ಲೋಕದರ್ಶನ ವರದಿ
ತಾಳಿಕೋಟೆ 07:ವಿದ್ಯಾಥರ್ಿಗಳು ಓದಿನ ಕಡೆಗೆ ಲಕ್ಷ ಕೊಡಬೇಕು ಅಲ್ಲದೇ ಜೀವನದಲ್ಲಿ ಆತ್ಮಸ್ಥೈರ್ಯವೆಂಬುದನ್ನು ಹೆಚ್ಚಿಸಿಕೊಳ್ಳಬೇಕು ಇದರಿಂದ ಮುಂಬರುವ ಪರಿಕ್ಷೆಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ ಎಂದು ದ.ವಿಸನ್ ಪಿಯು ಕಾಲೇಜ್ನ ಅಕಾಡೆಮಿಯ ಸದಸ್ಯ ಬ್ರಹ್ಮಯ್ಯನವರು ಹೇಳಿದರು.
ರವಿವಾರರಂದು ಬೆಂಗಳೂರಿನ ದ.ವಿಸನ್ ಪಿಯು ಕಾಲೇಜ್ ವತಿಯಿಂದ ತಾಳಿಕೋಟೆಯ ಶ್ರೀ ಸಂಗಮೇಶ್ವರ ಸಭಾ ಭವನದಲ್ಲಿ ಏರ್ಪಡಿಸಲಾದ ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳಿಗೆ ವ್ಯಾಸಂಗದ ಬಗ್ಗೆ ಮಾರ್ಗದರ್ಶನ ಮತ್ತು ಪ್ರೇರಣೆ ಉಚಿತ ಸೆಮಿನಾರ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ವಿದ್ಯಾಥರ್ಿಗಳಲ್ಲಿ ಕಲಿಕಾ ಆಸಕ್ತಿ ಎಂಬುದು ಇರಬೇಕು ಅಲ್ಲದೇ ಅದರ ಜೊತೆಗೆ ಸಮಯವನ್ನು ವ್ಯರ್ಥವಾಗಿ ಪೋಲು ಮಾಡದೇ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಶಾಲೆಯ ಆಯಾ ವಿಷಯಕ್ಕೆ ಸಂಬಂದಿಸಿದ ಶಿಕ್ಷಕರೊಂದಿಗೆ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು ಇದರಿಂದ ವಿದ್ಯಾಥರ್ಿಗಳಲ್ಲಿ ಪರಿಕ್ಷೆಯನ್ನು ಎದುರಿಸಲು ಸುಲಭವಾಗಲಿದೆ ಉತ್ತಮ ಮಾರ್ಗದರ್ಶ ಶಿಕ್ಷಣದೊಂದಿಗೆ ಮುನ್ನಡೆದ ಬೆಂಗಳೂರಿನ ದ ವಿಸನ್ ಪಿಯು ಕಾಲೇಜಿನ ಶಿಕ್ಷಣ ಮಾರ್ಗದರ್ಶನದ ಬಗ್ಗೆ ಬಣ್ಣಿಸಿದರು.
ಇನ್ನೋರ್ವ ದವಿಸನ್ ಪಿಯು ಕಾಲೇಜ್ ಅಕಾಡೆಮಿಯ ಸದಸ್ಯ ಮುರಳಿ ಅವರು ಮಾತನಾಡಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವದು ಮುಖ್ಯವಲ್ಲಾ ಮಕ್ಕಳು ಶಾಲೆಯ ಗುಣಮಟ್ಟದ ಶಿಕ್ಷಣಕ್ಕೆ ಏಷ್ಟು ಸ್ಪಂದಿಸುತ್ತಿದ್ದಾರೆ ಅಂಕಗಳಿಕೆ ಹೇಗೆ ಇದೆ ಎಂಬುದನ್ನು ಅಥರ್ೈಸಿಕೊಳ್ಳುವಂತಹ ಕಾರ್ಯ ಪಾಲಕರದ್ದಾಗಬೇಕು ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಶಾಲೆಯ ಶಿಕ್ಷಕ ವೃಂದದವರೊಂದಿಗೆ ಚಚರ್ಿಸಿ ಮಕ್ಕಳ ಉತ್ತಮ ಶಿಕ್ಷಣಕ್ಕೆ ಪ್ರೇರೆಪಿಸುವಂತಹ ಕಾರ್ಯವಾಗಬೇಕು ವಿದ್ಯಾಥರ್ಿಗಳು ಆತ್ಮಸ್ಥೈರ್ಯದೊಂದಿಗೆ ಮುನ್ನಡೆಯಬೇಕೆಂದು ಪಾಲಗೊಂಡ ವಿದ್ಯಾಥರ್ಿಗಳ ಪ್ರಶ್ನೇಗಳಿಗೆ ಉತ್ತರಿಸಿದರು.
ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ದವಿಸನ್ ಪಿಯು ಕಾಲೇಜ್ನ ಪ್ರೋ.ಅನೀಲ ವಿಸನ್, ಪ್ರೋ.ಸಪ್ನಾ ಅವರು ವಿದ್ಯಾಥರ್ಿಗಳು ಪರಿಕ್ಷೆಯನ್ನು ಹೆಗೆ ಎದುರಿಸಬೇಕು ಎಂಬುದರ ಕುರಿತು ವಿವರಿಸಿದರು.
ಇದೇ ಸಮಯದಲ್ಲಿ ದವಿಸನ್ ಪಿಯು ಕಾಲೇಜ್ನಲ್ಲಿ ಶಿಕ್ಷಣ ಪಡೆದು ಉನ್ನತ ಶಿಕ್ಷಣ ಆಯ್ಕೆಯಾದ ವಿದ್ಯಾಥರ್ಿಗಳ ಪಾಲಕರಾದ ಎಪಿಎಂಸಿ ಸದಸ್ಯ ಮಲ್ಲನಗೌಡ ಯಾಥಗಿರಿ, ಸಿದ್ದನಗೌಡ ಪಾಟೀಲ, ಬಾಗೇವಾಡಿ, ಅವರಿಗೆ ಸನ್ಮಾನಿಸಿ ಗೌರವಿಸಿದರು.ವೇದಿಕೆಯ ಮೇಲೆ ಪ್ರೋ.ಪಠಾಣ, ರಾಮಪ್ರಸಾದ, ಮೊದಲಾದವರು ಉಪಸ್ಥಿತರಿದ್ದರು.