ಯುವಕರನ್ನು ಪ್ರೇರೇಪಿಸುವಂತಿವೆ ಸ್ವಾಮಿ ವಿವೇಕಾನಂದರ ಚಿಂತನೆಗಳು: ಪ್ರಿಯಾ ಭಟ್ಟಡ
ರಾಯಬಾಗ 17: ಸ್ವಾಮಿ ವಿವೇಕಾನಂದರ ಚಿಂತನೆಗಳು ಯುವಕರನ್ನು ಪ್ರೇರೇಪಿಸುವಂತಿವೆ. ಜೊತೆಗೆ ಅವರಲ್ಲಿ ಹೊಸ ಶಕ್ತಿ ಮತ್ತು ಪ್ರಜ್ಞೆಯನ್ನು ತುಂಬುತ್ತಿವೆ ಎಂದು ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ ಹೇಳಿದರು.
ಗುರುವಾರ ತಾಲೂಕಿನ ದಿಗ್ಗೆವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಜಯಂತಿಯನ್ನು ಭಾರತದಲ್ಲಿ ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಯುವ ದಿನದಂದು, ವೈಯಕ್ತಿಕ ಅಭಿವೃದ್ಧಿ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಲು ಯುವಕರನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದಿನ ಯುವಕರು ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಎಚ್.ಬಿ.ತುಳಸೀಗಿರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ.ಸ.ಅಭಿಯೋಜಕ ಮಹಾವೀರ ಗಂಡವ್ವಗೋಳ, ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಕಾರ್ಯದರ್ಶಿ ಎಸ್.ಬಿ. ಬಿರಾದಾರಪಾಟೀಲ, ಹಿರಿಯ ವಕೀಲರಾದ ಎಲ್.ಬಿ.ಚೌಗುಲೆ, ಡಿ.ಎಚ್.ಯಲ್ಲಟ್ಟಿ, ಎ.ಕೆ.ಚೌಗಲಾ, ಎ.ಬಿ.ನಾಗರಾಳೆ, ವಿ.ಬಿ.ಬಂಡಗರ, ವಿನಯನಿಧಿ ಕಮಾಲ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.