ಅಧ್ಯಯನ, ಸಂಶೋಧನೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ಸಂಕನೂರ

ಗದಗ 30:  ವಿಜ್ಞಾನ ವಿಷಯಗಳ ಅಧ್ಯಯನ ಮತ್ತು ಸಂಶೋಧನೆಗಾಗಿ ರಾಜ್ಯ ಹಾಗೂ ಕೇಂದ್ರ ಸಕರ್ಾರದಿಂದ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರಕಬೇಕಾಗಿದೆ   ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ನುಡಿದರು.  

ಗದುಗಿನ ಗುರುಬಸವ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿಂದು  ಗದಗ  ಜಿಲ್ಲಾಡಳಿತ,  ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ   ಪ್ರೌಢಶಾಲಾ ವಿದ್ಯಾಥರ್ಿಗಳ ಹಾಗೂ ವಿಜ್ಞಾನ ಶಿಕ್ಷಕರ  2018-2019 ನೇ ಸಾಲಿನ ರಾಜ್ಯ ಮಟ್ಟದ  ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತ, ಕ್ರೀಡೆ, ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ ಗದಗನಲ್ಲಿ ನಡೆಯುತ್ತಿರುವ    ರಾಜ್ಯ ಮಟ್ಟದ ಈ  ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಯಶಸ್ಸು ಪಡೆದವರು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವರು.    ವಿದ್ಯಾಥರ್ಿಗಳಲ್ಲಿ  ವಿಜ್ಞಾನದ ಬಗ್ಗೆ ಆಸಕ್ತಿ ಹಾಗೂ ಪ್ರೇರಣೆ ನೀಡಲು ಇಂತಹ ವಸ್ತುಪ್ರದರ್ಶನ ಸಹಾಯಕವಾಗುತ್ತದೆ.  ವಿಜ್ಞಾನ ಕ್ಷೇತ್ರಕ್ಕೆ  ಭಾರತ ದೇಶವು ಮೂರು ಸಾವಿರ ವರ್ಷಗಳ ಹಿಂದೆ ಕೊಡುಗಡೆ  ನೀಡಿದೆ.   ಸುಶ್ರುತ ಋಷಿಗಳು ಮೂರು ಸಾವಿರ ವರ್ಷಗಳ ಹಿಂದೆಯೇ ಶಸ್ತ್ರ ಚಿಕಿತ್ಸೆ ಮಾಡುವುದನ್ನು ಸಂಶೋಧಿಸಿದವರು.   ಆರ್ಯಭಟ್ರು  ಗಣಿತದಲ್ಲಿ  " ಶೂನ್ಯ " ಕಂಡು ಹಿಡಿದವರು ನಮ್ಮ ದೇಶದವರೇ ಎಂಬುದು ಹೆಮ್ಮೆಯ ವಿಷಯವಾಗಿದೆ.     ಶಿಕ್ಷಣ ತಜ್ಞರ ಅಧ್ಯಯನ ಪ್ರಕಾರ  ಎಸ್.ಎಸ್.ಎಲ್.ಸಿ. ಪಾಸಾದವರು ಶೇ. 30 ರಷ್ಟು ಜನ ವಿಜ್ಞಾನ ವಿಷಯದಲ್ಲಿ ಪಿಯುಸಿ ಕಲಿಯುತ್ತಿದ್ದು  ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ  ವಿಜ್ಞಾನ ಓದಲು ಈ ನಿಟ್ಟಿನಲ್ಲಿ  ಅವರಿಗೆ ಪ್ರೋತ್ಸಾಹಿಸಬೇಕೆಂದು ಎಸ್.ವಿ. ಸಂಕನೂರ ನುಡಿದರು.  

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ  ಮಾತನಾಡಿ ಮಾನವ ಜೀವನದ    ಪ್ರತಿಯೊಂದು ರಂಗದಲ್ಲಿ  ಇಂದು ವಿಜ್ಞಾನ ತನ್ನದೇ ಛಾಪು ಮೂಡಿಸಿದೆ.       ಜನಸಂಖ್ಯೆಗನುಗುಣವಾಗಿ  ಹೆಚ್ಚಿನ ಆಹಾರ ಧಾನ್ಯ ಉತ್ಪಾದನೆಗೆ  ವಿಜ್ಞಾನವೇ ಕಾರಣವಾಗಿದೆ. ಆದಾಗ್ಯೂ ಆರೋಗ್ಯ ಹಾಗೂ ಸಾಮಾಜಿಕ  ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ವಿಜ್ಞಾನದ ಕೊಡುಗೆಗಳಾದ ಮೊಬೈಲ್ ಇಂಟರ್ನೆಟ್ಗಳನ್ನು ಹಿತಮಿತವಾಗಿ ಬಳಸಿ ಇವುಗಳ ದುರುಪಯೋಗವಾಗದಂತೆ ತಡೆಯಬೇಕಿದೆ.  ಮಕ್ಕಳ ಸೃಜನಶೀಲತೆ ಬೆಳವಣಿಗೆಗೆ ಶಾಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಹೆಚ್ಚು ಸಹಾಯಕಾರಿ ಎಂದು ಜಿಲ್ಲಾಧಿಕಾರಿಗಳು ನುಡಿದರು.      

