ಸಂಭ್ರಮದಿಂದ ಸುರೇಶ ಯಾದವ ಫೌಂಡೇಶನ್‌ನಿಂದ ಹೋಳಿ ಹಬ್ಬ ಆಚರಣೆ

Suresh Yadav Foundation celebrates Holi with enthusiasm

ಸಂಭ್ರಮದಿಂದ ಸುರೇಶ ಯಾದವ ಫೌಂಡೇಶನ್‌ನಿಂದ ಹೋಳಿ ಹಬ್ಬ ಆಚರಣೆ  

ಬೆಳಗಾವಿ 14: ಪೂರ್ವದಲ್ಲಿ ತಾರಕಾಸುರನೆಂಭ ರಾಕ್ಷಸನಿದ್ದನು ಆತ ದುರಹಂಕಾರಿಯು ಹಾಗೂ ಕ್ರೂರಿಯು ಆಗಿದ್ದನು. ತಾರಕಾಸುರ ತನಗೆ ಸಾವು ಬಾರದಿರಲಿ ಎಂದು ತಪಸ್ಸು ಮಾಡಿದ್ದನು. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ. ಬಂದರು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂಬ ವರವನ್ನು ಕೇಳಿದ್ದನು. ತಾರಕಾಸುರನ ತಪ್ಪಸ್ಸನ್ನು ಮೆಚ್ಚಿ ಬ್ರಹ್ಮ ವರವನ್ನು ಕೊಡುತ್ತಾನೆ.ಆಗ ತನಗೆ ವರ ಸಿಕ್ಕಿದೆ ಎಂದು ತಾರಕಾಸುರ ಮೆರೆಯುತ್ತಿರುತ್ತಾನೆ. ಇತ್ತ ಭೋಗ ಸಮಾಧಿಯಲ್ಲಿ ಇದ್ದ ಶಿವ ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾಧ್ಯವಿರಲಿಲ್ಲ. ಆಗ ದೇವತೆಗಳು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಮನ್ಮಥ ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಈ ವೇಳೆ ಭೋಗ ಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿನಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದುಃಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ ಈ ಘಟನೆ ನಡೆದದ್ದು ಫಲ್ಗುಣ ಶುದ್ಧ ಪೂರ್ಣಿಮೆಯಂದು ಆದ್ದರಿಂದ ಈ ದಿನವನ್ನು ಕಾಮನ ಹುಣ್ಣಿಮೆ ಯಾಗಿ ಆಚರಿಸಲ್ಪಡುತ್ತದೆ ಎಂದು ಸುರೇಶ ಯಾದವ ಹೇಳಿದರು. ಬೆಳಗಾವಿಯ ರಾಮತೀರ್ಥ ನಗರದ ಸುರೇಶ ಯಾದವ ಪೌಂಡೇಶನ್ ಹಾಗೂ ರಾಮತೀರ್ಥ ನಗರದ ರಹವಾಸಿಗಳ ಸಂಯುಕ್ತ ಆಶ್ರಯದಲ್ಲಿ ಹೋಳಿ ಹಬ್ಬದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಮತ್ತೊಂದು ಪುರಾಣ ಕಥೆಯ ಪ್ರಕಾರ ಮನ್ಮಥನು ಶಿವನ ತಪಸ್ಸನ್ನು ಭಂಗಗೊಳಿಸಿದ್ದಕ್ಕಾಗಿ ಶಿವನು ತನ್ನ ಮೂರನೇ ಕಣ್ಣು ತೆರೆದು ಮನ್ಮಥನನ್ನು ಭಸ್ಮ ಮಾಡಿದನು. ಹೋಳಿ ಹಬ್ಬದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು, ರಾಮತೀರ್ಥ ನಗರದಲ್ಲಿ ಹೋಳಿ ಹಬ್ಬದ ನಿಮಿತ್ಯ ಆಯೋಜಿಸಲಾದ ರಂಗ -ಪಂಚಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಉಂಟುಮಾಡುತ್ತದೆ. ಆಯೋಜನೆ ಮಾಡಿದ ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷ ಸುರೇಶ ಯಾದವ ಅವರು ಅಭಿನಂದನಾರ್ಹರು. ಇದು ಹೀಗೆಯೇ ಮುಂದುವರೆಯಲಿ ಎಂದು ಅಶ್ವಿನಿ .ಪಿ ಅಭಿಪ್ರಾಯ ಪಟ್ಟರು. ನಾನಗೌಡ ಬಿರಾದಾರ, ಮಾರುತಿ ಭಾಸ್ಕರ, ರಾಜೀವ ಪಾಟೀಲ್, ರಾಜೇಶ್ ಶಿಂದ್ರೆ, ಶಂಕರ ಜಿಂದ್ರಾಳ, ಸಂಗೀತಾ ಗುಣಕಿ, ಪೂರ್ಣಿಮಾ ಯಾದವ, ರಾಜೇಶ್ವರಿ ಬೆಣ್ಣಿ, ಶಶಿಕಲಾ ತೋರ್ಗಲ್,ಸುನೀತಾ ಕೋಲ್ಕಾರ, ಛಾಯಾ ಬೆಳ್ಳಿ, ಬಿಚ್ಚಗತ್ತಿ, ಮಹಾದೇವ ಟೋಣ್ಣಿ, ಸಂತೋಷ ಮೇರಾಕಾರ, ಅಪ್ಪಯ್ಯ ಕೋಲ್ಕಾರ, ಮಲ್ಹಾರ ದೀಕ್ಷಿತ್, ರಾಚಯ್ಯ ಹಿರೇಮಠ, ಅಭಿಷೇಕ, ಅಕ್ಷಯ, ಶಿವಲಿಂಗ, ಶ್ರೀಶೈಲ, ಶಿಲ್ಪಾ ಹಾಗೂ ನಾರಾಯಣ ಕುಮಟೇಕರ ಮತ್ತು ಸುತ್ತಮುತ್ತಲಿನ ನಾಗರಿಕರು ಪಾಲ್ಗೊಂಡಿದ್ದರು.