ಧಾರವಾಡ, 28: ವಿದ್ಯಾಥರ್ಿಗಳನ್ನು ಜಾತಿ, ಧರ್ಮ, ಲಿಂಗ, ಭಾಷೆ, ಗಡಿ ಮುಂತಾದ ಸಂಕೀರ್ಣ ಸಂಗತಿಗಳಿಂದ ಮುಕ್ತಗೊಳಿಸಿ ವೈಚಾರಿಕ ಮುಕ್ತ ನೆಲೆಯಲ್ಲಿ ಜೀವನ ಮೌಲ್ಯಗಳ ಬದ್ಧತೆಯೊಂದಿಗೆ ಸದೃಢ ರಾಷ್ಟ್ರ ಕಟ್ಟುವ ಶ್ರೇಷ್ಠ ವಿದ್ಯಾಥರ್ಿ ಸಮೂಹ ನಿಮರ್ಿಸಲು ಶಿಕ್ಷಕರು ಶ್ರಮಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಕರೆ ನೀಡಿದರು.
ಅವರು ಮಂಗಳವಾರ ನಗರದ ಕ.ವಿ.ವಿ. ಶಿಕ್ಷಣ ಮಹಾವಿದ್ಯಾಲಯದ ವಿದ್ಯಾಥರ್ಿ ಒಕ್ಕೂಟದ ವಾಷರ್ಿಕೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು. ಕೇವಲ ತರಗತಿಗಳಲ್ಲಿ ಅವಧಿಗೆ ಅನುಗುಣವಾಗಿ ಪಠ್ಯವನ್ನು ಅವಲಂಬಿಸಿ ಪಾಠ ಮಾಡುವುದಷ್ಟೇ ಶಿಕ್ಷಕರ ಕೆಲಸವಲ್ಲ. ಬದಲಾಗಿ ಪ್ರತಿಯೊಬ್ಬ ವಿದ್ಯಾಥರ್ಿಯಲ್ಲಿ ಹುದುಗಿರುವ ಹಲವಾರು ಸುಪ್ತ ಶಕ್ತಿಗಳನ್ನು ಜಾಗೃತಗೊಳಿಸಿ ಅವು ವಿಶ್ವವ್ಯಾಪಕವಾಗಿ ಬೆಳಗುವಂತೆ ಸೂಕ್ತ ಮಾರ್ಗದರ್ಶನ ಮಡುವುದು ಶಿಕ್ಷಕರ ಪರಮ ಕರ್ತವ್ಯವಾಗಿದೆ ಎಂದರು.
ನಿರಂತರ ಓದಿ: ಶಿಕ್ಷಕರಾಗಲು ಬಿ.ಇಡಿ. ಹಾಗೂ ಟಿ.ಇ.ಟಿ. ತೇರ್ಗಡೆಯಾಗುವುದು ಕಡ್ಡಾಯ. ಇಷ್ಟಕ್ಕೇ ಅಧ್ಯಯನದ ಹಸಿವು ನಿಲ್ಲಬಾರದು. ಪ್ರತೀ ವಾರಕ್ಕೊಂದು ಹೊಸ ಚಿಂತನೆಯ ಓದು ನಿಮ್ಮದಾಗಬೇಕು. ದೇಹದಲ್ಲಿ ಉಸಿರು ಇರುವವರೆಗೂ ಹೊಸ ಓದಿಗೆ ಶಿಕ್ಷಕರಾದವರು ನಿತ್ಯವೂ ತೆರೆದುಕೊಳ್ಳಬೇಕು.
ವಿಶ್ವವೇ ಅಂಗೈಯಲ್ಲಿ ವಿಜೃಂಭಿಸುತ್ತಿರುವ ಇಂದಿನ ಕಾಲಘಟ್ಟದ ತಂತ್ರಜ್ಞಾನದ ಎಲ್ಲ ಆವಿಷ್ಕಾರಗಳನ್ನು ಅರಿತುಕೊಂಡು ಅವುಗಳನ್ನು ತಮ್ಮ ತರಗತಿ ಬೋಧನೆಗೆ ಬಳಸಿಕೊಳ್ಳುವಲ್ಲಿ ಅಧ್ಯಾಪಕರಾಗುವವರೆಲ್ಲರೂ ವಿಶೇಷವಾದ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆಯ ಹಿರಿಮೆ, ಉನ್ನತ ಭಾಷಾ ಪ್ರಭುತ್ವ, ಶ್ರೇಷ್ಠ ಬೋಧನಾ ಕೌಶಲಗಳನ್ನು ಪ್ರಶ್ನಾತೀತವಾಗಿ ಅರಿತುಕೊಂಡಾಗ ಹಳ್ಳಿಯಿಂದ ದಿಲ್ಲಿಯವರೆಗೂ ಶಿಕ್ಷಕ ವೃತ್ತಿಗೆ ತನ್ನದೇ ಆದ ಘನತೆ ಮತ್ತು ವ್ಯಾಪಕ ಬೇಡಿಕೆ ಇಂದು ಲಭ್ಯವಿದೆ ಎಂದರು.
