ಲೋಕದರ್ಶನ ವರದಿ
ಶಿಗ್ಗಾವಿ 23: ನಮ್ಮ ಸಮಾಜಕ್ಕೆ ಯಾವ ಪಕ್ಷ ಆದ್ಯತೆ ನೀಡುತ್ತದಯೋ ಆ ಪಕ್ಷಕ್ಕೆ ಭಿನ್ನಮತ ಮರೆತು ಸಮಾಜದ ನಿರ್ಣಯಕ್ಕೆ ಎಲ್ಲರೂ ಒಂದೆ ಕಡೆಗೆ ಮತ ಹಾಕಿದಾಗ ಮಾತ್ರ ರಾಜಕೀಯ ಪಕ್ಷದವರು ಎಚ್ಚೆತ್ತುಕೊಳ್ಳುವ ಅವಕಾಶವಿದೆ ಮುಂದಿನ ಯುವ ಪೀಳಿಗೆ ದೃಷ್ಟಿಯಿಂದ ಸಮಾಜದ ಸವರ್ಾಂಗೀಣ ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಹೋರಾಟ ಮಾಡಲು ಸಜ್ಜಾಗಬೇಕಿದೆ ಎಂದು ಮಾಜಿ ಸಚಿವ ಹಾಗೂ ದಲಿತ ಸಮೂದಾಯದ ರಾಜ್ಯ ಮುಖಂಡ ಆಲ್ಕೋಡ ಹನಮಂತಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮುಂಬರುವ ಲೋಕಸಭಾ ಚುನಾವಣೆಗೆ ದಲಿತ ಸಮೂದಾಯಗಳನ್ನು ಗ್ರಾಮಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಸಂಘಟಿಸಿ ನಮಗೆ ಹಕ್ಕು ಬಾದ್ಯತೆಗಳಿಗೆ ಗೋರಾಟ ಮಾಡುವದು ಅತಿ ಅವಶ್ಯವಿದೆ ಜೊತೆಗೆ ತಾಲೂಕಾ ಮತ್ತು ಜಿಲ್ಲಾ ಮಟ್ಟದ ಸಮಾವೇಶಗಳನ್ನು ಮಾಡಿ ಚುನಾಯಿತ ಪ್ರತಿನಿದಿಗಳನ್ನು ಕರೆದು ನಮ್ಮ ಸಮಾಜಕ್ಕಾದ ಅನ್ಯಾಯಗಳನ್ನು ಸರಿಪಡಿಸಲು ಒತ್ತಾಯಿಸಬೇಕಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಡತನ ನಿಮರ್ೂಲನೆ ಆಗುವದು ಯಾವಾಗ? ಇಂದು ಸಹಿತ ವಿದ್ಯೆ ಸಿಗಲಾರದಷ್ಟು ಬಡತನ ಈ ವ್ಯವಸ್ಥೆಯಲ್ಲಿ ಇದೆ ಇನ್ನೆಷ್ಟು ವರ್ಷಗಳು ಬೇಕು ಬಡತನ ನಿಮರ್ೂಲನೆಯಾಗುವದಕ್ಕೆ? ಒಳ ಮಿಸಲಾತಿಕಾಗಿ ಕೇಲವರಿಂದ ಮಾತ್ರ ಹೋರಾಟ ನಡೆದಿದೆ ಡೊಕ್ಕಲಿಗ, ದಾಸ, ಹರಿದಾಸ, ಹೊಲಿದಾಸ್, ಮಾಲದಾಸ, ಸುಡಗಾಡಸಿದ್ದ, ದುರಗಿಮರಗಿ, ಹೆಶಗಾರ ಇವರಾರಿಗೂ ಇನ್ನು ಸಹಿತ ಮಿಸಲಾತಿ ಸಿಕ್ಕಿಲ್ಲ ಅಂದರೆ ಇವರು ಹುಟ್ಟಿರುವದೇ ದುರಂತವೇ ಎಂದು ಪ್ರಶ್ನಿಸಿದ ಅವರು ಬಸವಣ್ಣವನವರು ಹೇಳಿರುವ ತತ್ವದಂತೆ ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಸಿಗಬೇಕಿದೆ ಎಂದರು.
