ಲೋಕದರ್ಶನ ವರದಿ
ಬ್ಯಾಡಗಿ29: ಅಂಗನವಾಡಿ ಶಿಕ್ಷಕಿಯರು ದೇಶದೆಲ್ಲೆಡೆ ಬಡ ಮಕ್ಕಳ ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯವಂತ ಸಮಾಜ ನಿಮರ್ಾಣ ಮಾಡುವಲ್ಲಿ ಸಹಕರಿಸುತ್ತಿದ್ದೇವೆ, ಆದರೆ ನಮ್ಮ ಶ್ರಮಕ್ಕೆ ಸಕರ್ಾರಗಳು ಬೆಲೆ ಕೊಡುತ್ತಿಲ್ಲ ನಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೇ ದೇಶದಲ್ಲಿ ಜೀತ ಪದ್ಧತಿ ಇನ್ನೂ ಜೀವಂತವಿದೆ ಎಂದೆನಿಸುತ್ತಿದೆ, ಸಮಾನ ಕೆಲಸಕ್ಕೆ ಸಮಾನ ವೇತನದಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯರ ಮಾದರಿಯಲ್ಲಿ ಸಂಪೂರ್ಣ ವೇತನ ನೀಡುವಂತೆ ಅಂಗನವಾಡಿ ಶಿಕ್ಷಕಿಯರ ಪ್ರಧಾನ ಕಾರ್ಯದಶರ್ಿ ಎಚ್.ಎಸ್.ಸುನಂದಾ ಎಚ್ಚರಿಸಿದರು.
ಪಟ್ಟಣದ ಸ್ವಾತಂತ್ರ್ಯ ಯೋಧರ ಭವನದಲ್ಲಿ ಆಯೋಜಿಸಿದ್ದ ಅಂಗನವಾಡಿ ಶಿಕ್ಷಕಿಯರ ಪ್ರಥಮ ತಾಲ್ಲೂಕಾ ಸಮ್ಮೇಳವನ್ನುದ್ದೇಶಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಐಸಿಡಿಎಸ್ ಯೋಜನೆ ಪ್ರಾರಂಭವಾಗಿ ಇಂದಿಗೆ 42 ವರ್ಷಗಳು ಕಳೆದಿವೆ, ಅಂಗನವಾಡಿ ಕಾರ್ಯಕತರ್ೆಯರಾಗಿ ಕೆಲಸ ನಿರ್ವಹಿಸಿದ ಬಹಳಷ್ಟು ಜನ 60 ವರ್ಷ ಪೂರ್ಣಗೊಳಿಸಿ ಬರಿಗೈಯಲ್ಲಿ ನಿವೃತ್ತಿ ಹೊಂದಿದ್ದಾರೆ, ಬೆಳವಣಿಗೆ ಹಂತದಲ್ಲೇ ಬಡ ಕುಟುಂಬದ ಹಿನ್ನೆಲೆಯುಳ್ಳ ಮಕ್ಕಳಿಗೆ ಸಕರ್ಾರದ ಭಾಗವಾಗಿ ಕೆಲಸವನ್ನು ನಿರ್ವಹಿಸಿಕೊಂಡು ಬಂದಿದ್ದೇವೆ ಹೀಗಿದ್ದರೂ ನಮ್ಮ ಕೆಲಸಕ್ಕೆ ಸಮಾನವಾದ ವೇತನ ನೀಡುತ್ತಿಲ್ಲ ಎಂದು ಆರೋಪಿಸಿದರು.
ಅರ್ಥವಿಲ್ಲದ ಯೋಜನೆಗೆ: ಕೇಂದ್ರ ಸಕರ್ಾರ 'ಬೇಟಿ ಬಚಾವೋ ಬೇಟಿ ಪಡಾವೋ' ಎಂಬ ಕಾರ್ಯಕ್ರಮವನ್ನು ಘೋಷಿಸಿದೆಯಾದರೂ ಅದಕ್ಕೆ ಪೂರಕವಾದ ಅನುದಾನವನ್ನು ನೀಡುತ್ತಿಲ್ಲ, ಹಾಗಿದ್ದರೇ ಅಂಗನವಾಡಿ ಕೇಂದ್ರಗಳು ಮತ್ತು ಸಹಾಯಕಿಯರು ಕಾರ್ಯ ನಿರ್ವಹಿಸುವುದಾದರೂ ಹೇಗೆ..? ಎಂದು ಪ್ರಶ್ನಿಸಿದ ಅವರು, ಅರ್ಥವಿಲ್ಲದ ಯೋಜನೆಗಳಿಗೆ ಅನುದಾನ ನೀಡುತ್ತಿರುವ ಸಕರ್ಾರ ಅಂಗನವಾಡಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
28 ಲಕ್ಷ ಅಂಗನವಾಡಿ ಕಾರ್ಯಕತರ್ೆಯರು ಬೀದಿಗೆ: ಕೇಂದ್ರ ಹಾಗೂ ರಾಜ್ಯ ಸಕರ್ಾರದ ನಿಲುವಿನಿಂದಾಗಿ ದೇಶಾದ್ಯಂತ ಒಟ್ಟು 28 ಲಕ್ಷ ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಹಾಯಕಿಯರು ಬೀದಿಗೆ ಬರುವಂತಾಗಿದೆ ಬಡತನ, ನಿರುದ್ಯೋಗ ಬೆಲೆ ಏರಿಕೆ ಸ್ಥಿತಿಗತಿಗಳಿಗೆ ಹೊಂದಿಕೊಳ್ಳಲಾಗದೇ ಬದುಕು ನಶ್ವರ ಎನ್ನುವಷ್ಟರ ಮಟ್ಟಿಗೆ ಜಿಗುಪ್ಸೆ ಹೊಂದಲು ಕಾರಣವಾಗಿದ್ದು ಕೂಡಲೇ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ನಮ್ಮ ಪ್ರಮುಖ ಬೇಡಿಕೆಯಾದ ಸಮಾನ ಕೆಲಸಕ್ಕ ಸಮಾನ ವೇತನ ನೀಡುವಂತೆ ಈಡೇರಿಸುವಂತೆ ಆಗ್ರಹಿಸಿದರು.
