ಲೋಕದರ್ಶನ ವರದಿ
ಕುಕನೂರ: ಹಮಾಲರು ಕೇವಲ ಲೈಸನಸ್ ಪಡೆದುಕೊಂಡು ಹಗಲು ರಾತ್ರಿ ಯನ್ನದೆ ದುಡಿದು ಮನೆಗೆ ಹೋಗುವುದಲ್ಲ ತಮ್ಮ ಮಕ್ಕಳಿಗೆ ಉತ್ತಮವಾಗಿರುವಂತಹ ಶಿಕ್ಷಣ ನೀಡಬೇಕು, ಹಮಾಲರ ಕ್ಷೇಮಾವೃಧ್ದಿಗೆ ಸರಕಾರದಿಂದ ನೀಡುವ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಿ ಎಂದು ರಾಜ್ಯ ಹಮಾಲರ ಸಂಘದ ಪ್ರಧಾನ ಕಾರ್ಯದಶರ್ಿ ಮಹೇಶ ಪತ್ತಾರ ಹೇಳಿದರು.
ಪಟ್ಟಣದ ರುದ್ರಮುನಿಶ್ವರ ಹಮಾಲರ ಮತ್ತು ಕಾಮರ್ಿಕರ ಸಂಘದ ಕಛೇರಿಯಲ್ಲಿ ಹಮಾಲರ ಮಕ್ಕಳಿಗೆ ರಾಜ್ಯ ಹಮಾಲಿ ಮತ್ತು ಕಾಮರ್ಿಕ ಪಡೆರೆಷನ್ ವತಿಯಿಂದ ನೀಡುವ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದರು, ಸರಕಾರ ನೀಡುವ ಸೌಲಭ್ಯವನ್ನು ಬಳಿಸಿಕೊಂಡು ಹಮಾಲರು ತಮ್ಮ ಮಕ್ಕಳಿಗೆ ಉತ್ತಮವಾಗಿರುವಂತಹ ಶಿಕ್ಷಣವನ್ನು ನೀಡಿದಾಗ ಮಾತ್ರ ಸಾರ್ಥಕವಾಗುತ್ತೆದೆ, ಈಗಾಗಲೇ ಜಾರಿಯಲ್ಲಿರುವ ಭವಿಷ್ಯ ನಿಧಿ,ಕಾಯಕ ನಿಧಿ ಯೋಜನೆಗಳು ಉತ್ತಮವಾಗಿವಿ, ಶಿಘ್ರದಲ್ಲೆ ವಿಶೇಷವಾದ ಸ್ಮಾರ್ಟ ಕಾರ್ಡಗಳು ಬರಲಿವೆ ಅದರಲ್ಲಿ ಹಮಾಲರ ಆಧಾರ ಕಾರ್ಡ,ಬ್ಯಾಂಕ್ ಪುಸಕ್ತದ ಖಾತೆ ನಂ, ಲೈಸ್ನಸ್ ನಂ ಸೇರಿದಂತೆ ಪ್ರತಿಯೊಂದು ಮಾಹಿತಿ ಒಂದೇ ಕಾಡರ್ಿನಲ್ಲಿ ಒಳಗೊಂಡಿರುತ್ತೆದೆ,
ಹಮಾಲರ ನಿವೃತ್ತಿ ನಂತರದ ಜೀವನ ತುಂಬಾ ಕಷ್ಟಕರವಾಗಿದೆ ಅಂತವರಿಗೆ ನಿವೃತ್ತಿಯ ನಂತರ ಪಿಂಚಣಿಗಾಗಿ ಸರಕಾರಕ್ಕೆ ಹೋರಾಟದ ಮೂಲಕ ಈ ಬಾರಿಯ ಅಧಿವೇಶನದಲ್ಲಿ ಮನವಿ ಸಲ್ಲಿಸುತ್ತೆವೆ ಆ ಕರ್ಯಕ್ರಮಕ್ಕೆ ಕುಕನೂರ ಪಟ್ಟಣದಿಂದ ಹಮಾಲರು ಆಗಮಿಸಬೇಕು ಎಂದು ಹೇಳಿದರು. ರುದ್ರೇಶ ಆರುಬೆರಳಿನ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಅಧ್ಯಕ್ಷರಾದ ನಿರುಪಾದಿ ಗಂಗಾವತಿ, ಸಂಘದ ಅಧ್ಯಕ್ಷ ನಿಂಗಪ್ಪ ಗೊಲರ್ೆಕೊಪ್ಪ, ಉಪಾಧ್ಯಕ ವಿರುಪಾಕ್ಷಪ್ಪ ಭಂಡಾರಿ,ದೇವಪ್ಪ ಗುಡದಳ್ಳಿ,ತಿರುಪತಿ ಮಾನಿ,್ವಚಂದ್ರಪ್ಪ ಆರುಬೆರಳಿನ್,ದೊಡ್ಡಈರಪ್ಪ ಆರುಬೆರಳಿನ, ಚೆನ್ನಯ್ಯ ನಿಲುಗಿಂದಮಠ,ಬಸವರಾಜ ಅಣ್ಣಿಗೇರಿ, ಹನುಮಪ್ಪ ಬಂಡಾರಿ, ಇತರರು ಇದ್ದರು.