ಅಖಿಲ ಕನರ್ಾಟಕ ಆದಿಜಾಂಬವ ಸಂಘದ ತಾಜ್ಯ ಪ್ರಧಾನ ಕಾರ್ಯದಶರ್ಿ ಡಿ,ಎಸ್, ಮಾಳಗಿ ಮಾತನಾಡಿ ಕನರ್ಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆಯಲ್ಲಿ 57.02 ರಷ್ಟು ಮಾದಿಗ ಜನಾಂಗದ ಜನಸಂಖ್ಯೆ ಇದ್ದರು ಸಹ ಸ್ವಾತಂತ್ರ್ಯ ಸಿಕ್ಕೂ 70 ವರ್ಷ ಗತಿಸಿದರು ನಮ್ಮ ಸಮಾಜವು ಕೇಂದ್ರ ಮತ್ತು ರಾಜ್ಯ ಸಕರ್ಾರಗಳ ಮೀಸಲು ಸವಲತ್ತುಗಳಿಂದ ಎಲ್ಲ ರಂಗಗಳಲ್ಲಿ ಅತಿ ಹಿಂದೂಳಿದ ಸಮಾಜ ನಮ್ಮದಾಗಿದೆ ಮೂಲ ಕಸಬುಗಳಾದ ಕೂಲಿ, ಕಸ ಗೂಡಿಸುವದು, ಗಟಾರ ಬಳೆಯುವದು, ಚರ್ಮದ ಕೆಲಸ, ಸತ್ತ ದನಕರಗಳನ್ನು ಬೇರೆಡೆ ಸಾಗಿಸುವದು, ಸತ್ತ ಹೆಣಗಳ ಮುಂದೆ ಹಲಿಗೆ ಬಾರಿಸುವದು ಇತ್ಯಾದಿ ಸರ್ವ ಸಮಾಜಗಳ ಸೇವೆಗಳನ್ನು ಮಾಡುವ ಸಮಾಜ ನಮ್ಮದಾಗಿದೆ 22 ವರ್ಷಗಳಿಂದ ನಮ್ಮ ಸಮಾಜ ಹೋರಾಟ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ಶೇ 15 ರ ಮೀಸಲಾತಿಯಲ್ಲಿ ನಮ್ಮ ಸಮಾಜಕ್ಕೆ ಶೇ 6 ರಷ್ಟು ಒಳಮೀಸಲಾತಿ ನೀಡಲು ಸಕರ್ಾರಕ್ಕೆ ಎ.ಜೆ.ಸದಾಶಿವ ಆಯೋಗವು ವರದಿ ನೀಡಿದರು ನಮ್ಮನ್ನಾಳಿದ ಸಕರ್ಾರಗಳು ಸಚಿವ ಸಂಪೂಟದಲ್ಲಾಗಲಿ, ವಿಧಾನ ಸಭೆ ಮತ್ತು ವಿಧಾನ ಪರಿಷತ್ ಗಳಲ್ಲಾಗಲಿ ಚಚರ್ೆ ಮಾಡದೆ ಈ ಸಮಾಜಕ್ಕೆ ಸಕರ್ಾರಗಳಿಂದ ಅನ್ಯಾಯವಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರಲ್ಲದೆ ಸದ್ಯ ಕಾಂಗ್ರೇಸ ಮತ್ತು ಜೆಡಿಎಸ್ ಸಕರ್ಾರದಲ್ಲಿ ಸದ್ಯ ಖಾಲಿಯಾಗಲಿರುವ ವಿಧಾನ ಪರಿಷತ್ತಿಗೆ ನಮ್ಮ ಸಮಾಜದವರನ್ನು ನಾಮ ನಿದರ್ೇಶನ ಮಾಡಬೇಕು ಮತ್ತು ಸದಾಶಿವ ಆಯೋಗ ಜಾರಿಗೆ ತರಲು ಕೇಂದ್ರ ಸಕರ್ಾರಕ್ಕೆ ತಡ ಮಾಡದೆ ಶೀಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡರಾದ ಕರಿಯಪ್ಪ ಕಟ್ಟಿಮನಿ, ಮಾಜಿ ಜಿಪಂ ಸದಸ್ಯ ಡಾ ಮಲ್ಲೇಶಪ್ಪ ಹರಿಜನ, ಭೀಮಣ್ಣ ಹೊಟ್ಟುರ, ಸಿದ್ದಪ್ಪ ಮಾದರ, ಹನಮಂತಪ್ಪ ಕ್ಯಾಲಕೊಂಡ, ಗಂಗಮ್ಮ ಹರಿಜನ, ಭರಮಪ್ಪ ಪಾಣಿಗಟ್ಟಿ, ಶಿವಾನಂದ ಮಾದರ, ಶಿವಾನಂದ ಪಾಳೆ, ಸುರೇಶ ಹರಿಜನ ಸೇರಿದಂತೆ ದಲಿತ ಸಮುದಾಯದ ಮುಖಂಡರು ಭಾಗವಹಿಸಿದ್ದರು.