ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು- ಡಾ: ಜಿ.ಪಿ. ಮಾಳಿ ಎಂ.ಬಿ. ಘಸ್ತಿ
ಸಂಕೇಶ್ವರ 20: ಇಲ್ಲಿಯ ರಸಿಕ ವ್ಯಾಖ್ಯಾನಮಾಲಾ ಸಮಾರಂಭವು ಜರುಗಿತು, ಇಂದ್ರಜೀತ ಕುರಣಕರ ಇವರು ದೀಪ ಪ್ರಜ್ವಲಗೊಳಿಸಿ ಸಮಾರಂಭಕ್ಕೆ ಚಾಲನೆ ನೀಡಿದರು, ಕೊಲ್ಹಾಪೂರದ ಪ್ರಿನ್ಸಿಪಲ್ ಡಾ: ಜಿ.ಪಿ. ಮಾಳಿ ಇವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ವ್ಯಾಸಂಗಲ್ಲಿ ಪಠ್ಯಪುಸ್ತಕಗಳನ್ನು ಓದುವ ಹವ್ಯಾಸ ಮೈರೂಢಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಂದುವರೆದು ಮಾತನಾಡುತ್ತಾ ದೇಶದಲ್ಲಿ ಸಾಕಷ್ಟು ಗುಡಿಗುಂಡಾರಗಳು ಇದ್ದು ಜನತೆ ದೇವರ ಮೊರೆ ಹೋಗುತ್ತಿದ್ದು ಇದು ತುಂಬ ಹರ್ಷದ ವಿಷಯ ಇದರಂತೆ ಪಾಲಕರು ತಮ್ಮ ಮಕ್ಕಳಿಗೆ ಓದುವ ಮತ್ತು ಸಾಂಸ್ಕೃತಿಕ ಜ್ಞಾನ ಸಂಪಾದನೆ ಮಾಡಬೇಕು ಇವುಗಳನ್ನೆಲ್ಲಿ ಬಿಟ್ಟು ಯುವಕರು ಮೋಬೈಲ ಜೊತೆ ಕಾಲಹರಣ ಮಾಡುತ್ತಿರುವುದು ತುಂಬಾ ದುರ್ದೈವದ ಸಂಗತಿ ಎಂದು ತಮ್ಮ ಭಾಷಣದಲ್ಲಿ ವಿಷಾದ ವ್ಯಕ್ತಪಡಿಸಿ ವಿದ್ಯಾರ್ಥಿಗಳು ವಾಚನಾಲಯದಲ್ಲಿ ಓದುವ ಹವ್ಯಾಸ ಮಾಡಿಕೊಳ್ಳಬೇಕೆಂದು ಹೇಳಿದರು.
ಈ ಸಮಾರಂಭದಲ್ಲಿ ವಿನೋದ ಕುಲಕರ್ಣಿ, ನಿವೃತ್ತ ಪ್ರಾಚಾರ್ಯ ಮನ್ನೋಳಿಮಠ, ದುಂಡಪ್ಪಾ ವಾಳಕಿ, ಸುರೇಖಾ ಶೇಂಡಗೆ, ಅಪ್ಪಾ ಮೋರೆ, ಅಶೋಕ ಜಾಧವ, ಉದಯ ನಾಯಿಕ, ಅರವಿಂದ ಕುರಾಡೆ, ಕೊನೆಗೆ ಪಿ.ಡಿ.ಮಾನೆ ಇವರಿಂದ ಆಭಾರ ಮನ್ನಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.