ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳ ಈಡೇರಕೆಗಾಗಿ ಮುಷ್ಕರ

Strike for the issues of village administrative officers and fulfillment of various demands

ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳ ಈಡೇರಕೆಗಾಗಿ ಮುಷ್ಕರ 

ಮೂಡಲಗಿ  11: ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳ ಈಡೇರಕೆಗಾಗಿ ಕರ್ನಾಟಕ ರಾಜ್ಯ ಗ್ರಾಮ ಆಡಳಿ ಅಧಿಕಾರಿಗಳ  ಮೂಡಲಗಿ  ತಾಲೂಕಾ  ಘಟಕದ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ಸೋಮವಾರ ಎರಡನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದರು.  

ಈ ಸಮಯದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮೂಡಲಗಿ ತಾಲೂಕಾ ಅಧ್ಯಕ್ಷ ಎಂ. ಬಿ. ಶೀಗಿಹೊಳಿ ಮಾತನಾಡಿ,    ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಗಳ  ಕೇಂದ್ರ ಸಂಘದ ವತಿಯಿಂದ ಸಪ್ಟಂಬರ 2024 ರಲ್ಲಿ ನಡೆಸಿದ ಮುಷ್ಕರ ಸಂಧರ್ಭದಲ್ಲಿ ಭರವಸೆ ನೀಡಿದ  ಬೇಡಿಕೆಗಳನ್ನು ಈಡೇರಿಸದಿರುವದರಿಂದ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು  ಆಗ್ರಹಿಸಿ  ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವುದಾಗಿ ಹೇಳಿದರು.  

ಈ ಸಮಯದಲ್ಲಿ ಸಂಘಟನೆ ಉಪಾಧ್ಯಕ್ಷೆ ಭಾರತಿ ಕಾಳಿ, ಗೌರವಾಧ್ಯಕ್ಷ ಎ. ಎಸ್‌. ಲಾಡಖಾನ, ಪ್ರಧಾನ ಕಾರ್ಯದರ್ಶಿ ಎಸ್‌. ಎನ್‌. ಕೊಣ್ಣೂರ, ಖಜಾಂಚಿ ಎಫ್‌. ಎಚ್‌. ಫತ್ತೆಖಾನ, ನಿರ್ದೇಶಕರಾದ ಎಸ್‌. ಬಿ. ತುಪ್ಪದ, ಎಚ್‌. ಎಲ್‌. ಬೆಳ್ಳಿಕೇರಿ, ಎಂ. ಎಚ್‌. ಹೊಳ್ಕರ, ಎಂ. ಎ. ಮುಲ್ಲಾ, ಜಿ. ಬಿ. ಮುತ್ತೆಪ್ಪಗೋಳ, ಕೆ. ಆರ್‌. ಭಾಸಗಿ, ಕರಿಷ್ಮಾ ನದಾಫ್, ಸುರೇಖಾ ಈರಕರ ಮತ್ತು ಕೇದಾರಿ ಭಸ್ಮೆ, ಎ.ಎಸ್‌.ಬಾಗವಾನ ಮತ್ತಿತರರು ಮುಸ್ಕರದಲ್ಲಿ ಭಾಗವಹಿಸಿದರು.  

ದಲಿತ ಸಂಘಟನೆಯಿಂದ ಬೆಂಬಲ: ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ತಾಲೂಕಿನ  ದಲಿತ ಸಂಘಟನೆಯ ಮುಖಂಡರಾದ ಸತ್ಯೆಪ್ಪ ಕರವಾಡಿ, ರಮೇಶ ಮಾದರ, ಎಬಿನೇಜರ್ ಕರಬನ್ನವರ, ಪ್ರಭಾಕರ ಮಂಟೂರ ಮತ್ತಿತರರು ಭಾಘವಹಿಸಿ ಬೆಂಬಲ ಸೂಚಿಸಿದರು.