ಕೊಪ್ಪಳ 16: ವಿಮಾ ಸಂಸ್ಥೆಯಿಂದ ಪಡೆದ ಬೆಳೆ ಹಾನಿ ಪರಿಹಾರದ ಮೊತ್ತವನ್ನು ಏಳು ದಿನದೊಳಗೆ ರೈತರ ಖಾತೆಗೆ ಜಮಾ ಮಾಡಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಂಗಾರು ಹಂಗಾಮಿನ ಕನರ್ಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಆಯೋಜಿಸಲಾದ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನರ್ಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಪಾತ್ರ, ಹೊಣೆಗಾರಿಕೆ ಮುಖ್ಯವಾಗಿದ್ದು, ಕೃಷಿ ಇಲಾಖೆಯು ಅಧಿಸೂಚಿತ ಬೆಳೆಗಳ ಮತ್ತು ಘಟಕಗಳ ಬಗ್ಗೆ ಬ್ಯಾಂಕುಗಳು, ರೈತ ಸಂಪರ್ಕ ಕೇಂದ್ರಗಳು ಮತ್ತು ಗ್ರಾಮ ಪಂಚಾಯಿತಿ ಕಛೇರಿಗಳ ಸೂಚನಾ ಫಲಕಗಳ ಮೇಲೆ ಮಾಹಿತಿಯನ್ನು ಪ್ರಕಟಿಸಬೇಕು. ಈ ಕುರಿತು ಪ್ರಚಾರ ಕಾರ್ಯ ಕೈಗೊಂಡು ರೈತರಿಗೆ ತಿಳುವಳಿಕೆ ನೀಡಬೇಕು. ಕಂದಾಯ ಇಲಾಖೆಯು ಬಿತ್ತನೆ ದೃಢೀಕರಣ ಪತ್ರ ನೀಡಬೇಕು ಮತ್ತು ಬಿತ್ತನೆ ಕ್ಷೇತ್ರವನ್ನು ಪಹಣಿಯಲ್ಲಿ ದಾಖಲಿಸಬೇಕು.
ಬ್ಯಾಂಕುಗಳು ಮಾಡುವ ತಪ್ಪು, ಲೋಪದೋಷಗಳಿಗೆ ಅವರೇ ಹೊಣೆಗಾರರು. ಆಥರ್ಿಕ ಮತ್ತು ಸಾಂಖ್ಯಿಕ ಇಲಾಖೆಯು ಪ್ರತಿ ಹಂಗಾಮಿನಲ್ಲಿ ಅಧಿಸೂಚಿಸಲಾಗುವ ಬೆಳೆಗಳ ಮತ್ತು ಕ್ಷೇತ್ರಗಳ ಮಾಹಿತಿಯನ್ನು ಒದಗಿಸಬೇಕು. ಬೆಳೆ ಕಟಾವು ಪ್ರಯೋಗಗಳನ್ನು ಆಯೋಜಿಸಬೇಕು. ಇತರೆ ಇಲಾಖೆಗಳ ಸಹಕಾರದೊಂದಿಗೆ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಿ, ಇಳುವರಿ ಮಾಹಿತಿಯನ್ನು ವಿಮಾ ಸಂಸ್ಥೆಗೆ ಒದಗಿಸಬೇಕು. ಅನುಷ್ಠಾನ ಸಂಸ್ಥೆಯು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ., ವಿಮಾ ಕಂತಿನ ದರಗಳನ್ನು ಲೆಕ್ಕ ಹಾಕಿ ನಿಗದಿಪಡಿಸಬೇಕು. ಅಲ್ಲದೇ ಬೆಳೆವಿಮಾ ನಷ್ಟ ಪರಿಹಾರವನ್ನು ಲೆಕ್ಕ ಮಾಡಿ ಅಂತಿಮಗೊಳಿಸಿ ತರಬೇತಿ ಮತ್ತು ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಬೆಳೆ ವಿಮಾ ಸಮಿತಿಯ ಪದ ನಿಮಿತ್ಯ ಕಾರ್ಯದಶರ್ಿಯಾಗಿರುವ ಜಂಟಿ ಕೃಷಿ ನಿದರ್ೇಶಕರಾದ ಶಬಾನ ಎಂ. ಶೇಖ್ ಅವರು ಮಾತನಾಡಿ, ಪ್ರಾಕೃತಿಕ ದುರಂತ ಮತ್ತು ಹವಾಮನ ವೈಪರಿತ್ಯಗಳಿಂದ ರೈತರು ಬೆಳೆದ ಬೆಳೆಗಳಿಗ ಅಪಾಯವುಂಟಾದಾಗ ರೈತರನ್ನು ರಕ್ಷಿಸಿಸುವ ಮಾದ್ಯಮವೆ ಬೆಳೆ ವಿಮೆ. ಈ ಹಿಂದೆ ರಾಜ್ಯದಲ್ಲಿ ಎನ್.ಎ.ಐ.ಎಸ್., ಎಂ.ಎನ್.ಎ.ಐ.ಎಸ್., ಡಬ್ಲ್ಯೂ.ಬಿ.ಸಿ.ಐ.ಎಸ್., ಈ ಯೋಜನೆಗಳಿಂದ ರೈತರಿಗೆ ಸರಿಯಾದ ರೀತಿಯಲ್ಲಿ ಬೆಳೆ ಪರಿಹಾರಗಳು ದೊರೆಯುತ್ತಿರಲಿಲ್ಲ. ಆದ್ದರಿಂದ ಈ ಯೋಜನೆಗಳನ್ನು ಕೈಬಿಟ್ಟು ರೈತ ಸ್ನೇಹಿ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ರೂಪದಲ್ಲಿ ಹೊಸಬೆಳೆ ವಿಮಾ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸಕರ್ಾರಗಳ ಸಹ ಭಾಗಿತ್ವದಲ್ಲಿ ಪ್ರಾರಂಭಿಸಲಾಗಿದೆ.
ಮೊಬೈಲ ಆಧಾರಿತ ತಂತ್ರಜ್ಞಾನ ಬಳಸಿಕೊಂಡು ಜಿ.ಪಿ.ಎಸ್ ಮೂಲಕ ವಾಸ್ತವಿಕ ಇಳುವರಿಯನ್ನು ಈ ಯೋಜನೆಯಡಿ ಕಂಡು ಹಿಡಿಯಲಾಗುವುದು. ಬೆಳೆ ಕಟಾವಿನ ನಂತರದಲ್ಲಿ ಸಂಭವಿಸುವ ಬೆಳೆ ನಷ್ಟಕ್ಕೆ ಪರಿಹಾರ ನೀಡಲಾಗುವುದು. ಯೋಜನೆಯಡಿ ಅತೀವೃಷ್ಟಿ, ಅನಾವೃಷ್ಟಿ ಬೆಂಕಿ, ಸಿಡಿಲು, ಬಿರುಗಾಳಿ, ಸುಂಟರಗಾಳಿ, ಆಲಿಕಲ್ಲುಗಳಿಂದ ಬೀಳುವ ಭಾರಿ ಮಳೆ, ಪ್ರವಾಹ, ಭೂಮಿ ಮುಳುಗುವುದು, ಭೂ-ಕುಸಿತ, ಕ್ಷಾಮ, ಕೆಟ್ಟ ಹವಾಮಾನ, ಬೆಳೆಗಳಿಗೆ ರೋಗ & ಕೀಟಗಳ ಹಾವಳಿ ಇತ್ಯಾದಿಗಳಿಂದ ಬರಬಹುದಾದ ಅಪಾಯದ ವಿರುದ್ದ ಸಮಗ್ರ ವಿಮೆ ವ್ಯಾಪ್ತಿಯನ್ನು ಒದಗಿಸಲಾಗುವುದು. ಬಿತ್ತುವುದಕ್ಕೆ ಸಾಧ್ಯವಾಗದಿದ್ದಲ್ಲಿ, ಒಂದು ವೇಳೆ ಹವಾಮಾನದ ವೈಪ್ಯರಿತ್ಯಗಳ ಕಾರಣದಿಂದಾಗಿ ವಿಮೆ ಮಾಡಿಸಿಕೊಂಡಿರುವ ರೈತರಿಗೆ ಬಿತ್ತಲು ಅಥವಾ ನಾಟಿ ಮಾಡಲು ಸಾಧ್ಯವಾಗದಿದ್ದಲ್ಲಿ ಬಿತ್ತುವ ಅಥವಾ ನಾಟಿ ಮಾಡುವ ಕಾರ್ಯದ ಮೇಲೆ ಖಚರ್ು ಮಾಡಿಯೂ ವಿಫಲವಾದಲ್ಲಿ ಅಂತಹ ರೈತರು ಭರವಸೆ ಮೊತ್ತದ 25% ಅನ್ನು ಕೊರಿಕೆ ಪರಿಹಾರ ರೂಪದಲ್ಲಿ ಪಡೆಯುತ್ತಾರೆ. ಕೊಯ್ಲು ತಂದು ಇರಿಸಿರುವ ಫಸಲು ಮೇಲೆ ಹೊಲದಿಂದ ಫಸಲನ್ನು ತಂದಿರಿಸಿದಾಗ ಅವುಗಳಿಗೆ ವಿಮೆ ವ್ಯಾಪ್ತಿಯನ್ನು ಒದಗಿಸಲಾಗುವುದು. ಸಾಮಾನ್ಯ ವಿಮೆಗೆ ವಿಮಾ ಕಂತಿನ ದರಗಳು ಹಂಗಾಮುವಿನಲ್ಲಿ ಇತರೆ ಬೆಳೆಗಳಿಗೆ ವಾಷರ್ಿಕ ಮುಂಗಾರಿನಲ್ಲಿ ಶೇ. 2%, ಹಿಂಗಾರಿನಲ್ಲಿ ಶೇ. 1.5%, ವಾಷರ್ಿಕ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಿಗೆ ಮುಂಗಾರು ಮತ್ತು ಹಿಂಗಾರಿನಲ್ಲಿ ಶೇ.5% ರಷ್ಟು ವಿಮಾ ಕಂತಿನ ದರಗಳನ್ನು ನಿಗದಿಪಡಿಸಿದೆ. ಆಹಾರ ಬೆಳೆಗಳು, ಎಣ್ಣೆಕಾಳು ಮತ್ತು ವಾಷರ್ಿಕ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳನ್ನು ಅಳವಡಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಉಪ ಕೃಷಿನಿದರ್ೇಶಕರಾದ ವಿರೇಶ ಹುನಗುಂದ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬೆಳೆ ವಿಮೆ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.