ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ : ಸಿಪಿಐ ರಂಗನಾಥ
ಮುಂಡಗೋಡ 10: ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯವಾಗಿದೆ. ಎಂದು ಮುಂಡಗೋಡ ಪೊಲೀಸ ಠಾಣೆಯ ನೀರೀಕ್ಷಕರಾದ ಸಿಪಿಐ ರಂಗನಾಥ ನೀಲಮ್ಮನವರ ಹೇಳಿದ್ದರು.
ಪಟ್ಟಣದಲ್ಲಿ ಸೋಮವಾರ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ವಿವಿಧ ರಸ್ತೆಗಳಲ್ಲಿ “ಅಪರಾಧ ತಡೆ ಮಾಸಚಾರಣೆ” ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಳ ಜಾಗೃತಿ ಜಾಥಾ ಹಾಗೂ ವಿದ್ಯಾರ್ಥಿಗಳಿಗೆ ಕಾನೂನು ಅರಿವು “ಅಪರಾದ ತಡೆ ಮಾಸಚಾರಣೆ“ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಇವತ್ತಿನ ದಿನಮಾನಗಳಲ್ಲಿ ಡಿಜಿಟಲ್ ಯುಗವಾಗಿರುವುದರಿಂದ ಮೊಬೈಲ್, ಲ್ಯಾಪ್ ಟಾಪ್, ಹಾಗೂ ಕಂಪ್ಯೂಟರ್ ಮೂಲಕ ಅಪರಾದ ಮತ್ತು ವಂಚನೆಗಳು ಹೆಚ್ಚಿವೆ ಕಳ್ಳತನಗಳ ಹಾಗೂ ರಸ್ತೆ ಅಪಘಾತಗಳು ಹಾಗೂ ಸೈಬರ್ ಕ್ರೈಮ್ ಗಳು ಆಗುವಂತ ಅನಾಹುತಗಳ ಮೋಸಕ್ಕೊಳಗಾಗಬಾರದು.
ಪೊಲೀಸರೆಂದು ಹೇಳಿಕೊಂಡು ಯಾರಾದರೂ ಕರೆ ಮಾಡಿದರೂ ಕೂಡ ಸ್ಥಳಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಈ ಬಗ್ಗೆ ಪ್ರಸುತ್ತಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸಂಚಾರ ನಿಯಮ,ಸೈಬರ್ ಅಪರಾಧ ಫೋಕ್ಸೋ ಕಾಯ್ದೆ, ಸಹಾಯವಾಣಿ 1930 ್ಘ ಇಖಖಖ 112 ಬಗ್ಗೆ ಕಾನೂನು ಅರಿವು ತಿಳಿಸಿದ್ದರು. ಈ ಸಂದರ್ಭದಲ್ಲಿ ಪಿಎಸ್‌ಐ ಪರಶುರಾಮ ಮಿರ್ಜಗಿ, ಹನ್ಮಂತ ಕುಳಗುಂಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.