ಗದಗ ಜಿ.ಪಂ. ಉಪಾಧ್ಯಕ್ಷೆ  ಶಕುಂತಲಾ ಮೂಲಿಮನಿ,      ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ  ಈರಪ್ಪ ನಾಡಗೌಡ್ರ, ಗದಗ ತಾಲೂಕು ಪಂಚಾಯತ್ ಅಧ್ಯಕ್ಷ ಮೋಹನ ದುರಗಣ್ಣವರ, ಉಪಾಧ್ಯಕ್ಷೆ ಶ್ರೀಮತಿ ಸುಜಾತಾ  ಖಂಡು, ತಾ.ಪಂ. ಸದಸ್ಯ ವಿದ್ಯಾದರ ದೊಡ್ಡಮನಿ,  ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಜಿ.ಎಲ್. ಬಾರಾಟಕ್ಕೆ, ತೋಂಟದಾರ್ಯ  ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ರಾಜ್ಯ ಹಾಗೂ ಜಿಲ್ಲಾ ಘಟಕದ ಸಕರ್ಾರಿ ನೌಕರರ ಸಂಘ ಹಾಗೂ ಎಲ್ಲಾ ಶಿಕ್ಷಕ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು,  ರಾಜ್ಯದ 34 ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ವಿದ್ಯಾಥರ್ಿಗಳು ಮತ್ತು ಶಿಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ   ಕ್ಷೇತ್ರಶಿಕ್ಷಣಾಧಿಕಾರಿಗಳು,     ಸಕರ್ಾರಿ, ಅನುದಾನಿತ,  ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ  ಶಿಕ್ಷಕರು  ಉಪಸ್ಥಿತರಿದ್ದರು. 

          ಗದಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಎಚ್.ಎಂ. ಖಾನ್   ಸ್ವಾಗತಿಸಿದರು.  ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಶರಣು ಗೋಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ ರಡ್ಡೇರ ವಂದಿಸಿದರು.  ಬಾಹುಬಲಿ ಜೈನರ್ ಕಾರ್ಯಕ್ರಮ ನಿರೂಪಿಸಿದರು.

        ವೇದಿಕೆಯಲ್ಲಿ  ಶ್ರೇಷ್ಟ ವಿಜ್ಞಾನಿಗಳಾದ  ಆಕರ್ಿಮಿಡೀಸ್, ಗೆಲಿಲಿಯೋ, ಇಸಾಕ್ ನ್ಯೂಟನ್, ಮೇರಿ ಕ್ಯೂರಿ, ಲ್ಯೂಯಿಸ್ ಪಾಶ್ಚರ್, ಥಾಮಸ್ ಆಲ್ವಾ ಎಡಿಸನ್, ಅಲ್ಬರ್ಟ ಐನಸ್ಟೀನ್,  ಸ್ಟೀಫನ್ ಹಾಕಿಂಗ್, ಸಿ.ವಿ. ರಾಮನ್, ಜಗದೀಶ ಚಂದ್ರಬೋಸ, ಶ್ರೀನಿವಾಸ ರಾಮಾನುಜನ್, ಸಿ. ಚಂದ್ರಶೇಖರ್, ಹೋಮಿಯೋ  ಜಹಾಂಗೀರ ಬಾಬಾ, ವಿಕ್ರಮ್ ಸಾರಾಭಾಯಿ, ಎಪಿಜೆ ಅಬ್ದುಲ್ ಕಲಾಂ, ಸಿ ಎನ್ ಆರ್ ರಾವ್ ಅವರ  ಛಾಯಾಚಿತ್ರಗಳನ್ನು  ಪ್ರದಶರ್ಿಸಲಾಗಿತ್ತು.     

ಗದುಗಿನ  ಗುರುಬಸವ ಪ್ರೌಢಶಾಲೆಯಲ್ಲಿ ಮೂರು ದಿನಗಳ ಕಾಲ ನಡೆಯುವ ವಿಜ್ಞಾನ ವಸ್ತು ಪ್ರದರ್ಶನದಲ್ಲಿ   ವ್ಯವಸಾಯ ಮತ್ತು ಸಾವಯವ ಕೃಷಿ, ಆರೋಗ್ಯ ಮತ್ತು ನೈರ್ಮಲ್ಯ, ಸಂಪನ್ಮೂಲ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ವಿನ್ಯಾಸದಲ್ಲಿ ಗಣಿತ ಶಾಸ್ತ್ರದ ಬಳಕೆ ಹಾಗೂ ಸಾರಿಗೆ ಮತ್ತು ಸಂಪರ್ಕ ಈ ವಿಷಯಗಳ ಕುರಿತು  ರಾಜ್ಯದ ವಿವಿಧ ಶೈಕ್ಷಣಿಕ ಜಿಲ್ಲೆಗಳಿಂದ ಆಗಮಿಸಿದ ಪ್ರೌಢಶಾಲಾ ವಿದ್ಯಾಥರ್ಿಗಳು  ಹಾಗೂ ಶಿಕ್ಷಕರ ತಂಡಗಳು ಪ್ರಾತ್ಯಕ್ಷಿಕೆ ಪ್ರದಶರ್ಿಸಿದ್ದು ಸಾರ್ವಜನಿಕರು ವಿದ್ಯಾಥರ್ಿಗಳು ಸೋಮವಾರದವರೆಗೆ ಪ್ರತಿ ದಿನ ಮುಂಜಾನೆ 10 ರಿಂದ ಸಂಜೆ 5 ರವರೆಗೆ  ವೀಕ್ಷಿಸಬಹುದಾಗಿದೆ.  ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.