ಸಾಮಾಜಿಕ ನ್ಯಾಯ, ರಾಜಕೀಯ ಬದಲಾವಣೆಗಾಗಿ ಜೆಡಿಯು ಪಕ್ಷವನ್ನು ಬೆಂಬಲಿಸಿ : ಶ್ರೀಶೈಲಗೌಡ
Support JDU for social justice and political change: Srishaila Gowda
ಲೋಕದರ್ಶನ ವರದಿ
ಧಾರವಾಡ 08 : ಇಲ್ಲಿಯ ಶ್ರೀನಗರದಲ್ಲಿ ಜೆಡಿಯು ಪಕ್ಷದ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಜಿಲ್ಲಾಅಧ್ಯಕ್ಷ ಶ್ರೀಶೈಲಗೌಡ ಕಮತರ ಮಾತನಾಡಿ, ಜೆಡಿಯು ಪಕ್ಷವು ಪ್ರಜಾಪ್ರಭುತ್ವ ಹಾಗೂ ಸಮಾಜವಾದಿ ತಳಹದಿಯ ಮೇಲೆ ಭಾರತವನ್ನು ಕಟ್ಟಲು ಗಾಂಧಿತತ್ವ ಮೌಲ್ಯಗಳನ್ನು ಪಾಲಿಸುತ್ತಾ, ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಸ್ಪೂರ್ತಿ ಪಡೆದು ಪ್ರತಿಯೊಬ್ಬ ನಾಗರಿಕನು ಸ್ವತಂತ್ರಜೀವನ ನಡೆಸಲು ಹೋರಾಡುತ್ತಿದೆ. ಇಂದಿನ ಅನ್ಯ ಪಕ್ಷಗಳು ಅಧಿಕಾರಕ್ಕಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ. ಜೆಡಿಯು ಪಕ್ಷವುರಾಜ್ಯ ಮತ್ತು ಜಿಲ್ಲೆಯಲ್ಲಿ ಯಾವುದೇ ಚುನಾಯಿತ ಪ್ರತಿನಿಧಿ ಇಲ್ಲದಿದ್ದರೂ ರೈತರ, ಮಹಿಳೆಯರ, ಕಾರ್ಮಿಕರ, ಶೋಷಿತ ವರ್ಗದವರ, ವಿದ್ಯಾರ್ಥಿಗಳ, ಹಿರಿಯ ನಾಗರಿಕರ ಸೇರಿದಂತೆ ಸಮಸ್ತ ಜನತೆಯ ಆಶೋತ್ತರಗಳಿಗೆ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದು, ಜನತೆಯ ಭಾವನೆಗಳಿಗೆ ಗೌರವಕೊಡುತ್ತ ಹೋರಾಡುತ್ತಿದೆ ಈ ನಿಟ್ಟಿನಲ್ಲಿ ಸಮಸ್ತ ಜಿಲ್ಲೆಯ ನಾಗರಿಕರು ಪಕ್ಷದ ಸದಸ್ಯತ್ವ ಪಡೆದು ಪಕ್ಷವನ್ನು ಬೆಂಬಲಿಸಿ ಜಿಲ್ಲೆಯನ್ನುಅಭಿವೃದ್ಧಿ ಪಥದತ್ತ ಕೊಂಡ್ಯೊಯಲು ಕೈಜೋಡಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳಾದ ಫಿರೋಜಖಾನ್ ಹವಾಲ್ದಾರ, ಓಂಸಂಗಮೇಶ ಐಹೊಳೆ, ಪರಶುರಾಮ ಮೂಲಿಮನಿ, ನಿಂಗರಡ್ಡಿ ಕುರ್ತಕೋಟಿ, ಸಿದ್ದಪ್ಪ ದೊಡಮನಿ, ಸಯ್ಯದ ಮಕಾನದಾರ, ಮಲ್ಲವ್ವದೊಡಮನಿ, ಶಿವಾನಂದ ಅಮರಶೆಟ್ಟಿ ಸೇರಿದಂತೆ ಅನೇಕರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 