ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ತಪಸ್ಸಿನಂತೆ ರೂಢಿಸಿಕೊಳ್ಳಬೇಕು

Students should develop the habit of reading as penance

ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ತಪಸ್ಸಿನಂತೆ ರೂಢಿಸಿಕೊಳ್ಳಬೇಕು 

 ರಾಣೇಬೆನ್ನೂರ 07: ಇಂದಿನ ದಿನಮಾನಗಳಲ್ಲಿ ನಮ್ಮ ಓದು ಇಂಟರ್ನೆಟ್‌ನಲ್ಲಿ ಲಭ್ಯವಾಗುವಂತಹ ಮಾಹಿತಿಗಳಿಗೆ ಸೀಮಿತವಾಗಿದೆ ಎಂದು ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಹೇಳಿದರು.ತಾಲೂಕಿನ ಸುಣಕಲ್ಲಬಿದರಿಯ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಶುಕ್ರವಾರ ಪ್ರೇರಣಾ ಕೋಶ, ಉದ್ಯೋಗ ಭರವಸಾ ಕೋಶ, ಐ.ಕ್ಯೂ.ಎ.ಸಿ. ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ “ಓದುವ ಹವ್ಯಾಸದ ಶ್ರೇಷ್ಟತೆ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮನೆಗಳಲ್ಲಿ ಪುಸ್ತಕ ಇಟ್ಟುಕೊಳ್ಳುವರು, ಓದುವವರು ಶ್ರೀಮಂತರೆಂಬ ಮಾತುಗಳಿದ್ದವು. ಈಗ ಪುಸ್ತಕ ಇಟ್ಟುಕೊಳ್ಳುವುದಿರಲಿ, ಅವುಗಳನ್ನು ಓದುವ ಹವ್ಯಾಸವೇ ಇಲ್ಲವಾಗುತ್ತಿದೆ. ಈಗಿನ ವಿದ್ಯಾರ್ಥಿಗಳು ಹಲವು ಕೆಟ್ಟ ಹವ್ಯಾಸಗಳಿಂದ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ತಪಸ್ಸಿನಂತೆ ರೂಢಿಸಿಕೊಂಡಿದ್ದೇ ಆದರೆ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಕೇವಲ ಪರೀಕ್ಷಾ ದೃಷ್ಟಿಯಿಂದ ಓದುವ ಓದು ನಿಜವಾದ ಓದಲ್ಲ. ಓದಿದರೆ ಬುದ್ಧಿವಂತರರಾಗುತ್ತೇವೆ ಎಂಬುದು ಗೊತ್ತಿದೆ. ಆದರೂ ಪ್ರತಿ ತಿಂಗಳು ಮೊಬೈಲ್‌ಗೆ ಖರ್ಚು ಮಾಡುವ ಹಣವನ್ನು ಪುಸ್ತಕಗಳಿಗೆ ಹಾಕುವುದಿಲ್ಲ ಎಂದರು.ಕಾರ್ಯಕ್ರಮವನ್ನು ಪ್ರೊ.ಲೋಹಿಯಾ ಕೆ.ಜೆ.ಆರ್‌. ಉದ್ಘಾಟಿಸಿದರು. 

ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್‌. ಎಫ್‌. ಅಯ್ಯನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಪ್ರೇರಣಾ ಕೋಶದ ಸಂಚಾಲಕ ಡಾ. ಹನುಮಂತರಾಜು ಎನ್‌.ಬಿ., ಪ್ರಾಧ್ಯಾಪಕರಾದ ಡಾ. ರವಿ ಎಂ., ಡಾ. ಬಸವರಾಜ ಹುಗ್ಗಿ, ಡಾ. ನಾಗರಾಜ ಗೋಡಿಹಾಳ, ಪ್ರೊ. ರವಿಕುಮಾರ ಎಸ್‌.ಯು, ಸೇರಿದಂತೆ ಇತರರಿದ್ದರು.