ತಾಳಿಕೋಟಿ ಸಹಕಾರಿ ಬ್ಯಾಂಕ್ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆ: ಮನ್ಸೂರ
ತಾಳಿಕೋಟಿ 15: ಪಟ್ಟಣದಲ್ಲಿರುವ ತಾಳಿಕೋಟಿ ಸಹಕಾರಿ ಬ್ಯಾಂಕ್ ಜಿಲ್ಲೆಯಲ್ಲಿಯೇ ಹೆಸರುವಾಸಿಯಾದ ಪ್ರತಿಷ್ಠಿತ ಹಣಕಾಸಿನ ಸಂಸ್ಥೆಯಾಗಿ ಬೆಳೆದಿದೆ ಇದರ ಹಿತ ಕಾಯಲು ಆಡಳಿತ ಮಂಡಳಿಗೆ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕಳಿಸುವ ಜವಾಬ್ದಾರಿ ಶೇರುದಾರರ ಮೇಲಿದೆ ಎಂದು ಅಲ್ಪಸಂಖ್ಯಾತ ಮುಖಂಡ ಇಬ್ರಾಹಿಂ ಮನ್ಸೂರ ಹೇಳಿದರು. ಬುಧವಾರ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಓಲ್ಡ್ ಈಸ್ ಗೋಲ್ಡ್ ಪೆನಲ್ ವತಿಯಿಂದ ಹಮ್ಮಿಕೊಂಡ ಅಲ್ಪಸಂಖ್ಯಾತ ಸಮಾಜದ ಶೇರುದಾರರ ಸಭೆಯಲ್ಲಿ ಅವರು ಮಾತನಾಡಿದರು.
ಈ ಪೆನಲ್ ದ ಅಭ್ಯರ್ಥಿಗಳು ಕಳೆದ ಹಲವಾರು ವರ್ಷಗಳಿಂದ ಈ ಬ್ಯಾಂಕಿನಲ್ಲಿ ಆಡಳಿತ ನಡೆಸುತ್ತಿದ್ದಾರೆ ಇವರ ಸೇವೆ ಕೇವಲ ಬ್ಯಾಂಕಿಗಾಗಿ ಇರದೇ ಪಟ್ಟಣದ ಹಲವಾರು ಕ್ಷೇತ್ರಗಳಲ್ಲಿಯೂ ಇದೆ ಇವರನ್ನು ಮತ್ತೇ ಮತ ಆಶೀರ್ವಾದ ಮಾಡಿ ಆಯ್ಕೆ ಮಾಡಲು ನಾವೆಲ್ಲರೂ ಪ್ರಯತ್ನಿಸೋಣ ಎಂದರು. ಪೆನಲ್ ಅಭ್ಯರ್ಥಿಗಳಾದ ಮುರಿಗೆಪ್ಪ ಸರಶೆಟ್ಟಿ,ಕಾಶಿನಾಥ ಸಜ್ಜನ ಹಾಗೂ ದ್ಯಾಮನಗೌಡ ಪಾಟೀಲ ಮಾತನಾಡಿ ನಾವು ಯಾವುದೇ ರೀತಿಯ ಭೇದ ಭಾವ ಮಾಡದೇ ಎಲ್ಲ ವರ್ಗದ ಶೇರುದಾರರ ಹಿತ ಕಾಯುವ ಕೆಲಸ ಮಾಡಿದ್ದೇವೆ ನಿಮ್ಮೆಲ್ಲರ ಆಶೀರ್ವಾದ ಮತ್ತೊಮ್ಮೆ ನಮ್ಮ ಮೇಲಿರಲಿ ಎಂದು ಮನವಿ ಮಾಡಿಕೊಂಡರು.
ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಕಾರ್ಯಕ್ರಮದ ಸಾನಿಧ್ಯವಸಿದ್ದರು.ವೇದಿಕೆಯಲ್ಲಿ ಪೆನಲ್ ಅಭ್ಯರ್ಥಿಗಳಾದ ದತ್ತಾತ್ರೇಯ ಹೆಬಸೂರ, ಈಶ್ವರ್ಪ ಬಿಳೇಭಾವಿ,ಬಾಬು ಹಜೇರಿ,ಚಿಂತಪ್ಪಗೌಡ ಯಾಳಗಿ, ನಾಗಪ್ಪ ಚಿನಗುಡಿ, ಸುರೇಶ್ ಪಾಟೀಲ, ಸಂಜೀವಪ್ಪ ಬರದೇನಾಳ, ರಾಮಪ್ಪ ಕಟ್ಟಿಮನಿ ಗಣ್ಯರಾದ ಗನಿಸಾಬ ಲಾಹೋರಿ, ಮಸೂಮಸಾಬ್ ಕೆಂಭಾವಿ, ಕಾಶಿನಾಥ ಮುರಾಳ,ಸಿಕಂದರ ವಠಾರ,ಅಬ್ದುಲ್ ಸತ್ತಾರ ಅವಟಿ,ವಾಸು ಹೆಬಸೂರ,ಖಾಜಾ ಹುಸೇನ ಮುಲ್ಲಾ,ಹಸನಸಾಬ ಮನಗೂಳಿ,ಮಹಿಬೂಬಸಾಬ ಹಂಡೇಬಾಗ,ಹನೀಫ್ ಬೇಪಾರಿ,ಹಸನ್ ಕೊರ್ಕಿ, ಮಹಿಬೂಬ್ ಕೆಂಭಾವಿ, ತನ್ವೀರ್ ಮನಗೂಳಿ,ಜಗದೀಶ ಬಿಳೆಭಾವಿ ಮತ್ತಿತರರು ಇದ್ದರು.