ಪ್ರಶಿಕ್ಷಣ (ಟೀಚರ್ ಎಜ್ಯೂಕೇಷನ್) ಬಲಗೊಳ್ಳಬೇಕೆಂಬ ವಿಚಾರಗಳ ಅಡಿಯಲ್ಲಿ ರಾಷ್ಟ್ರೀಯ ಪ್ರಶಿಕ್ಷಣ ಪರಿಷತ್ತು (ಎನ್ಸಿಟಿಇ) ರಚನೆಯಾದಾಗಿನಿಂದ ಶಾಲಾ ಶಿಕ್ಷಣ ಬೋಧನೆಯ ಎಲ್ಲ ರೀತಿಯ ಶಿಕ್ಷಕರ ಶಿಕ್ಷಣದ ತರಬೇತಿಗಳಿಗೆ ನಿದರ್ಿಷ್ಟತೆ ಪ್ರಾಪ್ತವಾಗಿದೆ. ತಾತ್ವಿಕ, ತಾಕರ್ಿಕ, ವೈಚಾರಿಕ, ವಿಧಾಯಕ, ವೈಜ್ಞಾನಿಕವಾದ ಉನ್ನತ ಬೆಳವಣಿಗೆಗಗಳ ಸಂಗತಿಗಳನ್ನು ಅರಿತಾಗ ವಹಿಸಿಕೊಳ್ಳುವ ಶಿಕ್ಷಕ ವೃತ್ತಿಯನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದೂ ಮೇಜರ್ ಹಿರೇಮಠ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಡಾ. ಪ್ರಭಾ ಗುಡ್ಡದಾನ್ವೇರಿ ಮಾತನಾಡಿ, ಕೇವಲ ಶಿಕ್ಷಕರಾಗುವದಷ್ಟೇ ಬಿ.ಇಡಿ. ತರಬೆೇತಿಯ ಗುರಿಯಲ್ಲ. ಮಹೋನ್ನತ ವ್ಯಕ್ತಿತ್ವ ಸಂಪಾದನೆಯ ಹಂಬಲ ಎಲ್ಲರಲ್ಲಿ ಇರಲಿ. ಶಿಕ್ಷಕ ವೃತ್ತಿಯಲ್ಲಿರುವವರು ಅರಿತು ಬೋಧಿಸಲು ನಿತ್ಯವೂ ಆಸಕ್ತಿಯನ್ನು ಹೊಂದಿದಾಗ ತರಗತಿ ಬೋಧನೆ ಪರಿಣಾಮಕಾರಿಯಾಗುತ್ತದೆ ಎಂದರು.
ವಿದ್ಯಾಥರ್ಿ ಒಕ್ಕೂಟದ ಚೇರಮನ್ ಡಾ. ಶಹತಾಜ ಬೇಗಂ, ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ. ಸುರೇಶ ಸಮ್ಮಸಗಿ, ಡಾ. ರಮೇಶ ನಾಯಕ, ಡಾ. ನಾಗರಾಜ ತಳವಾರ, ವಿದ್ಯಾಥರ್ಿ ಒಕ್ಕೂಟದ ಪ್ರಧಾನ ಕಾರ್ಯದಶರ್ಿಗಳಾದ ಎಂ. ಶಶಿಧರ ಹಾಗೂ ಬಸವರಾಜ ಕುಂಬಾರ, ವಿವಿಧ ವಿಭಾಗಗಳ ಕಾರ್ಯದಶರ್ಿಗಳಾದ ನಾಗವೇಣಿ ಪಾಟೀಲ, ತಿಮ್ಮಣ್ಣ, ಮಹಾಲಕ್ಷ್ಮಿ ಯರಗಂಬಳಿಮಠ, ಅಂಜುಮ್ ಹುಲಕೋಟಿ, ಎಂ. ಶೇಖರಪ್ಪ, ಶರಣಪ್ಪ ಗೌಡ್ರ, ಬಿ.ಎಂ. ಕುಂಬಾರ, ಬಸವರಾಜ ನೇಕಾರ, ಸಿ.ಎನ್. ದೇವರಾಜ, ಮೋಹಿದ್ದೀನ್ ಖಾಜಿ, ಪ್ರಿಯಾಂಕಾ ಗುಮ್ಮಗೋಳ, ಪ್ರತಿಭಾ ಕರಿಹೊಳಿ ಇದ್ದರು.
ರಶ್ಮಿ ಹುಣಸಿಕಟ್ಟಿ ಸ್ವಾಗತಿಸಿದರು. ಚಂದ್ರಶೇಕರ ಲಮಾಣಿ ವರದಿ ಓದಿದರು. ರೂಪಾ ಗಂಗಮ್ಮನವರ ನಿರೂಪಿಸಿದರು. ಪುಷ್ಪಾ ಮದುರಡ್ಡಿ ವಂದಿಸಿದರು.