ಲೋಕದರ್ಶನ ವರದಿ
ಹುಲಕೋಟಿ 02: ವಿದ್ಯಾಥರ್ಿಗಳು ಕಠಿಣ ಪರಿಶ್ರಮದಿಂದ ಕಾನೂನು ಅಧ್ಯಯನ ಮಾಡಿದಾಗ ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯವೆಂದು ಜಿ.ಎಸ್.ಸಂಗ್ರೇಶಿ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾಕಾನೂನು ಸೇವೆ ಪ್ರಾಧಿಕಾರ ಗದಗ ಇವರು ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸ್ಥಳೀಯ ಜಿ.ಸಿ.ಟಿ.ಎಂ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರ ಗದಗ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ "ವಿದ್ಯಾಥರ್ಿಗಳಿಗಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮದ" ಉದ್ಘಾಟಕರಾಗಿ ಆಗಮಿಸಿ ಮೇಲಿನಂತೆ ನುಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದರ್ೆಶಕರಾದ ಎಸ್.ಎಸ್.ಹಿರೇಮಠ ಮಾತನಾಡುತ್ತ ಹೆಣ್ಣುಮಕ್ಕಳಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ನೀಡಲಾಗಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಉಪನ್ಯಾಸ ನೀಡಿದ ಶೈಲಜಾ ಬಿ ಹಿರೇಮಠ ಪ್ಯಾನಲ್ ವಕೀಲರು ಬಾಲನ್ಯಾಯ ಅಧಿನಿಯಮ, ಪೋಕ್ಸೋ ಕಾಯಿದೆ, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ, ವರದಕ್ಷಿಣೆ ನಿಷೇದ, ಬಾಲ್ಯ ವಿವಾಹ, ಈ ಎಲ್ಲಾ ಅಪರಾಧಗಳಿಗಾಗಿ ಸಂವಿಧಾನದಲ್ಲಿ ಆಗಿರುವ ತಿದ್ದುಪಡಿಗಳನ್ನು ಕುರಿತು ವಿದ್ಯಾಥರ್ಿಗಳಿಗೆ ವಿವರಿಸಿದರು.
ಅತಿಥಿಗಳಾದ ಆರ್.ಜಿ.ಕಲ್ಲೂರ ಜಿಲ್ಲಾಸರಕಾರಿ ವಕೀಲರು ವಿದ್ಯಾಥರ್ಿಗಳು ಪಿಯುಸಿ ಶಿಕ್ಷಣ ಮುಗಿದ ನಂತರ ಕಾನೂನು ಶಾಸ್ತ್ರ ಅಧ್ಯಯನ ಮಾಡಬೇಕೆಂದು ಹೇಳಿದರು. ರೇಣುಕಾ ಜಿ. ಕುಲಕಣರ್ಿ ಹೆಣ್ಣುಮಕ್ಕಳಿಗೆ ಕಾನೂನು ಶಾಸ್ತ್ರದಲ್ಲಿ ಅನೇಕ ಅವಕಾಶಗಳಿವೆ ರಾಷ್ಟ್ರದ ಇಂದಿನ ಕಲುಷಿತ ವಾತಾವರಣದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳು ಜ್ಞಾನ ಅವಶ್ಯವೆಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ.ಬಿ.ವಾಯ್.ನರೇಗಲ್ ಮಾತನಾಡಿ ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಚೌಕಟ್ಟಿನಲ್ಲಿ ವಿದ್ಯಾಥರ್ಿಗಳು ಜೀವನ ರೂಪಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ರೇಣುಕಾ ಜಿ. ಕುಲಕಣರ್ಿ, ಆರ್.ಜಿ.ಕಲ್ಲೂರ, .ಡಿ.ಬಿ.ಓದುಗೌಡ್ರ, ಕಿರಣ ಅಂಗಡಿ, ಡಾ.ಅಜರ್ುನ ಗೊಳಸಂಗಿ, ವಾಯ್.ಡಿ.ತಳವಾರ, ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು, ಅಧ್ಯಕ್ಷರನ್ನು ಪ್ರೊ. ಆರ್.ಸಿ.ದಿನ್ನಿ ಸ್ವಾಗತಿಸಿ ಪರಿಚಯಿಸಿದರು. ಕುಮಾರಿ.ಪೂಜಾ ಲಮಾಣಿ ಪ್ರಾರ್ಥನೆ ಗೀತೆ ಹಾಡಿದರು. ಕುಮಾರಿ. ರಾಜೇಶ್ವರಿ ಚಲವಾದಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಸಿಬ್ಬಂದಿವರ್ಗದವರು ಮತ್ತು ವಿದ್ಯಾಥರ್ಿಗಳು ಭಾಗವಹಿಸಿದ್ದರು. ರೇಷ್ಮಾಬೇಗಂ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.