ಬೆಳಗಾವಿ 05: ಉಜ್ವಲ ಸ್ಪೋಟ್ಸ ಕ್ಲಬ್ ಬೆಳಗಾವಿ ವತಿಯಿಂದ ಆಯೋಜಿಸಲಾಗಿದ್ದ ಅಂತರ ಕಾಲೇಜ ಟಿ. 25ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಕ್ರಿಕೆಟ ತಂಡವೂ ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಕ್ರಿಕೆಟ ಪಂದ್ಯಾವಳಿಯಲ್ಲಿ ಸುಮಾರು 16 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯವು ಆರ್.ಪಿ.ಡಿ. ಮತ್ತು ಗೋಗಟೆ ಮಹಾವಿದ್ಯಾಲಯಗಳ ಮದ್ಯೆ ನಡೆಯಿತು.
ವಿದ್ಯಾಥರ್ಿಗಳ ಈ ಸಾಧನೆಗೆ ಮಹಾವಿದ್ಯಾಲಯದ ಚೇರಮನ್ ವಿ. ಎಂ. ದೇಶಪಾಂಡೆ, ಪ್ರಾಂಶುಪಾಲ ಡಾ. ಎಚ್. ಎಚ್. ವೀರಾಪೂರ, ಪ್ರೋ. ಗ್ಯಾಮಾನಾಯಿಕ ಎಚ್ ಜೀಮ್ಖಾನಾ ಚೇರಮನ್, ದೈಹಿಕ ನಿದರ್ೇಶಕರು ಪ್ರೋ. ಮಂಜುನಾಥಗೌಡ ಮತ್ತು ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಅಭಿನಂದಿಸಿದ್ದಾರೆ.