ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ : ಅಧ್ಯಕ್ಷ ಭಟ್ಟ ಪ್ರಸಾದ್

Striving for all-round development of the town: President Bhatta Prasad

ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ : ಅಧ್ಯಕ್ಷ ಭಟ್ಟ ಪ್ರಸಾದ್ 

ಕಂಪ್ಲಿ 27: ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು. ಪಟ್ಟಣದ ಗ್ರಾಮ ದೇವತೆ ಶ್ರೀ ಮಾರೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮುಖಂಡರಿಂದ ಸನ್ಮಾನಿಸಿ ಸ್ವೀಕರಿಸಿ ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ಪುರಸಭೆ ಸದಸ್ಯರ ಸಹಕಾರದೊಂದಿಗೆ ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿ ಕುಡಿಯುವ ನೀರು, ಬೀದಿ ದೀಪ, ರಸ್ತೆ ಸೇರಿದಂತೆ ನಾನಾ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.  

ಇಲ್ಲಿನ ನೂತನ ಅಧ್ಯಕ್ಷ ಭಟ್ಟ ಪ್ರಸಾದ್ ಮತ್ತು ಉಪಾಧ್ಯಕ್ಷೆ ಸುಶೀಲಮ್ಮ ಇವರಿಗೆ ಸನ್ನಾನಿಸಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಎನ್‌.ಗೋಪಾಲ, ಎನ್‌.ನಾಗರಾಜ, ದಮ್ಮೂರು ವಿರೇಶ, ಪಕ್ಕೀರ​‍್ಪ, ಎಂ.ರಾಮಪ್ಪ, ದ್ಯಾವಣ್ಣ, ವೆಂಕಟಪತಿ, ಗೋವಿಂದ, ವೆಂಕಟರಮಣ, ಎನ್‌.ಸೋಮಪ್ಪ, ವೆಂಕಟೇಶ, ಸುಧಾಕರ ಸೇರಿದಂತೆ ಇತರರು ಇದ್ದರು.