ರೈತ ಸಂಘದ ಹೋರಾಟಕ್ಕೆ ಬೆಂಬಲ: ರವೀಂದ್ರ ಗಾಣಿಗೇರ


ಅಥಣಿ: ನಾವು ಕೇಳುತ್ತಿರುವುದು ಭಿಕ್ಷೆಯಲ್ಲ. ಕಬ್ಬು ಕೊಟ್ಟಿದ್ದೇವೆ. ವೈಜ್ಞಾನಿಕ ದರ ಕೇಳುತ್ತಿದ್ದೇವೆ. ಪ್ರತಿಸಲ ಕಬ್ಬು ಕೊಟ್ಟು ನಿಮ್ಮ ಕಾಖರ್ಾನೆಯ ಮುಂದೆ ಬಂದು ನಿಲ್ಲುವುದು ಸರಿಯಲ್ಲ. ಕಳೆದ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ 2900 ರೂ. ನೀಡುವುದಾಗಿ ಹೇಳಿದ್ದೀರಿ. ಆ ಪ್ರಕಾರ ದುಡ್ಡು ಕೊಡಿ ಇಲ್ಲವೆ ಕಾಖರ್ಾನೆ ಬಂದ್ ಮಾಡಿ ಎಂದು ರೈತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ರವೀಂದ್ರ ಗಾಣಿಗೇರ ಹಾಗೂ ನೂರಾರು ರೈತ ಮುಖಂಡರು ಶನಿವಾರ ರೈತ ಸಂಘ ಹಾಗೂ ಹಸಿರು ಸೇನೆಯವರು ಅಹೋರಾತ್ರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು. 

ಶುಕ್ರವಾರದಿಂದ ರೈತ ಸಂಘ ಹಾಗೂ ಹಸಿರು ಸೇನೆಯವರು ರಾಜ್ಯ ಹೆದ್ದಾರಿಯ ಮೇಲೆ ಕುಳಿತು ಕಬ್ಬು ತುಂಬಿದ ವಾಹನಗಳನ್ನು ತಡೆದು ಪ್ರತಿಭಟಿಸುತ್ತಿದ್ದು ಅವರಿಗೆ ನೈತಿಕ ಬೆಂಬಲ ನೀಡಿ ಮಾತನಾಡಿದರು. ಸಕ್ಕರೆ ಕಾಖರ್ಾನೆಗಳ ಅವೈಜ್ಞಾನಿಕ ನಿಧರ್ಾರ ಪರಿಣಾಮ ರೈತರು ದೀವಾಳಿಯಾಗುತ್ತಿದ್ದಾರೆ. ಕಾಖರ್ಾನೆಯ ಮಾಲೀಕರು ರೈತರ ಹಣದಿಂದ ಒಂದರ ಮೇಲೊಂದು ಕಾಖರ್ಾನೆಗಳನ್ನು ನಿಮರ್ಿಸಿ ಕೋಟ್ಯಾಧಿಪತಿಗಳಾಗುತ್ತಿದ್ದಾರೆ ಎಂದರು. ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಮಾರಾಟದಲ್ಲಿ ಯಾವ ದರ ನಡೆದಿದೆ, ಕಾಖರ್ಾನೆಯವರು ಕಬ್ಬಿನಿಂದಲೇ ಸಕ್ಕರೆ ಅಲ್ಲದೇ ಮದ್ಯಾರ್ಕ, ಈಥೇನಾಲ್, ವಿದ್ಯುತ್ ಘಟಕ, ಪ್ರೇಸ್ಮೆಡ್ ಸೇರಿದಂತೆ ಇತರೆ ಉತ್ಪನ್ನಗಳಿಂದ ಕೋಟ್ಯಾಂತರ ರೂ. ಲಾಭ ಪಡೆಯುತ್ತಿದ್ದರೂ ರೈತರಿಗೆ ವೈಜ್ಞಾನಿಕ ದರ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಹಾಗೂ ಪ್ರಸಕ್ತ ವರ್ಷ ಮಳೆಯಿಲ್ಲದೇ ಕಬ್ಬಿನ ಇಳುವರಿ ಶೇ. 40 ರಷ್ಟು ಕಡಿಮೆಯಾಗಿದೆ. ಇಂತಹದರಲ್ಲಿ ಪ್ರತಿವರ್ಷವು ಕೂಡ ಸಕ್ಕರೆ ಕಾಖರ್ಾನೆಗಳು ಮುಂಗಡ ದರ ನಿಗದಿ ಮಾಡಿ ನಂತರ ಮೊಂಡುತನ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

