ಸೂರತ್, 25 ನಾಯಕ ಸೂರ್ಯಕುಮಾರ್ ಯಾದವ್ (53 ಎಸೆತಗಳಲ್ಲಿ 94) ಇವರ ಭರ್ಜರಿ ಆಟದ ನೆರವಿನಿಂದ ಮುಂಬೈ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂನರ್ಿಯ ಸೂಪರ್ ಲೀಗ್ ಹಂತದ ಪಂದ್ಯದಲ್ಲಿ ಕನರ್ಾಟಕ ತಂಡವನ್ನು ಏಳು ವಿಕೆಟ್ ಗಳಿಂದ ಮಣಿಸಿತು. ಮುಂಬೈ ತಂಡದ ಆರಂಭಿಕರಾದ ಪೃಥ್ವಿ ಶಾ (30) ಹಾಗೂ ಆದಿತ್ಯ ತಾರೆ (12) ತಂಡಕ್ಕೆ ಸಮಯೋಚಿತ ಆರಂಭ ನೀಡಲಿಲ್ಲ. ಆರಂಭದ ಐದು ಓವರ್ ಗಳಲ್ಲಿ ಎರಡು ವಿಕೆಟ್ ಪಡೆದಿದ್ದ ಕನರ್ಾಟಕ ಅಬ್ಬರಿಸಿತು. ಮೂರನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಸೂರ್ಯಕುಮಾರ್ ಯಾದವ್ ಹಾಗೂ ಶಿವಮ್ ದುಬೆ ಜೋಡಿ ನಾಲ್ಕನೇ ವಿಕೆಟ್ ಗೆ 84 ರನ್ ಜೊತೆಯಾಟದ ಕಾಣಿಕೆ ನೀಡಿತು. ಯಾದವ್ 53 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಾಯದಿಂದ 94 ರನ್ ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಮುಂಬೈ 19 ಓವರ್ ಗಳಲ್ಲಿ 3 ವಿಕೆಟ್ ಗೆ 174 ರನ್ ಸೇರಿಸಿ ಜಯ ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಕನರ್ಾಟಕ ತಂಡದ ಆರಂಭ ಕಳಪೆಯಾಗಿತ್ತು. ಸ್ಟಾರ್ ಆಟಗಾರರಾದ ಕೆ.ಎಲ್ ರಾಹುಲ್ (0), ಕರುಣ್ ನಾಯರ್ (8) ಹಾಗೂ ಮನೀಷ್ ಪಾಂಡೆ (4) ರನ್ ಕಲೆ ಹಾಕುವಲ್ಲಿ ಎಡವಿದರು. 19 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ದೇವದತ್ ಹಾಗೂ ಕದಂ ಆಸರೆಯಾದರು. ಈ ಜೋಡಿ 9 ಓವರ್ ಗಳಿಗೂ ಹೆಚ್ಚು ಹೊತ್ತು ಕ್ರಿಸ್ ನಲ್ಲಿದ್ದು ವಿಕೆಟ್ ಕಾಯ್ದುಕೊಂಡು ಬ್ಯಾಟ್ ಮಾಡಿದರು. ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ದೇವದತ್ 34 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ನೆರವಿನಿಂದ 57 ರನ್ ಬಾರಿಸಿ ಔಟ್ ಆದರು. ರೋಹನ್ ಕದಂ 47 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 71 ರನ್ ಬಾರಿಸಿ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು. ಉಳಿದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಮುಂಬೈ ಪರ ಶಾದರ್ೂಲ್ ಠಾಕೂರ್ ಹಾಗೂ ಶಿವಮ್ ದುಬೆ ತಲಾ ಎರಡು ವಿಕೆಟ್ ಪಡೆದರು.