ಕಾಗವಾಡ 18: ಮಹಾಭಾರತದಲ್ಲಿ ಕೌರವರು ನೂರೊಂದು ಸಹೋದರರಿದ್ದರು. ಪಾಂಡವರು ಕೇವಲ ಐವರು ಸಹೋದರರಿದ್ದರೂ ಧರ್ಮಯುದ್ಧದಲ್ಲಿ ವಿಜಯ ಪಡೆದರು. ಏಕೆಂದರೆ, ಅವರಿಗೆ ಹಿಂದೆ ಧರ್ಮದರ್ಶಕನಾಗಿ 'ಕೃಷ್ಣ' ಇದ್ದದ್ದು ತಿಳಿದೇ ಇದೆ. ಕೃಷ್ಣನಿಗೆ ಧರ್ಮ ಮರುಸ್ಥಾಪನೆಯ ಸದುದ್ದೇಶವಿತ್ತೆಂದು ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಬಿ.ಎ.ಪಾಟೀಲ ಹೇಳಿದರು.
ಬುಧವಾರರಂದು ಶಿವಾನಂದ ಮಹಾವಿದ್ಯಾಲಯದಲ್ಲಿ ಬಿ.ಎ. ಬಿ.ಕಾಂ. ಬಿ.ಬಿ.ಎ ಮತ್ತು ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಗಳ ಬೀಳ್ಕೊಡುವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ದುರುದ್ದೇಶವಿದ್ದರೆ ಎನನ್ನೂ ಸಾಧಿಸಲಾಗದು. ಶಿವಾನಂದ ಮಹಾವಿದ್ಯಾಲಯವು ಮಹಾನ್ ತಪಸ್ವಿ ಮಲ್ಲಿಕಾಜರ್ುನ ಸ್ವಾಮೀಜಿಯವರಿಂದ ಸ್ಥಾಪಿಸಲ್ಪಟ್ಟಿದೆ. ಗ್ರಾಮೀಣ ವಿದ್ಯಾಥರ್ಿಗಳಿಗೆ ಉನ್ನತ ಶಿಕ್ಷಣದ ಸೌಲಭ್ಯ ದೊರೆಯಬೇಕೆಂಬ ಸಮಾಜೋದ್ಧಾರದ ಕಾಳಜಿಯಿತ್ತು. ಮನೆಮನೆಯಿಂದ ಕಾಳು-ಧಾನ್ಯ ಸಂಗ್ರಹಿಸಿ ಈ ಕಾಲೇಜು ಸ್ಥಾಪನೆಗೊಂಡಿದೆ. ಇಲ್ಲಿ ಉತ್ತಮ ಸಂಸ್ಕಾರವಿದೆ. ಇಲ್ಲಿಯ ವಿದ್ಯಾಥರ್ಿಗಳು ಸುದೈವಿಗಳೆಂದು ಹೇಳಿದರು.
ಪ್ರೊ.ಎಸ್.ಎಸ್.ಬಾಗನೆ ಮಾತನಾಡಿ, ಈ ಮಹಾವಿದ್ಯಾಲಯದ ವಿದ್ಯಾಥರ್ಿಗಳಿಗೆ ಹಲವಾರು ಪ್ರಯೋಜನಗಳಿದ್ದು, ನಗರ ಪ್ರಾದೇಶಿಕ ಕಾಲೇಜುಗಳಂತಹ ಸೌಲಭ್ಯಗಳು ಲಭ್ಯವಾಗಿವೆ. ನುರಿತ ಪರಿಣಿತ ಪ್ರಾಧ್ಯಾಪಕರು ಮತ್ತು ಹಲವಾರು ಮೂಲಭೂತ ಸೌಕರ್ಯಗಳನ್ನು ಈ ಕಾಲೇಜು ನೀಡಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮನ್ವಯತೆ ಸಾಧಿಸಿ ವಿದ್ಯಾಥರ್ಿಗಳ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಹೆಸರು ಗಳಿಸಿದೆಯಂದು ಹೇಳಿದರು.
ಉಪಪ್ರಾಚಾರ್ಯ ಡಾ.ಎಸ್.ಓ.ಹಲಸಗಿ ಮಾತನಾಡಿ, ಗುರು-ಶಿಷ್ಯರ ಸಮ್ಮಿಳನಗೊಳ್ಳಬೇಕಾದರೆ ಋಣವಿರಬೇಕು ಮತ್ತು ಅದು ವಿಧಿಲಿಖಿತವಾಗಿರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ಪ್ರಾಚಾರ್ಯ ಡಾ.ಜಿ.ಜಿ.ಕರಲಟ್ಟಿ ವಹಿಸಿದರು. ಹಾಲಿನ ಜೊತೆ ಬೆರೆತ ನೀರು ಕೂಡಾ ಹಾಲಾಗುತ್ತದೆ. ಹಾಗೆಯೇ ಗುಣವಂತರ ಆಶ್ರಯ ಪಡೆದ ಗುಣಹೀನನೂ ಸಹ ಗುಣವಂತರಾಗುತ್ತಾರೆ. ಅದಕ್ಕಾಗಿ ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂದರು.
ಪ್ರೊ.ಟಿ.ಆರ್. ದರೇಕರ ಸ್ವಾಗತಿಸಿದರು. ಪ್ರೊ.ವಿಶಾಲ ಬುಲರ್ೆ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಜೆ.ಕೆ.ಪಾಟೀಲ ವಂದಿಸಿದರು.