ತೆರಿಗೆ ವಸೂಲಾತಿ ಅಭಿಯಾನ; ರೂ. 1,52,65133 ಕರ ಸಂಗ್ರಹ

Tax Recovery Campaign; Rs. 1,52,65133 draft collection

ತೆರಿಗೆ ವಸೂಲಾತಿ ಅಭಿಯಾನ; ರೂ. 1,52,65133 ಕರ ಸಂಗ್ರಹ 

ಕಾರವಾರ 13: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ತೆರಿಗೆ ವಸೂಲಾತಿ ಬಗ್ಗೆ ಹೆಚ್ಚಿನ ಪ್ರಚಾರ ಹಾಗೂ ಜಾಗೃತಿಯೊಂದಿಗೆ 2024-25 ನೇ ಸಾಲಿನ ತೆರಿಗೆ ವಸೂಲಾತಿ ಅಭಿಯಾನವನ್ನು ಹಮ್ಮಿಕೊಳ್ಳಗಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರುಗಳು ಹಾಗೂ ಗ್ರಾಮ ಪಂಚಾಯತ ಅಧಿಕಾರಿಗಳು, ಸಿಬ್ಬಂದಿಗಳ ಸಹಾಯದಿಂದ ಡಿ. 12 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ರವರೆಗೆ ತೆರಿಗೆ ವಸೂಲಾತಿ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಅದರಂತೆ 2024-25 ನೇ ಸಾಲಿನ ಒಟ್ಟು ಬೇಡಿಕೆ ರೂ. 23 ಕೋಟಿ 67 ಲಕ್ಷಗಳಾಗಿದ್ದು, ಡಿ.12 ರಂದು ನಡೆದ ಒಂದು ದಿನದ ತೆರಿಗೆ ವಸೂಲಾತಿ ಅಭಿಯಾನದಲ್ಲಿ  ರೂ. 1,52,65,133 ಕರ ಸಂಗ್ರಹಿಸಲಾಗಿದೆ. 

ಕರ ವಸೂಲಾತಿಗೆ ಯಾವುದೇ ಒತ್ತಡ ಹೇರದೆ ಈ ರೀತಿ ಸಾಧನೆ ಮಾಡಿರುವುದು ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನರು ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸಿರುವುದು ಸಂತೋಷದ ವಿಷಯವಾಗಿದೆ., ಒಂದು ದಿನದ ತೆರಿಗೆ ವಸೂಲಾತಿಯಲ್ಲಿ ಅಭಿಯಾನದಲ್ಲಿ ಪಾಲ್ಗೊಂಡ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರುಗಳು ಹಾಗೂ ಗ್ರಾಮ ಪಂಚಾಯತ ಅಧಿಕಾರಿಗಳು, ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ(ಅಭಿವೃದ್ಧಿ) ಅಭಿನಂದನೆಯನ್ನು ಸಲ್ಲಿಸಿದ್ದಾರೆ.