ಹುಲಿಗಿ ಗ್ರಾಮದಲ್ಲಿಟಿ ಬೀ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ
ಕೊಪ್ಪಳ 07 : ತಾಲೂಕಿನ ಹುಲಿಗಿ ಗ್ರಾಮ ದಲ್ಲಿ ಶನಿವಾರ ಬೆಳಿಗ್ಗೆ ಟಿ ಬೀ ಮುಕ್ತ ಭಾರತಕ್ಕಾಗಿ 100 ದಿನಗಳ ಅಭಿಯಾನ ಹಮ್ಮಿಕೊಳ್ಳಲಾಯಿತು ಬರುವ 2025ರ ಡಿಸೆಂಬರ್ ಅಂತ್ಯದ ವರೆಗೆ ಟಿ ಬೀ ಮುಕ್ತ ಭಾರತ ನಿರ್ಮಾಣಕ್ಕಾಗಿ ಶ್ರಮಿಸೋಣ, ಕ್ಷಯರೋಗದ ಬಗ್ಗೆ ಭಯ ಪಡೆಯುವ ಅಗತ್ಯವಿಲ್ಲ, ಮುಂಜಾಗ್ರತೆ ವಹಿಸುವುದು ಮುಖ್ಯ, ದೇಶ ರಿಜೇತೆಗಾ,ಟಿಬಿ ಹಾರೇಗಾ ಎಂಬ ಜಯ ಘೋಷಣೆ ಕೂಗಿ ಕ್ಷಯರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಹುಲಿಗಿ ಗ್ರಾಮದಲ್ಲಿ ಯಶಸ್ವಿಯಾಗಿ ಜರುಗಿತು, ಸದರಿ ಅಭಿಯಾನದಲ್ಲಿ ಹುಲಿಗಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಫಿವುಲ್ಲಾ, ತಾಲೂಕ ವೈದ್ಯಾಧಿಕಾರಿ ಡಾ. ರಾಮಾಂಜನೇಯ ಹುಲಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಧ ನೀಲಮ್ಮ ಗುಂಗಾಡಿ, ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ರಮೇಶ್ ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಅಲ್ಲದೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು