ವಿದ್ಯಾಥರ್ಿಗಳು ಸೈಕಲ್ ಸದುಪಯೋಗಪಡಿಸಿಕೊಳ್ಳಿ: ಚನ್ನಪ್ಪ

ಲೋಕದರ್ಶನ ವರದಿ

ಕೊಪ್ಪಳ : ವಿದ್ಯಾಥರ್ಿಗಳು ಸರಕಾರವು ನೀಡಿದ ಸೈಕಲ್ನ್ನು ಸದುಪಯೋಗಪಡಿಸಿಕೊಂಡು ಎಲ್ಲಾರೂ ಉತ್ತಮವಾಗಿ ವಿದ್ಯಾಭ್ಯಾಸ ಮಾಡುವಂತೆ ನಗರಸಭೆ ಸದಸ್ಯ ಚನ್ನಪ್ಪ ಕೋಟಿಹಾಳ ಹೇಳಿದರು.

ಅವರು ಗುರುವಾರದಂದು ನಗರದ ಸರದಾರಗಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ವಿತರಣೆ ಮಾಡಿ ಮಾತನಾಡಿ ವಿದ್ಯಾಥರ್ಿಗಳು ಸಕಾಲಕ್ಕೆ ಶಾಲೆಗೆ ತಲುಪಲು ಸೈಕಲ್ ಸಹಾಯಕವಾಗಿದ್ದು ಯಾವ ವಿದ್ಯಾಥರ್ಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರಕಾರವು 8ನೇ ತರಗತಿ ಅಭ್ಯಾಸ ಮಾಡುವ ಎಲ್ಲಾ ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ನೀಡುತ್ತಿದ್ದು ಇದನ್ನು ವಿದ್ಯಾಥರ್ಿಗಳು ಮನೆಯ ಕೆಲಸ ಹಾಗೂ ಇತರಿಗೆ ನೀಡಿ ದುರಪಯೋಗ ಮಾಡದೇ ಸೈಕಲ್ ಸದುಪಯೋಗಪಡಿಸಿಕೊಂಡು ಶೈಕ್ಷಣೀಕ ಪ್ರಗತಿ ಹೊಂದಬೇಕು ಎಂದರು.

ಮುಖ್ಯ ಶಿಕ್ಷಕರಾದ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಮಾತನಾಡಿ ವಿದ್ಯಾಥರ್ಿಗಳು ಸರಕಾರದ ಯೋಜನೆಗಳನ್ನು ಸದುಪಯೋಗಪಡಿಕೊಂಡು ಸೈಕಲ್ನ್ನು ನಿತ್ಯ ಸ್ವಚ್ಛವಾಗಿ ಇಟ್ಟುಕೊಂಡು ವಾಹನಗಳ ದಟ್ಟನೆಯಿರುವ ರಸ್ತೆಗಳಲ್ಲಿ ನಿಧಾನವಾಗಿ ಸೈಕಲ್ ಚಲಾಯಿಸಿಕೊಂಡು ಬರುವಂತೆ ವಿದ್ಯಾಥರ್ಿಗಳಿಗೆ ತಿಳಿಸಿದರು.  

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಶಾ ಮುಖಂಡರಾದ ಪಾಶಾ, ಶಿಕ್ಷಕರಾದ ಮಂಜುನಾಥ ಬಿ. ಮಲ್ಲಪ್ಪ, ವೀರಪ್ಪ ಚೋಳಿನ್, ಬಸವರಾಜ್ ಎಚ್, ಸುಶೀಲಾ  ಶಿಕ್ಷಕವೃಂದ, ಪಾಲಕರು ವಾಡರ್ಿನ ಗುರು-ಹಿರಿಯರು ಉಪಸ್ಥಿತರಿದ್ದರು.