ಸ್ವಚ್ಛತಾ ಸಪ್ತಾಹ ಕಾರ್ಯಕ್ರಮಕ್ಕೆ ಟಿ. ಕೃಷ್ಣಮೂತರ್ಿ ಚಾಲನೆ


ಕೊಪ್ಪಳ 23: ಕೊಪ್ಪಳ ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಮತ್ತು ಶಿಕ್ಷಣ ಇಲಾಖೆ, ತಾಲೂಕ ಪಂಚಾಯತ್ ಯೂನಿಸೆಫ್ ಸಹಯೋಗದಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾದ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮಕ್ಕೆ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಟಿ. ಕೃಷ್ಣಮೂತರ್ಿ ಅವರು ಹಸಿರು ನಿಶಾನೆ ತೊರಿಸುವುದರ ಮೂಲಕ ಚಾಲನೆ ನೀಡಿದರು.  

ಸಪ್ತಾಹಕ್ಕೆ ಚಾಲನೆ ನೀಡಿದ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಟಿ. ಕೃಷ್ಣಮೂತರ್ಿ ಅವರು ಮಾತನಾಡಿ, "ಸ್ವಚ್ಛ ಭಾರತ ಮಿಷನ್ (ಗ್ರಾಮ) ಯೋಜನೆಯಡಿ ಬೇಸ್ಲೈನ್ ಸವರ್ೇ 2012"ರ ಪ್ರಕಾರ ಕೊಪ್ಪಳ ತಾಲೂಕು ಈಗಾಗಲೇ ಸಂಪೂರ್ಣ ಬಯಲು ಬಹಿದರ್ೆಸೆ ಮುಕ್ತವಾಗಿದ್ದು, ಈ ನಿಟ್ಟಿನಲ್ಲಿ ವೈಯಕ್ತಿಕ ಶೌಚಾಲಯಗಳ ಬಳಕೆಯ ಕುರಿತು, ಘನತ್ಯಾಜ್ಯ ವಿಲೇವಾರಿಯ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆಯ ಹಿನ್ನೆಲೆಯಲ್ಲಿ ಕಸವನ್ನು ವಣಕಸ ಹಾಗೂ ಹಸಿಕಸವನ್ನು ಪ್ರತ್ಯೇಕವಾಗಿ ಕಸ ಸಂಗ್ರಹಣ ವಾಹನಗಳಿಗೆ ಒದಗಿಸಲು ಹಾಗೂ ಅಂಗನವಾಡಿ ಮತ್ತು ಶಾಲಾ ವಿದ್ಯಾಥರ್ಿಗಳಿಗೆ ಶುಚಿತ್ವದ ಮಹತ್ವವನ್ನು ತಿಳಿಸಲು ಯೂನಿಸೆಫ್ ಸಹಯೋಗದಲ್ಲಿ "ವಾಷ್ ಕಾರ್ಯಕ್ರಮದಡಿಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳ ಆದೇಶದ ಮೇರೆಗೆ ಆಚರಿಸಲಾಗುತ್ತಿದ್ದು, ಸಪ್ತಾಹವು  ಜು. 30 ರವರೆಗೆ ಜರುಗಲಿದೆ.  ವೈಯಕ್ತಿಕ ಶೌಚಾಲಯಗಳ ಬಳಕೆಯ ಮಹತ್ವ, ಸ್ವಚ್ಛತೆಯ ಜಾಗೃತಿ, ಪ್ಲಾಸ್ಟೀಕ್ ಬಳಕೆ ನಿಷೇದ ಮತ್ತು ಶಾಲಾ ಮಕ್ಕಳಿಗೆ ಕೈ ತೊಳೆಯಿವುದು ಮತ್ತು ಸ್ವಚ್ಛತೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು. ಸ್ವಚ್ಛತಾ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.