ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು: ಮುರಗೇಶ

Students can achieve anything if they have confidence: Muragesha

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು: ಮುರಗೇಶ

ರಾಣಿಬೆನ್ನೂರ 21: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ದೃಢಸಂಕಲ್ಪ ಛಲ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಆದಕಾರಣ ಎಂತಹ ಸಮಯದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು  ಶಿಕ್ಷಣ ಪ್ರೇಮಿ ಮುರಗೇಶ ಮಠದ ಹೇಳಿದರು.  

   ನಗರದ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಶನಿವಾರ ಪರಿಣಿತಿ ವಿದ್ಯಾ ಮಂದಿರ ಶಾಲೆಯ ವಾರ್ಷಿಕೋತ್ಸವ ಹಾಗೂ  ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

    ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ರಾಮಾಯಣದಲ್ಲಿ ಸೀತಾಪಹರಣ, ರಾಮ ಸೇತುವೆ ನಿರ್ಮಾಣ, ಹನುಮನು ಲಂಕೆಗೆ ಹಾರಿದ್ದು, ರಾಮ ರಾವಣರ ಯುದ್ಧವು, ಮಹಾಭಾರತದ ದೃಶ್ಯಗಳು, ನೃತ್ಯ, ವಿದ್ಯಾರ್ಥಿಗಳ ಹಳ್ಳಿಯ ಸೊಗಡಿನ ಬಟ್ಟೆಗಳು ಎಲ್ಲರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ಪಾಲಕರು ವಿದ್ಯಾರ್ಥಿಗಳು ಇದ್ದರು.  

ಫೋಟೊ:21ಆರ್‌ಎನ್‌ಆರ್11ರಾಣಿಬೆನ್ನೂರ: ನಗರದ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಶನಿವಾರ ಪರಿಣಿತಿ ವಿದ್ಯಾ ಮಂದಿರ ಶಾಲೆಯ ವಾರ್ಷಿಕೋತ್ಸವ ಹಾಗೂ  ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಿಕ್ಷಣ ಪ್ರೇಮಿ ಮುರಗೇಶ ಮಠದ ಉದ್ಘಾಟಿಸಿದರು.