ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮಾನಸಿಕ ಸ್ಪರ್ಧೆಯಲ್ಲಿ ಸೂಪರ್ ಚಾಂಪಿಯನ್ ಶಿಪ್ ಸಾಧನೆ

Super championship achievement in national level abacus and mental competition


ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮಾನಸಿಕ ಸ್ಪರ್ಧೆಯಲ್ಲಿ ಸೂಪರ್ ಚಾಂಪಿಯನ್ ಶಿಪ್ ಸಾಧನೆ  

ಕಂಪ್ಲಿ 20:  ಗಣಿತ ಕಬ್ಬಿಣದ ಕಡಲೆಯಲ್ಲ ಎನ್ನುವ ಮನೋಭಾವನೆಯನ್ನು ಅಬಾಕಸ್ ಅಭ್ಯಾಸ ಮೂಲಕ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಾಮಾರ್ಥ್ಯ ಬೆಳೆಯುತ್ತದೆ ಎಂದು ಇಲ್ಲಿನ ಎಒನ್ ಅಬಾಕಸ್ ಸೆಂಟರ್ ಪ್ರಾಚಾರ್ಯ ಗೀರೀಶ್ ಬೆಲ್ಲದ್ ಹೇಳಿದರು. 

ಕಲಬುರಗಿಯಲ್ಲಿ ಇತ್ತೀಚೆಗೆ ಎರಡು ದಿನ ನಡೆದ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮಾನಸಿಕ ಸ್ಪರ್ಧೆಯಲ್ಲಿ ಕಂಪ್ಲಿಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಸೂಪರ್ ಚಾಂಪಿಯನ್ ಹಾಗೂ ಚಾಂಪಿಯನ್ ಪ್ರಶಸ್ತಿಗಳನ್ನು ಗಳಿಸಿದ ಹಿನ್ನಲೆ ಮಕ್ಕಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ ನಂತರ ಮಾತನಾಡಿ, ಈ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕಂಪ್ಲಿಯಿಂದ 35ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ ಧರಣಿ ಬೆಲ್ಲದ್, ಸಮೀರ್ ಹಮ್ಜಾ, ಮೊಹ್ಮದ್ ಅಮೀರ, ಸೂಪರ್ ಚಾಂಪಿಯನ್‌ಶಿಪ್ ಪಡೆದರೆ, ವಾಲಿ ರಿತಿಕಾ, ತನ್ವಿ, ಸ್ನೇಹಾ ಕಾಗಲ್ಕರ್, ಸುಬ್ರಮಣ್ಯ ಕಾಗಲ್ಕರ್, ಸ್ವಯಂ ಕಾಗಲ್ಕರ್, ವೀರೇಶ್, ತಸ್ಮಿಯಾ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ 7 ವಿದ್ಯಾರ್ಥಿಗಳು ಪ್ರಥಮ ರನ್ನರ್‌ಆಫ್, 13 ವಿದ್ಯಾರ್ಥಿಗಳು ದ್ವಿತೀಯ ರನ್ನರ್ ಆಫ್, 5 ವಿದ್ಯಾರ್ಥಿಗಳು ತೃತೀಯ ರನ್ನರ್ ಆಫ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ನೋಬರ್ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆಯವರು ಭಾಗವಹಿಸಿದ ಪ್ರತಿ ವಿದ್ಯಾರ್ಥಿಗಳಿಗೆ ಪದಕಗಳನ್ನು, ಪ್ರಮಾಣ ಪತ್ರಗಳನ್ನು ನೀಡಿದರು. ಜ.002: ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮಾನಸಿಕ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಕಂಪ್ಲಿಯ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ವಿತರಿಸಲಾಯಿತು.