  ಸೋಮವಾರದ ವರೆಗೆ ವೇಟ್ ಮಾಡಿ;- ನಮ್ಮ ಕೂಗು ಮುಖ್ಯಮಂತ್ರಿಗಳಿಗೆ ಕೇಳಿಸಿದೆ. ಸೋಮವಾರ ಬೆಳಗಾವಿಯಲ್ಲಿ ರೈತರ ಹಾಗೂ ಸಕ್ಕರೆ ಕಾಖರ್ಾನೆಗಳ ಸಭೆ ಕರೆದಿದ್ದು, ಆ ಸಭೆಯಲ್ಲಿ ನಿರ್ಣಯವಾಗಲಿದೆ. ಅಲ್ಲಿಯವರೆಗೆ ರೈತ ಬಾಂಧವರು ಸಮಾಧಾನವಾಗಿ ಹೋರಾಟ ನಡೆಸುವಂತೆ ರವೀಂದ್ರ ಗಾಣಿಗೇರ ಮನವಿ ಮಾಡಿದರು. 

ರೈತ ಮುಖಂಡರಾದ ಆದಿನಾಥ ದಾನೊಳ್ಳಿ, ಸಂಜಯ ಭಿರಡಿ, ದುಂಡಪ್ಪ ಅಸ್ಕಿ, ಅಣ್ಣಪ್ಪ ಹಳ್ಳೂರ, ಈರಪ್ಪ ಬಸಗೌಡರ, ರಾವಸಾಬ ಬಸಗೌಡರ, ರಾಜು ಜಂಬಗಿ, ಕಲ್ಲಪ್ಪ ಮಾಳಿ, ಅಭಯ ಮೈಗೂರ, ರಾವಸಾಬ ಜಗತಾಪ, ಕುಮಾರ ಅಪರಾಜ, ವಿಶ್ವನಾಥ ನಾಮದಾರ, ಗುರುರಾಜ ಮಡಿವಾಳರ, ಆಣ್ಣಾಸಾಬ ಡೂಗನವರ, ಬಾಹುಬಲಿ ಕುಸುನಾಳೆ, ಪ್ರೇಮಕುಮಾರ ಬಾಲೋಜಿ,  ಸಂಜು ಕುಸನಾಳೆ, ಅಪ್ಪಾಸಾಬ ಅಪರಾಜ, ರಾಮು ಸವದತ್ತಿ, ರಾಹುಲ್, ತಾತ್ಯಾಸಾಬ ಕೋಬರ್ು, ವಾಕ್ಪಟ್ಟೆ, ಸೇರಿದಂತೆ ನೂರಾರು ರೈತ ಮುಖಂಡರು ಇದ್ದರು.

 --------------------------------------------------------------------------

ರವಿವಾರ ಬೆಳಿಗ್ಗೆ 10 ಗಂಟೆಗೆ ಧಾರವಾಡದಲ್ಲಿ ವಿಧಾನ ಸಭೆಯ ಸ್ಪೀಕರ್ ಬಸವರಾಜ ಹೊರಟ್ಟಿಯವರು ಕಬ್ಬು ಬೆಳೆಗಾರರ ಸಭೆಯನ್ನು ಕರೆದಿದ್ದು, ಅವರ ಮುಂದೆ ನಮ್ಮ ಸಮಸ್ಯೆಗಳನ್ನು ಹೇಳುತ್ತೇವೆ. ಅವರು ಮುಖ್ಯಮಂತ್ರಿಗಳೊಂದಿಗೆ ಚಚರ್ಿಸಿ ಸೋಮವಾರ ಸಿಎಂ ಅವರು ರೈತರಿಗೆ ಸಿಹಿ ಸುದ್ದಿ ನೀಡಲಿದ್ದಾರೆ.

  ರವೀಂದ್ರ ಗಾಣಿಗೇರ 

ಅಧ್ಯಕ್ಷರು ರೈತ ಹಿತರಕ್ಷಣಾ ಸಮೀತಿ ಐನಾಪುರ