ರಾಜ್ಯದ ಕಡೆಗೆ ಕೈ ತೋರಿಸಿದ ಕೇಂದ್ರ: ಕೇಂದ್ರ ಸಕರ್ಾರ ಆಡಳಿತಕ್ಕೆ ಬಂದ ಬಳಿಕ ಅಂಗನವಾಡಿ ಕಾರ್ಯಕತರ್ೆಯರ ಗೌರವಧನವನನ್ನು ಇಲ್ಲಿಯವರೆಗೂ ಹೆಚ್ಚಳ ಮಾಡಿರುವುದಿಲ್ಲ, ಬದಲಾಗಿ ಅದೇನಿದ್ದರೂ ಸಂಬಂಧಿಸಿದ ರಾಜ್ಯ ಸಕರ್ಾರಗಳಿಂದಲೇ ಪಡೆದುಕೊಳ್ಳುವಂತೆ ಲಿಖಿತ ಸೂಚನೆ ನೀಡಿ ಕೈ ತೊಳೆದುಕೊಂಡಿದೆ, ಯಾವುದೇ ಸಕರ್ಾರಗಳು ನೀಡಲಿ ಅದೇನಿದ್ದರೂ ಸಮಾನ ಕೆಲಸಕ್ಕೆ ಸಮಾನ ವೇತನದಡಿ ಕಾರ್ಯ ನಿರ್ವಹಿಸಲು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಇದೇ ಸಂರ್ಭದಲ್ಲಿ ಅಂಗನವಾಡಿ ಕಾರ್ಯಕತರ್ೆಯರ ತಾಲೂಕಾಧ್ಯಕ್ಷೆ ಹೇಮಾ ಅಸಾದಿ, ಮಹಾಂತೇಶ ಎಲಿ, ಹೇಮಾವತಿ ಎಲಿ, ಗೌರಮ್ಮ ನಾಯ್ಕರ, ರಾಜೇಶ್ವರಿ ಹಿರೇಮಠ, ಜಿಲ್ಲಾ ಸಂಚಾಲಕ ವಿನಯ್ ಕುರುಬರ, ರತ್ನಾ ಕಲ್ಕಣಿ, ವಿನೋದಾ ಪಾಟೀಲ, ಮಲ್ಲಮ್ಮ ಪಾಟೀಲ, ಲೀಲಾವತಿ ಸಾತನವರ, ಶಾಂತಾ ಕೂನಬೇವು, ಪರಮೇಶ್ವರಿ ಮದ್ಯಾಹ್ನದ, ಲೀಲಾ ಆಲದಗೇರಿ, ಸುಧಾ ಅಂಗಡಿ, ಕವಿತಾ ನಾಡಿಗೇರ, ಶಕುಂತಲ ದಾನಣ್ಣನವರ, ಗೋಜಾ ನಾಯಕ್, ಮುತ್ತಕ್ಕ ಪೂಜಾರ, ಮಮತಾ ಯತ್ನಳ್ಳಿ, ಗಂಗಮಾಳವ್ವ ಆನವೇರಿ, ಮಲ್ಲಮ್ಮ ಛಲವಾದಿ, ರತ್ನ ಕಚವಿ, ಸುಮಿತ್ರ ಓಲೇಕಾರ, ಉಮಾ ಪಾಟೀಲ, ಸಾವಿತ್ರಿ ಮೂಡಿ, ಗಿರಿಜವ್ವ ಹುಬ್ಬಳ್ಳಿ, ಫಾತೀಮಾ ಹುಬ್ಬಳ್ಳಿ ಶಶಿಕಲಾ ಪುರಾಣಿಕಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು