ಕಾಗವಾಡ 18: ಸಕ್ಕರೆ ಕಾಖರ್ಾನೆಗಳಿಂದ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಎಫ್.ಆರ್.ಪಿ ಘೋಷಣೆ ಮಾಡಿದ್ದಾರೆ. ಆದರೆ, ಅದರಲ್ಲಿ ಕಟಾವಣಿ ಮತ್ತು ಸಾಗಾಣಿಕೆ ಉಲ್ಲೇಖಿಸಿಲ್ಲಾ. ಅಲ್ಲದೆ ಕಳೆದ ವರ್ಷದ 400 ವ್ಯತ್ಯಾಸದ ಹಣದ ಬಗ್ಗೆ ಮಾತನಾಡುತ್ತಿಲ್ಲಾ. ಮುಖ್ಯಮಂತ್ರಿಗಳು ಬೆಳಗಾವಿಯಲ್ಲಿ ಸಭೆ ಸೇರಿ ರೈತರ ಸಮಸ್ಯೆ ಈಡೇರಿಸುತ್ತಾರೆ ಎಂದು ರೈತರು ಭರವಸೆ ಇಟಿದ್ದರು. ಆದರೆ, ಬೆಳಗಾವಿಯಲ್ಲಿ ನಡೆಯುವ ಸಭೆ ಬೆಂಗಳೂರಕ್ಕೆ ಸ್ಥಳಾಂತರಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ಉಗಾರ, ಐನಾಪುರ, ಕಾಗವಾಡದ ರೈತರು ಸಕ್ಕರೆ ಕಾಖರ್ಾನೆಗಳಿಗೆ ಕಬ್ಬು ಸಾಗಾಟ ಮಾಡುತ್ತಿರುವ 300 ಟ್ರ್ಯಾಕ್ಟರ್ಗಳನ್ನು ತಡೆದು ಯಾವುದೇ ಸಕ್ಕರೆ ಕಾಖರ್ಾನೆಗಳಿಗೆ ಹೋಗದಂತೆ ರಸ್ತೆ ಬಳಿ ಟೆಂಟ್ ಹಾಕಿಕೊಂಡು ರವಿವಾರ ಸಂಪೂರ್ಣ ದಿನ ಕಾವಲು ಮಾಡುತ್ತಿದ್ದಾರೆ.
ಕಾಗವಾಡದ ಸ್ವಾಭಿಮಾನಿ ರೈತ ಸಂಘಟನೆ, ಉಗಾರದ ಕಬ್ಬು ಬೆಳೆಗಾರರ ಸಂಘ, ಐನಾಪುರದ ರೈತ ಹಿತರಕ್ಷಣಾ ಸಮಿತಿ, ಕನರ್ಾಟಕ ಹಸಿರು ಕ್ರಾಂತಿ ರೈತ ಸಂಘಟನೆಯ ಎಲ್ಲ ರೈತರು ಕಬ್ಬಿಗೆ ಸೂಕ್ತ ದರ ಪಡೆದುಕೊಳ್ಳಲು ರಾಜಕೀಯ ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಒಂದಾಗಿ ಗಟ್ಟಿಯಾಗಿದ್ದಾರೆ. ಇದರ ಪರಿಣಾಮ ಏಕಕಾಲಕ್ಕೆ ಕಾಗವಾಡ, ಮುರಗುಂಡಿ, ದರೂರ ಈ ಮುಖ್ಯ ಮಾರ್ಗಗಳಿಂದ ಕಬ್ಬು ಸಾಗಾಟ ಮಾಡುವ ವಾಹನಗಳನ್ನು ತಡೆದು ಸಕ್ಕರೆ ಕಾಖರ್ಾನೆಗಳಿಗೆ ಕಬ್ಬು ಪೂರೈಕೆ ಆಗದಂತೆ ನೋಡಿಕೊಂಡು ಅವರಿಗೆ ಒಗ್ಗಟ್ಟಿನ ಬಿಸಿ ಮುಟ್ಟಿಸಿದ್ದಾರೆ.
ಸಕ್ಕರೆ ಕಾಖರ್ಾನೆಗಳು ಘೋಷಿಸಿದ ಎಫ್.ಆರ್.ಪಿಯಲ್ಲಿ ಸಂಶಯ :
ಐನಾಪುರದ ಕಬ್ಬು ಬೆಳೆಗಾರ ಸಂಘದ ಮುಖಂಡ ರವೀಂದ್ರ ಗಾಣಿಗೇರ ಕಾಗವಾಡದಲ್ಲಿ ಮಾತನಾಡುವಾಗ ಜಿಲ್ಲಾಧಿಕಾರಿಗಳ ಆದೇಶದಂತೆ ಎಫ್.ಆರ್.ಪಿ ಘೋಷಣೆ ಮಾಡಿದ್ದಾರೆ. ಆದರೆ, ಅದರಲ್ಲಿ ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಉಲ್ಲೇಖಿಸಿಲ್ಲಾ. ಇದನ್ನು ಪಾರದರ್ಶಕವಾಗಿ ಮಾಹಿತಿ ನೀಡಿರಿ, ಮತ್ತು ಕಳೆದ ವರ್ಷದ 400 ರುಪಾಯಿ ವ್ಯತ್ಯಾಸದ ಹಣ ಘೊಷಿಸಿರಿ ಎಂದು ಹೇಳಿ ಹೋರಾಟ ಕೊನೆ ಹಂತ ತಲುಪಿದ್ದು, ರೈತರು ವಿಚಲಿತರಾಗದೆ ಒಗ್ಗಟ್ಟು ಪ್ರದಶರ್ಿಸಿರಿ ಎಂದು ರವೀಂದ್ರ ಗಾಣಿಗೇರ ಹೇಳಿದರು.
