ಅಂತರ್ರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ಗೆ ವಿದ್ಯಾಥರ್ಿಗಳು ಆಯ್ಕೆ

ಲೋಕದರ್ಶನ ವರದಿ

ಶಿಗ್ಗಾವಿ12: ಬೆಂಗಳೂರಿನ ಎಸ್.ಜಿ.ಎಸ್. ಇಂಟರ್ ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಇವರು ಆಯೋಜಿಸಿದ್ದ ರಾಷ್ಟ್ರೀಯ ಯೋಗ ಚಾಂಪಿಯನ್ಶಿಪ್ಗೆ 2018 ರಲ್ಲಿ ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ 09 ಮಂದಿ ಯೋಗ ಡಿಪ್ಲೊಮಾ ವಿದ್ಯಾಥರ್ಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. 

ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಚಾಂಪಿಯನ್ಶಿಪ್ನಲ್ಲಿ ಯೋಗ ಡಿಪ್ಲೊಮಾ ವಿದ್ಯಾಥರ್ಿಗಳಾದ ಹಷರ್ಿತಾ, ರೇಖಾ, ಗಿರಿರಾಜ್ ಹಿರೇಮಠ, ಶ್ರೀಧರ ಜಿ.ವೈ., ಹಿತೇಶ್ ಕುಮಾರ್, ವಿಜಯಲಕ್ಷ್ಮೀ ಮನ್ನಿಮಟ್ಟ, ಆನಂದ ಮಡಿವಾಳರ, ಗಂಗಾಧರ ಮಡಿವಾಳರ ಮತ್ತು ವಿಶಾಲಗೌಡ ಇವರುಗಳು ಪ್ರಥಮ ಬಹುಮಾನಗಳಿಸಿದ್ದಾರೆ. ಥೈಲ್ಯಾಂಡ್ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ಚಾಂಪಿಯನ್ಶಿಪ್ಗೆ ವಿಶ್ವವಿದ್ಯಾಲಯದ ಯೋಗ ಡಿಪ್ಲೊಮಾ ವಿದ್ಯಾಥರ್ಿಗಳಾದ ಹಷರ್ಿತಾ, ಗಿರಿರಾಜ್ ಹಿರೇಮಠ, ವಿಜಯಲಕ್ಷ್ಮೀ ಮನ್ನಿಮಟ್ಟ, ಆನಂದ ಮಡಿವಾಳರ ಮತ್ತು ಗಂಗಾಧರ ಮಡಿವಾಳರ ಆಯ್ಕೆಯಾಗಿರುತ್ತಾರೆ. 

ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಡಿ.ಬಿ. ನಾಯಕ ಅವರು, ಕುಲಸಚಿವರಾದ ಪ್ರೊ. ಚಂದ್ರಶೇಖರ ಅವರು, ಮೌಲ್ಯಮಾಪನ ಕುಲಸಚಿವರಾದ ಡಾ. ಎಂ.ಎನ್. ವೆಂಕಟೇಶ ಹಾಗೂ ವಿವಿಯ ಅಧ್ಯಾಪಕರು ವಿದ್ಯಾಥರ್ಿಗಳ ಈ ಸಾಧನೆಯನ್ನು ಶ್ಲಾಘಿಸಿದರು.