ಮುಂಬೈ: ಭಾರತೀಯ ಫುಟ್ಬಾಲ್ ಸಂಸ್ಥೆ (ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್-ಂಈಈ) ತನ್ನ 2017ನೇ ಸಾಲಿನ ಪ್ರಶಸ್ತಿ ಪ್ರಕಟ ಮಾಡಿದ್ದು, ಭಾರತ ತಂಡದ ಸ್ಟಾರ್ ಆಟಗಾರ ಸುನಿಲ್ ಚೇಟ್ರಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
33ವರ್ಷದ ಸುನಿಲ್ ಚೇಟ್ರಿ ಇತ್ತೀಚೆಗಷ್ಟೇ ತಮ್ಮ ನೂರನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ಭಾರತದ ಪರ 100 ಅಂತಾರಾಷ್ಟ್ರೀಯ ಪಂದ್ಯವಾಡಿದ ಭಾರತದ ಎರಡನೇ ಆಟಗಾರ ಎಂಬ ಕೀತರ್ಿಗೂ ಭಾಜನರಾಗಿದ್ದರು. ಇದಕ್ಕೂ ಮೊದಲು ಭಾರತದ ಮಾಜಿ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಅವರು ಭಾರತದ ಪರ 100 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದರು. ಚೇಟ್ರಿ ಅಪೂರ್ವ ಸಾಧನೆಗಾಗಿ ಐಎಎಫ್ಎಫ್ ಸಂಸ್ಥೆ ವರ್ಷದ ಆಟಗಾರ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇನ್ನು ಇದೇ ಚೇಟ್ರಿ ಬೆಂಗಳೂರು ಎಫ್ ಸಿ ತಂಡದ ಪರ ಆಡುತ್ತಿದ್ದಾರೆ.
ಅಂತೆಯೇ ಭಾರತದ ಮಹಿಳಾ ಫುಟ್ಬಾಲ್ ನ ಸ್ಟಾರ್ ಆಟಗಾತರ್ಿ ಕಮಲಾದೇವಿ ಅವರೂ ಕೂಡ ಮಹಿಳೆಯರ ತಂಡದಿಂದ ವರ್ಷದ ಆಟಗಾತರ್ಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಳಿದಂತೆ ಈ ಹಿಂದೆ ನಡೆದ ನಾಲ್ಕು ರಾಷ್ಟ್ರಗಳ ಇಂಟರ್ ಕಾಂಟಿನೆಂಟಲ್ ಕಪ್ ಟೂನರ್ಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಯುವ ಆಟಗಾರ ಅನಿರುದ್ಧ ತಾಪಾ 2017ನೇ ಸಾಲಿನ ಅತ್ಯುತ್ತಮ ಉದಯೋನ್ಮುಖ ಆಟಗಾರ ಎಂಬ ಕೀತರ್ಿಗೆ ಭಾಜನರಾಗಿದ್ದಾರೆ. ಇದೇ ರೀತಿ ಮಹಿಳಾ ತಂಡ ಯುವ ಆಟಗಾತರ್ಿ ಇ ಪಂತೋಯ್ ಅವರು ಮಹಿಳೆಯರ ವಿಭಾಗದ ಉದಯೋನ್ಮುಖ ಆಟಗಾತರ್ಿ ಎಂಬ ಕೀತರ್ಿಗೆ ಭಾಜನರಾಗಿದ್ದಾರೆ.
ಕೇರಳ ಫುಟ್ಬಾಲ್ ಸಂಸ್ಥೆಗೆ ಈ ಬಾರಿಯೂ ಉತ್ತಮ ಕ್ರೀಡಾಭಿವೃದ್ಧಿ ಕಾರ್ಯಕ್ರಮಗಳ ನೀಡಿದ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಅಂತೆಯೇ ಭಾರತೀಯ ಫುಟ್ಬಾಲ್ಗೆ ದೀರ್ಘಕಾಲದ ಕೊಡುಗೆ ನೀಡಿದ ಅತ್ಯುತ್ತಮ ಸಂಸ್ಥೆ ವಿಭಾಗದಲ್ಲಿ ಖ್ಯಾತ ದ್ವಿಚಕ್ರವಾಹನ ತಯಾರಿಕಾ ಸಂಸ್ಥೆ ಹೀರೋ ಮೋಟೋಕಾಪರ್್ ಗೆ ಪ್ರಶಸ್ತಿ ದಕ್ಕಿದೆ.
2017ನೇ ಸಾಲಿನ ಉತ್ತಮ ರೆಫರಿ ವಿಭಾಗದಲ್ಲಿ ಸಿಆರ್ ಕೃಷ್ಣನ್ ಮತ್ತು 2017ನೇ ಸಾಲಿನ ಸಹಾಯಕ ರೆಫರಿ ವಿಭಾಗದಲ್ಲಿ ಅಸ್ಸಾಂನ ಸುಮಂತಾ ದತ್ತಾ ಅವರಿಗೆ ಪ್ರಶಸ್ತಿ ಲಭಿಸಿದೆ.