ಕಾಲುವೆಗಳ ಕಾಮಗಾರಿ ಸ್ಥಗಿತಗೊಳಿಸಿದ ಬಗ್ಗೆ ಕ್ರಮಕೈಗೊಳ್ಳಿ : ಬಿ.ಗಂಗಾಧರ್
ಕಂಪ್ಲಿ 20: ತಾಲ್ಲೂಕಿನ ರಾಮಸಾಗರ, ಕಂಪ್ಲಿ ಹಾಗೂ ಬೆಳಗೋಡುಹಾಳು ಗ್ರಾಮದಲ್ಲಿ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವ ಆರ್‌ಎನ್‌ಎಸ್ ಕಂಪನಿಯವರು ಏಕಾಏಕಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದು, ಇದರಿಂದ ಈ ಭಾಗದ ರೈತರಿಗೆ ತೀವ್ರವಾದ ತೊಂದರೆಯಾಗಿದ್ದು, ಕೂಡಲೇ ಕಂಪನಿಯವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು ಕರ್ನಾಟಕ ನೀರಾವರಿ ನಿಗಮದ ಮುಖ್ಯ ಅಭಿಯಂತರರಾದ ದಾಸರ ಹನುಮಂತಪ್ಪನವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್ ಬಿ ಅವರು ವಿಜಯನಗರ ಕಾಲುವೆಗಳಾದ ರಾಮಸಾಗರ, ಕಂಪ್ಲಿ ಬೆಳಗೋಡುಹಾಳು ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಆರ್‌ಎನ್‌ಎಸ್ ಕಂಪನಿಯವರು ವಿನಾಕಾರಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಈ ಭಾಗದ ರೈತರು ಕಾಲುವೆಗಳ ಆಧುನಿಕರಣ ಕಾಮಗಾರಿಯನ್ನು ಮುಗಿಸಲು 7 ಕ್ಲೋಸರ್‌ಗಳ ಅವಧಿಯನ್ನು ಬಿಟ್ಟುಕೊಟ್ಟ ನಂತರವೂ ಕಂಪನಿಯವರು ಕಾಮಗಾರಿಗಳನ್ನು ಮುಗಿಸಿಲ್ಲ. ಎಫ್.ಐ.ಸಿ. ಕ್ರಾಸಿಂಗ್ ಕಾಮಗಾರಿಯನ್ನು ನಿರ್ವಹಿಸಿಲ್ಲ.ಇದರಿಂದಾಗಿ ಹಿಂಗಾರು ಹಂಗಾಮಿನ ಬೆಳೆಗಳಿಗೆ ರೈತರಿಗೆ ನೀರನ್ನು ಕೊಡುವುದು ಕಷ್ಟ ಸಾಧ್ಯವಾಗಿದೆ. ಜೊತೆಗೆ ಕಾಲುವೆಗಳ ದುರಸ್ತಿ ಮಾಡಿದ ಕಂಪನಿಯವರು ಕಾಲುವೆಗಳ ದಂಡೆಗಳ ಮೇಲೆ ಸೂಕ್ತ ರೀತಿಯಲ್ಲಿ ಮರ‌್ರಂನ್ನು ಹಾಕದೇ ಇರುವುದರಿಂದ ರೈತರ ಎತ್ತಿನ ಬಂಡಿ, ಟ್ಯಾಕ್ಟರ್‌ಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ರೈತರು ತಾವು ಬೆಳೆದ ಫಸಲನ್ನು ಸಾಗಿಸುವುದಕ್ಕೆ ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಈ ಬಗ್ಗೆ ರೈತರು ಪ್ರಶ್ನಿಸಿದರೆ ಕಂಪನಿಯವರು ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದಾರೆಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವ ಕಂಪನಿಯವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಅಭಿಯಂತರ ದಾಸರ ಹನುಮಂತಪ್ಪ ಅವರು ಕಾಮಗಾರಿ ಕೈಗೆತ್ತಿಕೊಂಡಿರುವ ಕಂಪನಿಯವರೊಂದಿಗೆ ಚರ್ಚಿಸಿ ಶೀಘ್ರವಾಗಿ ಕಾಮಗಾರಿಯನ್ನು ಮುಗಿಸುವಂತೆ ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಜಿಲ್ಲಾ ಯುವ ಘಟಕದ ಅಧ್ ಈ ಬಗ್ಗೆ ರೈತರು ಪ್ರಶ್ನಿಸಿದರೆ ಕಂಪನಿಯವರು ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದಾರೆಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವ ಕಂಪನಿಯವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಅಭಿಯಂತರ ದಾಸರ ಹನುಮಂತಪ್ಪ ಅವರು ಕಾಮಗಾರಿ ಕೈಗೆತ್ತಿಕೊಂಡಿರುವ ಕಂಪನಿಯವರೊಂದಿಗೆ ಚರ್ಚಿಸಿ ಶೀಘ್ರವಾಗಿ ಕಾಮಗಾರಿಯನ್ನು ಮುಗಿಸುವಂತೆ ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೆ.ಹರ್ಷಿತ್,ತಾಲ್ಲೂಕು ಗೌರವಾಧ್ಯಕ್ಷ ವಾಬ್‌ಸಾಬ್, ಗಾದಿಲಿಂಗಪ್ಪ, ಮುತ್ತಪ್ಪ, ಜಿ.ಮಂಜು ಸೇರಿದಂತೆ ರೈತರು ಇದ್ದರು.