ವಿದ್ಯಾರ್ಥಿಗಳು ಸಂವಿಧಾನ ವಿವಿಧ ಕಾನೂನು ಕಾಯ್ದೆಗಳನ್ನು ಅರಿತೊಕೊಳ್ಳಬೇಕು : ವಿಶ್ವನಾಥ್ ಹಿರೇಗೌಡರ್
ಕಂಪ್ಲಿ 30: ವಿದ್ಯಾರ್ಥಿಗಳು ಶಾಲೆ,ಕಾಲೇಜು ಹಂತಗಳಲ್ಲಿಯೇ ಸಂವಿಧಾನ,ವಿವಿಧ ಕಾನೂನು, ಕಾಯ್ದೆಗಳ ಬಗ್ಗೆ ಅರಿತುಕೊಂಡರೆ ಅಪರಾಧ ಕೃತ್ಯಗಳು ಕಡಿಮೆಯಾಗಲಿವೆ ಎಂದು ಕುರುಗೋಡು ಸಿಪಿಐ ವಿಶ್ವನಾಥ್ ಹಿರೇಗೌಡರ್ ತಿಳಿಸಿದರು. ಅವರು ಕಂಪ್ಲಿ ತಾಲ್ಲೂಕು ಎಮ್ಮಿಗನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕುರುಗೋಡು ಪೊಲೀಸ್ ಠಾಣೆ, ಶ್ರೀ ಜಡೆಸಿದ್ದೇಶ್ವರ ಎಜ್ಯುಕೇಷನಲ್ ಟ್ರಸ್ಟ್, ಹಾಗೂ ಪತ್ರಕರ್ತರ ಬಳಗ ಏರಿ್ಡಸಿದ್ದ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿಯೇ ಸಂವಿಧಾನ, ಪೋಕ್ಸೋ ಕಾಯ್ದೆ, ವಿವಿಧ ರೀತಿಯ ಅಪರಾಧದ ಕಾನೂನುಗಳನ್ನು ಅರಿತೊಕೊಂಡರೆ ಉತ್ತಮ. 18 ವರ್ಷಕ್ಕೂ ಮುನ್ನ ವಿದ್ಯಾರ್ಥಿಗಳು ವಾಹನಗಳನ್ನು ಚಲಾಯಿಸಬಾರದು, ಚಾಲನಾ ಪರವಾನಿಗೆ ವಾಹನಗಳನ್ನು ಓಡಿಸಬಾರದು. ದುಶ್ಚಟಗಳಿಗೆ ಬಲಿಯಾಗಿ ಉತ್ತಮ ಜೀವನವನ್ನು ಹಾಳುಮಾಡಿಕೊಳ್ಳದೇ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಆದರ್ಶ ಜೀವನ ನಡೆಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕೆಂದರು. ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ ಮಾತನಾಡಿ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಯಾರೂ ದುಶ್ಚಟಗಳು ಹಾಗೂ ಅನೈತಿಕ ಚಟುವಟಿಕೆಗಳನ್ನು ನಡೆಸಬಾರದು, ಅಂತಹವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ನ್ಯಾಯವಾದಿ ಶ್ರೀಕಾಂತ್ ಮಾತನಾಡಿ ವಿವಿಧ ಕಾನೂನುಗಳ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನು ನೀಡಿದರಲ್ಲದೆ, ಕಾನೂನು ಉಲ್ಲಂಘಿಸುವಂತ ಕಾರ್ಯಗಳನ್ನು ಯಾರೂ ಮಾಡಬಾರದು ಎಂದರು. ಕಾರ್ಯಕ್ರಮದಲ್ಲಿ ಜ್ಞಾನಜ್ಯೋತಿ ಶಿವಲಿಂಗ ಮಂದಿರದ ಜಡೇಶತಾತ, ಗ್ರಾ.ಪಂ.ಅಧ್ಯಕ್ಷೆ ಶಾರದಾ, ಪ್ರಾಚಾರ್ಯೆ ತಾರಾ ನಂದ್ಯಾಲ, ಉಪ ಪ್ರಾಚಾರ್ಯ ಹುಲುಗಪ್ಪ, ಮುಖಂಡರಾದ ಆಶಾಪುರ ವಾಗೀಶ್, ರಾಘವೇಂದ್ರ ರೆಡ್ಡಿ, ರಾಮಕೃಷ್ಣರಾಜು, ಕಾಸೀಂಸಬಾ, ಎಸ್.ರಾಮಪ್ಪ, ಮಹೇಶ್, ಜಿ.ಎಂ.ಬಸಯ್ಯಸ್ವಾಮಿ, ಗಾದಿಲಿಂಗಪ್ಪ, ವೀರೇಶ್, ಮೇಘರಾಜ ಸೇರಿದಂತೆ ಇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜ.002: ಕಂಪ್ಲಿ ತಾಲ್ಲೂಕು ಎಮ್ಮಿಗನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರಿ್ಡಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಸಿಪಿಐ ವಿಶ್ವನಾಥ್ ಹಿರೇಗೌಡರ್ ಉದ್ಘಾಟಿಸಿದರು.