ಜನಪತ್ರಿನಿಧಿಗಳು ಸ್ಪಂದಿಸುತ್ತಿಲ್ಲ:
ಕಳೆದ 20 ದಿನಗಳಿಂದ ಕಬ್ಬಿನ ದರಕ್ಕಾಗಿ ರೈತರು ಹೋರಾಟ ಪ್ರಾರಂಭಿಸಿದ್ದಾರೆ. ಇವರ ಬೇಡಿಕೆಗಳಿಗೆ ಯಾವುದೇ ಕಾಖರ್ಾನೆಗಳು ಸ್ಪಂದಿಸುತ್ತಿಲ್ಲ. ಇಲ್ಲಿಯ ಚುನಾಯಿತ ಶಾಸಕರು, ಜನಪ್ರತಿನಿಧಿಗಳು ರೈತರನ್ನು ಭೇಟಿಯಾಗುವ ಸೌಜನ್ಯತೆ ತೋರಲಿಲ್ಲ. ಇದು ದುದರ್ೈವ. ಈಗಲೂ ಕಾಲ ಮಿಂಚಿಲ್ಲಾ. ರೈತರು ಮತ್ತು ಕಾಖರ್ಾನೆಗಳ ಮಧ್ಯಸ್ಥಿಗಳಾಗಿ ಸಮಸ್ಯೆಗಳಿಗೆ ಸ್ಪಂದಿಸಿರಿ ಎಂದು ಐನಾಪುರ ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ, ಕಾಗವಾಡದ ಶಶಿಕಾಂತ ಜೋಶಿ, ಎಂ.ಬಿ. ಉದಗಾಂವೆ ಕಾಗವಾಡದಲ್ಲಿ ಹೇಳಿದರು.
ಉರಿ ಬಿಸಲಿನಲ್ಲಿ ರಸ್ತೆ ಬಳಿ ಉಳಿದು ತಡೆದ ವಾಹನಗಳು ಕಾಯ್ದರು:
ಕಬ್ಬು ಬೆಳೆಗಾರ ರೈತರಾದ ಅಜೀತ ಕರವ್, ಸಚೀನ ಕವಟಗೆ, ಆದಿನಾಥ ಬಿಂದಗಿ, ಶಶಿಕಾಂತ ಜೋಶಿ, ರಾಜು ಕರವ, ತಾತ್ಯಾಸಾಹೇಬ ಚೌಗುಲೆ, ಧನಪಾಲ ಕರವ, ಅಮರ ಶಿಂದೆ, ರಾಜು ಮಗದುಮ್ಮ, ಅಜೀತ ಚೌಗುಲಾ ಸೇರಿದಂತೆ ಅನೇಕ ರೈತರು ರಸ್ತೆ ಬಳಿ ಉರಿ ಬಿಸಿಲಿನಲ್ಲಿ ಉಳಿದು ತಡೆದ ವಾಹನಗಳು ಹೋಗಲಾರದಂತೆ ನೋಡಿಕೊಳ್ಳುತ್ತಿದ್ದಾರೆ.
ರೈತ ಹೋರಾಟಗಾರರಿಗೆ ಜಿಲೇಬಿ, ಊಟ, ತಂಪು ಪಾನೀಯ:
ಕಾಗವಾಡ ಹಾಗೂ ಮುರಗುಂಡಿಯಲ್ಲಿ ರೈತ ಹೋರಾಟಗಾರರು ಇಡೀ ದಿನ ಉಳಿದು ಹೋರಾಟ ಮಾಡುತ್ತಿದ್ದರಿಂದ, ಕಬ್ಬು ಬೆಳೆಗಾರ ರೈತ ಹೋರಾಟಗಾರ ರವೀಂದ್ರ ಗಾಣಿಗೇರ, ಸಂಜಯ ಬಿರಡಿ, ಇವರು ಜಿಲೇಬಿ, ಐನಾಪುರ ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ, ಉಪಾಧ್ಯಕ್ಷ ಆದಿನಾಥ ದಾನೋಳಿ ಇವರು ಊಟದ ವ್ಯವಸ್ಥೆ, ಗುರುರಾಜ ಮಡಿವಾಳರ ತಂಪು ಪಾನೀಯ ಪೂರೈಸಿ, ಉರಿ ಬಿಸಿಲಿನಲ್ಲಿ ಕುಳಿತ ಹೋರಾಟಗಾರರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದರು.
ಹಸಿರು ಸೇನೆ ಸಂಘದ ಮುಖ್ಯಸ್ಥ ಮಹಾದೇವ ಮಡಿವಾಳ, ಮತ್ತು ಅವರ ಬೆಂಬಲಿಗರು ಉಗ್ರ ಪ್ರತಿಭಟನೆ ಕೈಗೊಂಡಿದ್ದಾರೆ. ಅವರಿಗೆ ಎಲ್ಲ ರೈತರು ಪಕ್ಷಾತೀತವಾಗಿ ಸಾಥ ನೀಡಿದ್ದಾರೆ.