ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ: ಡಾ. ಕನಕಪ್ಪ ಪೂಜಾರ
ಬೆಳಗಾವಿ 24: ಸತತ ಪರಿಶ್ರಮ ವಿದ್ಯಾರ್ಥಿಯನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ಯುತ್ತದೆ. ಆ ದಿಸೆಯಲ್ಲಿ ಯುವ ಸಮುದಾಯ ಕಾರ್ಯಪ್ರವೃತ್ತರಾಗಬೇಕು ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ಸಂಯೋಜನಾಧಿಕಾರಿ ಡಾ. ಕನಕಪ್ಪ ಪೂಜಾರ ಹೇಳಿದರು.
ಯುವಜನ ಸೇವೆ ಮತು ಕ್ರೀಡಾ ಇಲಾಖೆ ಭಾರತ ಸರ್ಕಾರ, ರಾಜ್ಯ ಎನ್.ಎಸ್.ಎಸ್. ಕೋಶ, ನೆಹರು ಯುವ ಕೇಂದ್ರ ಹಾಗೂ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ ಇವರುಗಳ ಸಹಯೋಗದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ವಿಕಸಿತ ಭಾರತ ಯುವ ಸಂಸತ್ತು ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ನಿವೃತ್ತ ವಾಯುಸೇನಾ ಅಧಿಕಾರಿ ಬಸವರಾಜ ವಣ್ಣೂರ ಮಾತನಾಡಿ, ಎಲ್ಲ ಯುವಜನತೆ ದೇಶಾಭಿಮಾನವನ್ನು ಹೊಂದಬೇಕು. ಸ್ಪರ್ಧೆಯಲ್ಲಿ ಸೋಲು ಗೆಲವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದು ನುಡಿದರು.
ತೀರ್ುಗಾರರಾದ ಡಾ. ಎಂ.ಪಿ. ಶೇಗುಣಸಿ, ನೆಹರು ಯುವ ಕೇಂದ್ರದ ಯುವ ಅಧಿಕಾರಿ ಎಂ.ಎ. ಗೌತಮ ರಡ್ಡಿ, ಜಿಲ್ಲಾ ನೋಡಲ್ ಅಧಿಕಾರಿ ಡಾ. ಸಂಜೀವ ತಳವಾರ, ಬೆಳಗಾವಿ ಜಿಲ್ಲಾ ಪ್ರಭಾರಿ ಸಂಯೋಜನಾಧಿಕಾರಿ ಪ್ರಕಾಶ ಕುರುಪಿ ಮಾತನಾಡಿದರು. ವಿದ್ಯಾಥಿಗಳಾದ ಬಾಳೇಶ ಯಲ್ಲನ್ನವರ, ಬಸಲಿಂಗಪ್ಪ ಕಮನ್ನವರ, ಸೌಮ್ಯಾ ಭಂಗಿ, ಶಾಂಭವಿ ಕಾರ್ಯಕ್ರಮದ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಭಾಗವಹಿಸಿದ 150 ಜನ ಸ್ಪರ್ಧಾಳುಗಳಲ್ಲಿ 10 ಜನರನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು: ಬೆಳಗಾವಿ ಸಿಟಿಇ ಕಾಲೇಜಿನ ಸಾಕ್ಷಿ ಗುರವ, ಅನೀತಾ ಅಮ್ಮಣಗಿ, ಪೂಜಾ ತಳವಾರ, ಬಿ.ಕೆ ಕಾಲೇಜಿನ ವೈಷ್ಣವಿ ಕಿರಾಳೆ, ಎಸ್.ಆರ್.ಎಫ್.ಜಿ.ಸಿ. ಕಾಲೇಜಿನ ಶಾಂಭವಿ ತೋರ್ಲಿ, ಮರಾಠ ಮಂಡಳ ಇಂಜಿನಿಯರಿಂಗ್ ಕಾಲೇಜಿನ ಸಮೃದ್ಧಿ ಪನ್ಹಾಳಕರ್, ಕೆ.ಎಲ್.ಎಸ್. ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಕಾರ್ತಿಕ ಪಾಟೀಲ, ಗೋಕಾಕ ಜೆ.ಎಸ್.ಎಸ್. ಕಾಲೇಜಿನ ರಶ್ಮಿತಾ ರಾಯ್ಕರ್, ಕೆ.ಎಲ್.ಇ. ಆಯುರ್ವೆದ ಕಾಲೇಜಿನ ಶಾಂಭವಿ, ಲಿಂಗರಾಜ್ ಪದವಿ ಕಾಲೇಜಿನ ಅಕ್ಷತಾ ಅವಲಕ್ಕಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಂಭವಿ ಪಾರ್ಥಿಸಿದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಪ್ರಭಾರಿ ಸಂಯೋಜನಾಧಿಕಾರಿ ಶಂಕರ ನಿಂಗನೂರ ನಿರೂಪಿಸಿದರು. ತಾಲೂಕಾ ಸಂಯೋಜನಾಧಿಕಾರಿ ಯಲ್ಲಪ್ಪ ದಬಾಲಿ ಸ್ವಾಗತಿಸಿದರು. ಸಂತೋಷ ಚಿಪ್ಪಾಡಿ ಅತಿಥಿಗಳನ್ನು ಪರಿಚಯಿಸಿದರು. ಮಹೇಶ ಪೂಜಾರಿ ವಂದಿಸಿದರು.