ಯವಂತವನ್ನು ಕಾಪಾಡಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ವಿ ಹೊಂದುವ ಗುರಿಯನ್ನು ಹೊಂದಬೇಕು. ಆ ಗುರಿಯ ಸಾಧನೆಗೆ ಸತತ ಪ್ರಯತ್ನ ಮಾಡಬೇಕು.  ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳು ದೈರ್ಯದಿಂದ ವಾಷರ್ಿಕ ಪರಿಕ್ಷೇಯನ್ನು ಹೇಗೆ ಬರೆಯಬೇಕು ಎಂಬ ಯಶಸ್ಸಿನ ಸೂತ್ರಗಳನ್ನು ತಿಳಿಸಿಕೊಟ್ಟರು. 

 ಮುಖ್ಯೋಪಾಧ್ಯಾಯ ಎಸ್.ಜಿ.ಸಲಗರೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಕೆ.ಎಲ್.ಇ.ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದ ಅವರು ಮಕ್ಕಳ ಸವರ್ಾಂಗೀಣ ಅಭಿವೃದ್ದಿಗಾಗಿ ಶಾಲೆಯಲ್ಲಿ ಮಾಡುತ್ತಿರುವ ಚಟುವಟಿಕೆಗಳ ಬಗ್ಗೆ ತಿಳಿಸಿದರು.

 ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಮತ್ತು ಸಾಂಸ್ಕೃತಿ, ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

 ಈ ವೇಳೆ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಅಲ್ಲಪ್ಪಣ್ಣ ನಿಡೋಣಿ, ಶಿವುಕುಮಾರ ಹಂಜಿ, ನಿವೃತ್ತ ಶಿಕ್ಷಕ ಎಂ.ಎನ್.ಚಿಂಚೋಳ್ಳಿ ಎಸ್.ಗೋಠೆ, ಆರ್.ಡಿ.ಸವದಿ, ಬಿ.ಎಂ.ಚನ್ನವರ, ಎಸ್.ಎಸ್.ತುಪ್ಪದ, ಎಸ್.ಎಸ್.ಹಳಬರ, ಎಚ್.ಎಸ್.ಪವಾರ ಉಪಸ್ಥಿತರಿದ್ದರು.  ಎಸ್.ಜಿ ಸಲಗರೆ ಸ್ವಾಗತಿಸಿದರು. ಮಹಾಂತೇಶ ಮಲಾಬಾದಿ  ನಿರೂಪಿಸಿದರು. ಆರ್.ಡಿ.ಸವದಿ ವಂಧಿಸಿದರು.